ರಾಮನಗರ, ಮೇ.೦೪:
ಸಚಿವ ಅಶ್ವತ್ಥನಾರಾಯಣ ಕರ್ನಾಟಕ ಕಂಡಂತಹ ಅತ್ಯಂತ ಭ್ರಷ್ಟ ರಾಜಕಾರಣಿಗಳಲ್ಲಿ ಒಬ್ಬರು. ಆದರೂ ನಾನು ಬ್ರಾಹ್ಮಣನ ಥರ ಇದ್ದೇನೆ, ಶುದ್ಧ ರಾಜಕಾರಣಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.
ಕನಕಪುರದಲ್ಲಿ ಬುಧವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ’ ರಾಜ್ಯಕ್ಕೆ ಅಮಿತ್ ಶಾ ಬಂದರು ಎಂಬ ಕಾರಣಕ್ಕೆ ನಾವು ಅವರನ್ನು ಟಾರ್ಗೆಟ್ ಮಾಡಿಲ್ಲ. ಸತ್ಯ ಜನರ ಮುಂದೆ ಇಟ್ಟಿದ್ದೇವೆ. ನಮ್ಮ ವಿರುದ್ಧ ಏನು ಬೇಕಾದರೂ ತನಿಖೆ ಮಾಡಲಿ. ಅದನ್ನೆಲ್ಲ ಎದುರಿಸಲು ಸಿದ್ಧರಿದ್ದೇವೆ’ ಎಂದರು.
ಬಿಜೆಪಿ ಮಂತ್ರಿಗಳಿಂದಲೇ ಅಶ್ವತ್ಥನಾರಾಯಣ ವಿರುದ್ಧ ಷಡ್ಯಂತ್ರ ನಡದಿದೆ ಎಂಬ ಕುಮಾರಸ್ವಾಮಿ ಆರೋಪಗಳ ಕುರಿತು ಪ್ರತಿಕ್ರಿಯಿಸಿ ’ ಪಕ್ಕದ ಮನೆಯಲ್ಲಿ ಇದ್ದವರೇ ಕಲ್ಲು ಹೊಡೆಯುವುದು ಸಹಜ. ಬಹುತೇಕ ಸಂದರ್ಭ ದಲ್ಲಿ ಹತ್ತಿರ ಇದ್ದವರೇ ಮಾಹಿತಿ ನೀಡುತ್ತಾರೆ. ಹೀಗಾಗಿ ಈ ಆರೋಪ ನಿಜ ಇದ್ದರೂ ಇರಬಹುದು’ ಎಂದರು.