ಶಿವಮೊಗ್ಗ : ಅಫರ್ಡ್ಪ್ಲಾನ್ ಸ್ವಾಸ್ಥ್ ಮತ್ತು ಎನ್ ಯು ಹಾಸ್ಪಿಟಲ್ಸ್ ಆರೋಗ್ಯಸೇವಾ ಉಳಿತಾಯ ಕಾರ್ಡ್ಗೆ ತಮ್ಮ ಸಹಯೋಗ ಪ್ರಕಟಿಸಿದ್ದು ಎನ್ಯು ಆಸ್ಪತ್ರೆ ಸೇವೆಗಳನ್ನು ಹೆಚ್ಚು ರೋಗಿಗಳ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡುತ್ತದೆ. ಅಫರ್ಡ್ಪ್ಲಾನ್ ಸ್ವಾಸ್ಥ್ ಕಾರ್ಡ್ ಗ್ರಾಹಕರಿಗೆ ಎನ್ಯು ಆಸ್ಪತ್ರೆಗಳಲ್ಲಿ ಎಲ್ಲ ಸೇವೆಗಳು ಹಾಗೂ ಹಣಕಾಸು ಪ್ರಯೋಜನಗಳನ್ನು ಪಡೆಯಲು ನೆರವಾಗುತ್ತದೆ ಮತ್ತು ಅವರ ಇಡೀ ಕುಟುಂಬಕ್ಕೆ ಸಂಪೂರ್ಣ ಶ್ರೇಣಿಯ ಆರೋಗ್ಯಸೇವಾ ಆಯ್ಕೆಗಳನ್ನು ನೀಡುತ್ತವೆ. ಈ ಕಾರ್ಡ್ ಅನ್ನು ಬೆಂಗಳೂರು, ಶಿವಮೊಗ್ಗ ಮತ್ತು ಅಂಬೂರಿನ ಎಲ್ಲ ಶಾಖೆಗಳಲ್ಲೂ ಸುಲಭವಾಗಿ ಬಳಸಬಹುದು.
ಅಫರ್ಡ್ಪ್ಲಾನ್ ಸ್ವಾಸ್ಥ್ ಯೆಸ್ ಬ್ಯಾಂಕ್ ಪ್ರಿಪೇಯ್ಡ್ ಕಾರ್ಡ್ ಆಗಿದು ಅದು ಒಪಿಡಿ(ಔಟ್ಪೇಷೆಂಟ್ ಡಿಪಾರ್ಟ್ಮೆಂಟ್) ಸೇವೆಗಳು, ಲ್ಯಾಬ್ ಟೆಸ್ಟ್ಗಳು, ಔಷಧ ಕೊಳ್ಳುವಿಕೆ ಮತ್ತು ಎಲ್ಲ ಐಪಿಡಿ(ಇನ್ಪೇಷೆಂಟ್ ಡಿಪಾರ್ಟ್ಮೆಂಟ್) ಚಿಕಿತ್ಸೆಗಳಿಗೆ ಡಿಜಿಟಲ್ ವ್ಯಾಲೆಟ್ನೊಂದಿಗೆ ಬಂದಿದೆ. ಚಿಪ್-ಸನ್ನದ್ಧ ಕಾರ್ಡ್ನೊಂದಿಗೆ ಸನ್ನದ್ಧವಾಗಿದ್ದು ಗ್ರಾಹಕರು ತಕ್ಷಣದ ಕ್ಯಾಶ್ಬ್ಯಾಕ್, ವಿಶೇಷ ಆಸ್ಪತ್ರೆ ಕೊಡುಗೆಗಳು ಮತ್ತು ಅಫರ್ಡ್ಪ್ಲಾನ್ ಸ್ವಾಸ್ಥ್ ಪಾಲುದಾರ ಸಹಯೋಗಗಳ ಮೂಲ ಆದ್ಯತೆಯ ಬ್ರಾಂಡ್ಗಳ ವಿಶೇಷ ರಿಯಾಯಿತಿಗಳನ್ನು ನೀಡುತ್ತದೆ. ಅಫರ್ಡ್ಪ್ಲಾನ್ ಸ್ವಾಸ್ಥ್ ಈಗಾಗಲೇ ದಕ್ಷಿಣ ಭಾರತದ ಹಲವು ಆಸ್ಪತ್ರೆಗಳೊಂದಿಗೆ ಸಹಯೋಗ ಹೊಂದಿದ್ದು, ಈ ಪ್ಲಾಟ್ಫಾರಂ ಮೂಲಕ ರೋಗಿಗಳಿಗೆ ಅವರ ವೈದ್ಯಕೀಯ ವೆಚ್ಚಗಳನ್ನು ಹಲವು ಅನುಕೂಲಗಳನ್ನು ಒದಗಿಸಿ ನೆರವಾಗಿದೆ.
ಈ ಕುರಿತು ಅಫರ್ಡ್ಪ್ಲಾನ್ನ ಸಿಇಒ ಆದಿತ್ಯ ಶರ್ಮಾ, “ಕರ್ನಾಟಕದ ಪ್ರತಿಷ್ಠಿತ ಎನ್ಯು ಹಾಸ್ಪಿಟಲ್ಸ್ನೊಂದಿಗಿನ ಸಹಯೋಗಕ್ಕೆ ನಾವು ಬಹಳ ಹೆಮ್ಮೆ ಪಡುತ್ತೇವೆ. ಎನ್ಯು ಹಾಸ್ಪಿಟಲ್ಸ್ ಕೇಂದ್ರದಲ್ಲಿ ಚೇತರಿಕೆ ಮತ್ತು ಪುನರ್ವಸತಿಯನ್ನು ಕೇಂದ್ರವಾಗಿರಿಸಿಕೊಂಡಿದ್ದೇವೆ. ಓಮಿಕ್ರಾನ್ ವೇರಿಯೆಂಟ್ ಬಂದಿರುವುದರಿಂದ ನಾವು ನಮ್ಮ ಸಹಯೋಗದ ಮೂಲಕ ಗುಣಮಟ್ಟದ ರೋಗಿಯ ಆರೈಕೆ ವಿಸ್ತರಿಸುವ ಭರವಸೆ ಹೊಂದಿದ್ದೇವೆ ಮತ್ತು ಆರೋಗ್ಯಸೇವಾ ಹಣಕಾಸು ಲಭ್ಯತೆ ಮತ್ತು ವೇಗ ಹಾಗೂ ದಕ್ಷ ವಿಧಾನದಲ್ಲಿ ವೆಚ್ಚ ಉಳಿಸಲು ನೆರವಾಗುತ್ತೇವೆ” ಎಂದರು.
ಎನ್ ಯು ಹಾಸ್ಪಿಟಲ್ ನ ಹಿರಿಯ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ಯುರಾಲಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೆಶಕ ಡಾ. ಪ್ರಸನ್ನ ವೆಂಕಟೇಶ್, “ಅಫರ್ಡ್ಪ್ಲಾನ್ ನಿಜಕ್ಕೂ ರೋಗಿಗಳಿಗೆ ಅವರ ಆರೋಗ್ಯಸೇವಾ ಹಣಕಾಸು ಯೋಜನೆಯ ನಿಯಂತ್ರಣ ಸಾಧಿಸಲು ಶಕ್ತಿ ನೀಡುತ್ತದೆ. ಈ ಮೌಲ್ಯಯುತ ಸಹಯೋಗದಿಂದ ನಾವು ಆರೋಗ್ಯಕರ, ಸಂತೋಷಕರ ರೋಗಿಯ ಆರೈಕೆಯತ್ತ ಮುನ್ನಡೆಯುತ್ತಿದ್ದೇವೆ” ಎಂದರು.
ಅಫರ್ಡ್ಪ್ಲಾನ್ 15 ನಗರಗಳ ನೂರಾರು ಆಸ್ಪತ್ರೆಗಳೊಂದಿಗೆ ಸಹಯೋಗ ಹೊಂದಿದ್ದು ಅವರ ಉತ್ಪನ್ನದ ಮೂಲಕ 5,00,000 ರೋಗಿಯ ಜೀವನಗಳನ್ನು ಸ್ಪರ್ಶಿಸಿದೆ. ಅವರು ಈಗಾಗಲೇ ದೆಹಲಿ/ಎನ್ಸಿಆರ್, ಬೆಂಗಳೂರು, ಜೈಪುರ, ಮುಂಬೈ ಮತ್ತು ಕೊಲ್ಕತಾ ಮಾರುಕಟ್ಟೆಗಳಲ್ಲಿ ಸದೃಢ ಆಸ್ಪತ್ರೆ ಜಾಲ ಹೊಂದಿದೆ. ಪ್ರಸ್ತುತ ಅವರು ಭಾರತದಲ್ಲಿ 80+ ಆಸ್ಪತ್ರೆಗಳ ಸಕ್ರಿಯ ಸಹಯೋಗಗಳನ್ನು ಹೊಂದಿದ್ದಾರೆ.