ಶಿವಮೊಗ್ಗ:  ನಗರ ಉಪವಿಭಾಗ-2 ರ ಘಟಕ 4 ರ ವ್ಯಾಪ್ತಿಯಲ್ಲಿ ಎಂ.ಆರ್.ಎಸ್ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಇರುವ ಕಾರಣ ಕೆಳಕಂಡ ಪ್ರದೇಶದಲ್ಲಿ ಜ.12 ರ ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆವರೆಗೆ ವಿದ್ಯುತ್ ವ್ಯತ್ಯವಾಗಲಿದೆ.


     ನಗರದ ಬೆಕ್ಕಿನಕಲ್ಮಠ, ಕೋಟೆ ರಸ್ತೆ, ಮಾರಿಗದ್ದುಗೆ, ಎಸ್.ಪಿ.ಎಂ ರಸ್ತೆ, ಒ.ಬಿ.ಎಲ್ ರಸ್ತೆ, ಪೆನ್ಶನ್ ಮೊಹಲ್ಲಾ, ಸಿ.ಎಲ್.ರಾಮಣ್ಣ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಎಲಕಪ್ಪನ ಕೇರಿ, ನಾಗಪ್ಪನ ಕೇರಿ, ಗಾಂಧಿ ಬಜಾರ್, ಬಿ.ಹೆಚ್.ರಸ್ತೆ ಎಡಭಾಗ, ಅಮೀರ್ ಅಹಮದ್ ಸರ್ಕಲ್, ಶಿವಾಜಿ ರಸ್ತೆ, ತಿರುಪಳಯ್ಯನ ಕೇರಿ, ಬಿ.ಹೆಚ್.ರಸ್ತೆ, ಸಾವರ್ಕರ್ ನಗರ, ಅಶೋಕ ರಸ್ತೆ, ಕುಚಲಕ್ಕಿ ಕೇರಿ, ಎಂ.ಕೆ.ಕೆ ರಸ್ತೆ, ಅನವೇರಪ್ಪನ ಕೇರಿ, ಎಲೆ ರೇವಣ್ಣನ ಕೇರಿ, ಗಂಗಾ ಪರಮೇಶ್ವರಿ ದೇವಸ್ಥಾನ ರಸ್ತೆ, ಧರ್ಮರಾಯನ ಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.


ಜ.13 ರ ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ನಗರದ ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರಿ, ಇಲಿಯಾಜ್‍ನಗರ 1ನೇ ಕ್ರಾಸ್ ನಿಂದ 13 ನೇ ಕ್ರಾಸ್, ಸಿದ್ದೇಶ್ವರ ಸರ್ಕಲ್, ಫಾರೂಕ್ಯ ಶಾದಿಮಹಲ್, ತುಂಗಾನಗರ ಆಸ್ಪತೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹೆಚ್‍ಬಿ ಕಾಲೋನಿ, ಮಂಡಕ್ಕಿ ಭಟ್ಟಿ, ಮೇಲಿನ ತುಂಗಾನಗರ, ಕೆಳಗಿನ ತುಂಗಾನಗರ, ಅಣ್ಣಾನಗರ, ಮಲ್ಲಿಕಾರ್ಜುನ ಬಡಾವಣೆ, ಮಂಜುನಾಥ ಬಡಾವಣೆ, ಮಿಳಘಟ್ಟ, ಆನಂದರಾವ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎಫ್-06 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ. ಎಫ್-17 ವ್ಯಾಪ್ತಿಯ ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕರಣೆ ತಿಳಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!