73 ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ನಗರದ ಗೋಪಾಳದದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಧ್ವಜರೋಹಣ ನೆರವೇರಿಸಲಾಯಿತು. ಭಾರತೀಯ ಸೈನ್ಯದಲ್ಲಿ ಕಾರ್ಗಿಲ್ ನಲ್ಲಿಯೂ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿರುವ ಸಂದೀಪ್ ಎಂ.ಎಲ್. ಅವರು ಧ್ವಜರೋಹಣ ನೆರವೇರಿಸಿ, ದೇಶಾಭಿಮಾನದ ಕುರಿತಂತೆ ಮಾತನಾಡಿದರು. ಈ ವೇಳೆ ಸಂಸ್ಥೆ ಅಧ್ಯಕ್ಷರಾದ ಡಾ. ನಾಗೇಶ್, ಸಂಸ್ಥೆ ಕಾರ್ಯದರ್ಶಿ, ಶೋಭಾ ವೆಂಕಟರಮಣ, ಮುಖ್ಯಶಿಕ್ಷಕರಾದ ತೀರ್ಥೇಶ್, ಗಜೇಂದ್ರನಾಥ್ ಮಾಳೋದೆ ಮತ್ತು ವಿದ್ಯಾರ್ಥಿಗಳಿದ್ದರು.
ಕೋಟೆ ರಸ್ತೆಯ ವಿದ್ಯಾರ್ಥಿಗಳು ಸೈಕಲ್ ಜಾಥದ ಮೂಲಕ ಗಣ ರಾಜ್ಯೋತ್ಸವ ಅಚರಣೆ ಮಾಡಿದರು. ಚಿತ್ರದಲ್ಲಿ ವಾಸವಿ ಶಾಲೆಯ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಅಧ್ಯಕ್ಷ ಎಸ್.ಎಸ್.ವಾಗೇಶ್, ಸಂಸ್ಕೃತ ಭಾರತಿ ಟ.ವಿ.ನರಸಿಂಹ ಮೂರ್ತಿ, ಶ್ಯಾಮ್ ಸುಂದರ್, ಸ್ವರೂಪ್ ಕಾಣಬಹುದು.
ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಇಂದು 73 ನೇ ಗಣ ರಾಜ್ಯೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಸದಸ್ಯರಾದ ಸುರೇಖಾ ಮುರಳೀಧರ್, ಸುವರ್ಣಾ ಶಂಕರ್, ಪ್ರಭು, ಹೇಮಂತ್ ಕುಮಾರ್, ಆಯುಕ್ತ ಚಿದಾನಂದ ವಠಾರೆ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಾರಪ್ಪ ಮೊದಲಾದವರಿದ್ದರು.
ಶಿವಮೊಗ್ಗ: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿಂದು 73 ನೇ ಗಣ ರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರಾಮಕೃಷ್ಣ, ಶ್ಯಾಮ್, ನಾಗರಾಜ್ ಕಂಕಾರಿ, ರಾಜಮ್ಮ, ನರಸಿಂಹ ಗಂಧದಮನೆ, ಪಂಚಾಕ್ಷರಿ, ವಾಜಿದ್ ಮೊದಲಾದವರಿದ್ದರು.
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು 73 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಸೇವಾದಳದ ಅಧ್ಯಕ್ಷರಾದ ವೈ ಹೆಚ್ ನಾಗರಾಜ್, ಸತ್ಯನಾರಾಯಣ್, ಚಂದ್ರಭೂಪಾಲ್, ಎಸ್ ಪಿ ಶೇಷಾದ್ರಿ, ಯಮುನಾ ರಂಗೇಗೌಡ, ಸೌಗಂಧಿಕಾ, ಚಂದ್ರಶೇಖರ್, ಮಾರ್ಟಿಸ್, ಸುವರ್ಣಾ, ಪುಷ್ಪ, ತಬಸ್ಸುಮ್, ಕವಿತಾ, ರೇಷ್ಮಾ ಮೊದಲಾದವರಿದ್ದರು.
ಶಿವಮೊಗ್ಗ: ಇಂದು 73ನೇ ಗಣರಾಜ್ಯೋತ್ಸವವನ್ನು ಶಿವಮೊಗ್ಗ ನಗರದ ದ್ರೌಪದಮ್ಮ ಸರ್ಕಲ್ ನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಜಯಕರ್ನಾಟಕ ಮಹಿಳಾ ಘಟಕದ ಅಧ್ಯಕ್ಷರಾದ ನಾಜಿಮಾ ರವರ ಉಪಸ್ಥಿತಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾ ಎನ್. ಶೆಟ್ಟಿ, ಕಾರ್ಯದರ್ಶಿ ಆಶಾ ಮಹಿಳಾ ಮುಖಂಡರು ಪ್ರತಿಭಾ ಶಾಲೆಯ ಮುಖ್ಯ ಶಿಕ್ಷಕಿ ರುಕ್ಮಿಣಿ, ಸಹ ಶಿಕ್ಷಕಿ ಭಾಗಿರತಿ, ಎಸ್ಡಿಎಂಸಿ ಅಧ್ಯಕ್ಷ ಅಮೀರ್ ಪಾಷಾ, ರೌಂಡ್ ಟೇಬಲ್ ಮುಖಂಡರು ಹಾಗೂ ಶಿಕ್ಷಣ ಇಲಾಖೆಯ ಭುಜಂಗ, ಸರೋಜಾ ಉಪಸ್ಥಿತರಿದ್ದರು.
ಗಮಕ ಕಲಾವಿದ ಹೆಚ್.ಆರ್. ಕೇಶವಮೂರ್ತಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ
ಶಿವಮೊಗ್ಗ:
ಖ್ಯಾತ ಗಮಕ ಕಲಾವಿದ ಹೆಚ್.ಆರ್. ಕೇಶವಮೂರ್ತಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಶಿವಮೊಗ್ಗದ ಹೊಸಹಳ್ಳಿ ಗ್ರಾಮದವರಾದ ಕೇಶವಮೂರ್ತಿ ಗಮಕ ಕಲೆಗೆ ತಮ್ಮ ಜೀವನ ಮುಡಿಪಾಗಿಸಿದ್ದಾರೆ. ಇವರ ಗಮಕ ಶೈಲಿಯು ಕೇಶವಮೂರ್ತಿ ಘರಾನಾ ಎಂದೇ ಖ್ಯಾತವಾಗಿತ್ತು. ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಗಮಕ ಕಲೆ ಕಲಿಸಿ ಗಮಕ ಕಲೆಯ ಉಳಿವಿಗೆ ಮತ್ತು ಅದನ್ನು ಬೆಳೆಸಲು ಕಾರಣಕರ್ತರಾಗಿ ಮಾದರಿಯಾಗಿದ್ದರು. ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಜಿಲ್ಲೆಯ ಹೆಮ್ಮೆಯ ವಿಷಯವಾಗಿದೆ.ಹೊಸಳ್ಳಿ. ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಮ್ಮ ದಂಪತಿ ಪುತ್ರ. 1934ರ 22 ಫೆಬ್ರವರಿಯಲ್ಲಿ ಜನಿಸಿದ್ದ ಅವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ, ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾಗಿದ್ದರು.16ನೇ ವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು. 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಶಿವಮೊಗ್ಗ: ನೂತನವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಆಗಮಿಸಿದ ಕೆ.ಸಿ. ನಾರಾಯಣಗೌಡ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್. ರುದ್ರೇಗೌಡ, ಮೇಯರ್ ಸುನಿತಾ ಅಣ್ಣಪ್ಪ, ಎಸ್. ದತ್ತಾತ್ರಿ, ಶಿವರಾಜ್, ಚನ್ನಬಸಪ್ಪ ಮೊದಲಾದವರಿದ್ದರು.
ಹೊಸನಗರ ತಾಲ್ಲೂಕಿನ ಬೆಳ್ಳೂರು ಕ್ಲಸ್ಟರ್ ವ್ಯಾಪ್ತಿಯ ಮಸ್ಕಾನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಮಹೇಶ ಕೆ ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಗುರುರಾಜ್ ಸೇರಿದಂತೆ ಪೋಷಕರು ಮಕ್ಕಳು ಉಪಸ್ಥಿತರಿದ್ದರು.