ತುಂಗಾತರಂಗ ನ್ಯೂಸ್
ಶಿವಮೊಗ್ಗ, ಡಿ.14:
ಶಿವಮೊಗ್ಗ
ಟಿಪ್ಪುನಗರದಲ್ಲಿ ನಿನ್ನೆ ಸುಮಾರು ಒಂದು ಸಾವಿರ ಕೆಜಿ ತೂಕದ, ಅಂದಾಜು ಕೋಟಿ ರೂ ಬೆಲೆಬಾಳುವ ಭಾರೀ ಶ್ರೀಗಂಧವನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆ ದಾಳಿಯಲ್ಲಿ ವಶಪಡಿಸಿಕೊಂಡಿದೆ.
ಅರಣ್ಯ ಇಲಾಖೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಡಿಸಿಎಫ್ ಶಂಕರ್ ಹಾಗೂ ಇತರೆ ಅಧಿಕಾರಿಗಳು,, ಪೊಲೀಸ್ ಇಲಾಖೆಯ ಪ್ಸ್ಪ ಪ್ರಬಾರ ಡಿವೈಎಸ್ ಪಿ, ತುಂಗಾನಗರ ಇನ್ಸ್ ಸ್ಪೆಕ್ಟರ್ ದೀಪಕ್ ಅವರ ತಂಡ ಕೈ ಜೋಡಿಸಿ ದಾಳಿ ನಡೆಸಿದಾಗ ಈ ಶ್ರೀಗಂಧ ಪತ್ತೆಯಾಗಿದೆ. ಟಿಪ್ಪುನಗರ ಸರಹದ್ದಿನ ಅಂಬೇಡ್ಕರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಟಿಪ್ಪುನಗರದ ಸೈಯದ್ ಅಪ್ಸರ್ ನನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಶ್ರೀಗಂಧದ ಜೊತೆ ಒಂದು ಇನೋವಾ ಹಾಗೂ ಒಂದು ಟಾಟಾ ಗ್ಲಾಂಜಸ ವಾಹನವನ್ನು ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.
ಇಷ್ಟೊಂದು ಭಾರೀ ಪ್ರಮಾಣದ ಶ್ರೀಗಂಧ ಸಿಕ್ಕಿರುವುದು ಅಚ್ಚರಿಮೂಡಿಸಿದೆ. ಬಂಧಿತನ ಹೇಳಿಕೆಯ ಅನುಸಾರ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿದ್ದಾರೆಂದು ಹೇಳಲಾಗುತ್ತಿದ್ದು, ಇಂದು ಇಲಾಖೆ ಅಧಿಕಾರಿಗಳು ಅದೇನು ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
ದಾ
ದಾಳಿಯಲ್ಲಿ ಅರಣ್ಯ ಇಲಾಖೆಯ ಡಿಸಿಎಫ್ ಅವರೊಂದಿಗೆ ಎಸಿಎಫ್ ರಮೇಶ್ ಪುಟ್ನಳ್ಳಿ, ಆರ್ ಎಫ್ ಓ ಗಿರೀಶ್ ಶಂಕರಿ, ಡಿಆರ್ ಎಫ್ ಓಗಳಾದ ನರೇಂದ್ರ ಕುಮಾರ್, ಆರ್ ಆರ್ ಕುಮಾರ್, ಶರತ್ ಕುಮಾರ್, ಹರೀಶ್, ಉಮೇಶ್ ನಾಯ್ಕ್,ಅರಣ್ಯ ರಕ್ಷಕರಾದ ಅವಿನಾಶ್, ಆನಂದ್ ಮತ್ತಿತರರಿದ್ದರು.