ಶಿವಮೊಗ್ಗ.ಜ.೧೪:
ನಗರದ ನವುಲೆಯಲ್ಲಿರುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗಾಗಿ ನಿಮಾಣವಾಗುತ್ತಿರುವ ಮನೆಗಳ ಬಗ್ಗೆ, ಹಾಗೂ ಈ ಮನೆ ನಿರ್ಮಿಸುತ್ತಿರುವ ವಿಧಾನದ ಬಗ್ಗೆ ವಿಧಾನ ಪರಿಷತ್‌ನ ಶಾಸಕ ಎಸ್.ರುದ್ರೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ನವುಲೆಯ ಇಂದಿರಾಗಾಂಧಿ ಬಡಾವಣೆಯ ಹಿಂಭಾಗದಲ್ಲಿ ಪಾಲಿಕೆಯ ಪೌರಕಾರ್ಮಿಕರಿಗಾಗಿ ಮನೆಗಳನ್ನ ೧೭ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ೧೬೮ ಮನೆಗಳ ನಿರ್ಮಾಣದ ಗುರಿಹೊಂದಲಾಗಿದೆ. ಗೃಹಭಾಗ್ಯದ ಅಡಿ ಮನೆ ಹಂಚಲಾಗುತ್ತಿದೆ. ಸಮುಚ್ಚಯದ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಆದರೆ ಮನೆಗಳ ನಿರ್ಮಾಣ ವ್ಯವಸ್ಥಿತವಾಗಿಲ್ಲ. ಇದಕ್ಕೆ ಕಾರಣರಾದವರೇ ಇದನ್ನು ಸರಿಮಾಡಿಕೊಡಬೇಂದು ಆಯುಕ್ತರಿಗೆ ಸೂಚಿಸಿದರು.


ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಪಾಲಿಕೆಯ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ತಲಾ ಮನೆಯೊಂದನ್ನು ೬ ಚದರ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ೧೦.೨ ಲಕ್ಷ ರೂ. ವೆಚ್ಚದಲ್ಲಿ ಪ್ರತಿಮನೆಗಳನ್ನ ನಿರ್ಮಿಸಲಾಗುತ್ತಿದೆ. ಆದರೆ ಮನೆಯ ಅಲೈನ್ ಮೆಂಟ್ ಮತ್ತು ಪಿಲ್ಲರ್ ಬಾಕ್ಸ್ ಗಳು ಸರಿಯಾಗಿ ನಿರ್ಮಿಸಿಲ್ಲ. ಗುತ್ತಿಗೆದಾರ ಸಿದ್ದಪ್ಪ ಮತ್ತು ಕಾರ್ಯಪಾಲಕ ಇಂಜಿನಿಯರ್ ಡೊಂಕಪ್ಪರ ವಿರುದ್ಧ ವಿಧಾನ ಪರಿಷತ್ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾರಿವರು…?
ಒಂದು ಪಿಲ್ಲರ್ ಮುಂದಿದ್ದು ಇನ್ನೊಂದು ಹಿಂದಿದೆ. ಪಿಲ್ಲರ್ ಗೆ ಹಾಕಿದ ಸಿಮೆಂಟ್ ಕಿತ್ತುಕೊಂಡು ಬರುತ್ತಿದೆ ಎಂದು ಗುತ್ತಿಗೆದಾರರಿಗೆ ಮತ್ತು ಇಂಜಿನಿಯರ್ ವಿರುದ್ಧ ಶಾಸಕರು ಗರಂ ಆಗಿದ್ದಾರೆ. ಇದನ್ನ ಸರಿಪಡಿಸಿಕೊಂಡು ನಿರ್ಮಿಸಬೇಕೆಂದು ಆಗ್ರಹಿಸಿದರು.


ಮಹಾನಾಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಮಾತನಾಡಿ, ಶಾಸಕರು ಸೂಚಿಸಿರುವ ಕೆಲವು ಸಲಹೆಗಳನ್ನ ಪರಿಗಣಿಸಿ ೧೫ ದಿನಗಳಲ್ಲಿ ಸರಿಪಡಿಸಿ ಮಾರ್ಚ್ ಒಳಗೆ ಮನೆ ನಿರ್ಮಾಣ ಮುಕ್ತಾಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಸದಸ್ಯರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!