ಶಿವಮೊಗ್ಗ, ಜ.28:
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಬೀದಿಯ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವ ಹಾಗೂ ರೇಬಿಸ್ ಲಸಿಕೆ ನೀಡುವ ಕಾರ್ಯವನ್ನು ಮಹಾನಗರ ಪಾಲಿಕೆ ಆರೋಗ್ಯ ವಿಭಾಗ ಶಿವಮೊಗ್ಗ ನಗರದಾದ್ಯಂತ ಮಾಡುತ್ತಿದೆ.
ಶಿವಮೊಗ್ಗ ಗೋಪಾಳ, ಮಿಳಘಟ್ಟ, ಶಾಂತಿನಗರ ಸೇರಿದಂತೆ ಬಹುತೇಕ ಕಡೆ ಈ ಪ್ರಕ್ರಿಯೆ ನಡೆಸಿರುವ ಪಾಲಿಕೆಯ ಡಾ. ರೇಖಾ ಅವರ ನೇತೃತ್ವದ ತಂಡ ನಿನ್ನೆ ಹಾಗೂ ಇಂದು ಸೋಮಿನಕೊಪ್ಪ ರಸ್ತೆಯಲ್ಲಿ ಈ ಬೇಟೆ ನಡೆಸುತ್ತಿದೆ.
ಬೀದಿ ನಾಯಿಗಳನ್ನು ಹಿಡಿಯುವ ನುರಿತ ಯುವಕರ ತಂಡದೊಂದಿಗೆ ಪಾಲಿಕೆ ಈ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಹಾಗೆಯೇ ಕೆಲವೆಡೆ ಬೀದಿ ನಾಯಿಗಳನ್ನು ಹಿಡಿಯಲು ಸಾರ್ವಜನಿಕರು ಬಿಡುತ್ತಿಲ್ಲ ಎನ್ನಲಾಗಿದೆ.