ಶಿವಮೊಗ್ಗ, ಡಿ.22:
ಶಿವಮೊಗ್ಗ ನಗರದ ಖಾಸಗಿ ವಸತಿಗೃಹಗಳ ಮೇಲೆ ಇಂದು ಸಂಜೆ ಶಿವಮೊಗ್ಗ ಪೊಲೀಸ್ ತಂಡ ರೈಡ್ ಮಾಡಿದೆ. ಅದಕೆ ಎಲ್ಲಾ ಕಾರಣ ಸಾಕಷ್ಟಿದೆ. ನಗರದ ಮುವತ್ತರಷ್ಟು ಲಾಡ್ಜ್ ಗಳ ಮೇಲೆ ಪೊಲೀಸ್ ಇಲಾಖೆ ತಪಾಸಣೆ ನಡೆಸಿದೆ. ಅಲ್ಲಿ ನಡೆಯುವ ಅಕ್ರಮ ಅನೈತಿಕ ಚಟುವಟಿಕೆ, ಗಾಂಜಾ ಮಾಫಿಯಾ ರೂವಾರಿಗಳನ್ನು ಹುಡುಕುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿತ್ತೆನ್ನಲಾಗಿದೆ.


ಗಾಂಜಾ ಸರಬರಾಜು ಮಾಡುವವರು ಲಾಡ್ಜ್ ಗಳಲ್ಲಿ ಠಿಕಾಣಿ ಹೂಡುವ ಬಗ್ಗೆ, ಅನೈತಿಕ ವೇಶ್ಯಾವಾಟಿಕೆ, ಅನ್ಯ ಕೋಮಿನ ಶಾಶ್ವತ ಸಂಬಂಧದ ಬಗ್ಗೆ ಹಾಗೂ ಆ ಲಾಡ್ಜ್ ಗಳ ಬಗ್ಗೆ ಇತರೆ ಚಟುವಟಿಗಳ ಸಮಗ್ರ ಮಾಹಿತಿ ಪಡೆಯಲು ಜಿಲ್ಲಾ ರಕ್ಷಣಾಧಿಕಾರಿಗಳು ನೀಡಿದ್ದ ಸೂಚನೆಯನುಸಾರ ಈ ದಾಳಿ ನಡೆದಿದೆ ಎನ್ನಲಾಗಿದೆ.


ಈಗ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಈ ತಪಾಸಣೆ ನಡೆದಿದ್ದು ನಾಳೆ ಜಿಲ್ಲೆಯ ಎಲ್ಲೆಡೆ ನಿರಂತರವಾಗಿ ಈ ಬಗೆಯ ವಿಚಾರಣೆ, ತಪಾಸಣೆ ನಡೆಯಲಿದೆ ಎನ್ನಲಾಗಿದೆ.
ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ ದೊಡ್ಡಪೇಟೆ ಪಿಐ ಹರೀಶ್ ಪಟೇಲ್ ಹಾಗೂ ಇತರರ ದೊಡ್ಡ ತಂಡ ತಪಾಸಣೆ ನಡೆಸಿದೆ.

ಮಾಹಿತಿಯ ಪ್ರಕಾರ ಶಿವಮೊಗ್ಗ ಹೊನ್ನಾಳಿ ರಸ್ತೆಯ ಲಾಡ್ಜ್ ನಲ್ಲಿ ಯುವಕ ಯುವತಿಯೊಬ್ಬರು ಅನೈತಿಕ ಚಟುವಟಿಕೆ ಹಿನ್ನಲೆಯಲ್ಲಿ ಸಿಕ್ಕಿಕೊಂಡ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಲಾಡ್ಜ್ ಗಳ ತಪಾಸಣೆಗೆ ಪೊಲೀಸ್ ಇಲಾಖೆ ನಡೆಸಿದೆ ಎನ್ನಲಾಗಿದೆ.


ಇತ್ತೀಚೆಗೆ ಅನ್ಯ ಕೋಮಿನ ಯುವಕ ಯುವತಿಯರು ಲಾಡ್ಜ್ ಮಾಡಿಕೊಂಡು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಮಿಕ್ಕ ಮಾಹಿತಿ ನಾಳೆ….,

By admin

ನಿಮ್ಮದೊಂದು ಉತ್ತರ

error: Content is protected !!