ಶಿವಮೊಗ್ಗ, ಮೇ.೦೨:
ಆಟೋ ಚಾಲಕರ ಕಲ್ಯಾಣಕ್ಕಾಗಿ ನಗರದಲ್ಲಿ ಕನ್ನಡಿ ಗರ ಆಟೋ ಚಾಲಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಗೋಪಾಲಗೌಡ ಬಡಾವಣೆಯ ಸಿ-ಬ್ಲಾಕ್ ನಲ್ಲಿರುವ ಸಂಘದ ಕಚೇರಿಯಲ್ಲಿ ನಾಳೆ ಉದ್ಘಾಟನೆ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಯಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ನಾಡು, ನುಡಿ, ಜಲಕ್ಕೆ ಸಂಬಂಧಿಸಿದಂತೆ ಸಂಘ ಪ್ರತಿಕ್ರಿಯೆ ನೀಡಲಿದೆ. ಇದರ ಜೊತೆಗೆ ಚಾಲಕರ ವಿವಿಧ ಸಮಸ್ಯೆಗಳು, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಕನ್ನಡಿಗರ ಆಟೋ ಚಾಲಕರ ಸಂಘ ಕಾರ್ಯ ನಿರ್ವಹಿಸಲಿದೆ ಎಂದರು.
ಕೋವಿಡ್ ಸಮಯದಲ್ಲಿ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಸರ್ಕಾರದಿಂದ ಸೂಕ್ತ ನೆರವು ಕೂಡ ಸಿಗಲಿಲ್ಲ. ಅನೇಕರು ಆಟೋ ಚಾಲಕರಾಗಿದ್ದರೂ ಕೂಡ ಅವರಿಗೆ ಗುರುತಿನ ಕಾರ್ಡ್ ಇಲ್ಲದೇ ಇರುವುದ ರಿಂದ ಪರಿಹಾರ ಪಡೆಯಲು ವಂಚಿತರಾದರು. ವೈದ್ಯ ಕೀಯ ಸೌಲಭ್ಯ, ವಿಮಾ ಸೌಲಭ್ಯ ಸೇರಿದಂತೆ, ಆಕಸ್ಮಿಕ ಅವಘಡಗಳಿದ ಮೃತಪಟ್ಟರೆ ಸಿಗಬೇಕು. ಈ ಎಲ್ಲ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡಲಿದೆ ಎಂದರು.


ನಗರದಲ್ಲಿ ಸ್ಮಾರ್ಟ್ ಸಿಟಿ ಕೆಲಸ ನಡೆಯುತ್ತಿರು ವುದರಿಂದ ಅನೇಕ ಆಟೋ ನಿಲ್ದಾಣಗಳು ಇಲ್ಲದಂತಾ ಗಿದೆ. ರಸ್ತೆಗಳಲ್ಲಿಯೇ ಆಟೋ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ಆಟೋ ಚಾಲಕರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.


ನಗರದ ಆಟೋ ಚಾಲಕರು ಸಂಘದ ಸದಸ್ಯತ್ವ ಪಡೆಯಬೇಕು. ಈಗಾಗಲೇ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘದ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಪಂಚಾಕ್ಷರಿ, ಉಪಾಧ್ಯಕ್ಷರಾದಜಿ.ಆರ್. ಸತೀಶ್, ಬಿ.ಹೆಚ್. ಗೋಪಿ, ಉಮೇಶ್, ಪ್ರಧಾನ ಕಾರ್ಯದರ್ಶಿ ಎಂ.ರಾಜು, ಖಜಾಂಚಿ ಫ್ರಫುಲ್ಲಚಂದ್ರ, ಸಂಘಟನಾ ಕಾರ್ಯದರ್ಶಿ ಸಿ.ಹರೀಶ್, ನಿರ್ದೇಶಕ ಜೆ. ವಿಶ್ವನಾಥ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!