ಶಿವಮೊಗ್ಗ, ಡಿ.9
ರಾಜ್ಯ ವಿಧಾನ ಪರಿಷತ್ನ ಒಂದು ಸ್ಥಾನಕ್ಕಾಗಿ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯಲಿರುವ ಚುನಾವಣೆಗೆ ಜಿಲ್ಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಮತದಾರರ ವಿವರ: ಜಿಲ್ಲೆಯಲ್ಲಿ ಒಟ್ಟು 4164 ಅರ್ಹ ಮತದಾರರು ಇದ್ದಾರೆ. ಇವರಲ್ಲಿ 1983 ಪುರುಷ ಹಾಗೂ 2181 ಮಹಿಳಾ ಮತದಾರರು ಇದ್ದಾರೆ. 93 ಅನಕ್ಷರಸ್ಥ ಮತದಾರರು ಜತೆಗಾರರ ನೆರವಿನೊಂದಿಗೆ ಮತ ಚಲಾಯಿಸುವ ಅವಕಾಶ ಪಡೆದಿದ್ದಾರೆ. ಸೊರಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 14 ಮತದಾರರು, ಶಿಕಾರಿಪುರ ಪಟ್ಟಣ ಪಂಚಾಯತ್ 30, ಹೊನ್ನಾಳಿ ಪುರಸಭೆ 22, ಚೆನ್ನಗಿರಿ ಪಟ್ಟಣ ಪಂಚಾಯತ್ 29, ಭದ್ರಾವತಿ ನಗರ ಸಭೆ 37, ಶಿವಮೊಗ್ಗ ಮಹಾನಗರ ಪಾಲಿಕೆ 45, ಸಾಗರ ನಗರಸಭೆ 37, ಹೊಸನಗರ ಪಟ್ಟಣ ಪಂಚಾಯತ್ 14, ತೀರ್ಥಹಳ್ಳಿ ಪಟ್ಟಣ ಪಂಚಾಯತ್ 16 ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಇವರಲ್ಲಿ ಈ ವ್ಯಾಪ್ತಿಯ ಇತರ ಜನಪ್ರತಿನಿಧಿಗಳು ಸಹ ಒಳಗೊಂಡಿದ್ದಾರೆ.
ಸೊರಬ ತಾಲೂಕಿನಲ್ಲಿ 304 ಗ್ರಾಮ ಪಂಚಾಯತ್ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಶಿಕಾರಿಪುರ 470, ಹೊನ್ನಾಳಿ 321, ನ್ಯಾಮತಿ 190, ಚನ್ನಗಿರಿ 730, ಭದ್ರಾವತಿ 431, ಶಿವಮೊಗ್ಗ 456, ಸಾಗರ 379, ಹೊಸನಗರ 294, ತೀರ್ಥಹಳ್ಳಿ ತಾಲೂಕಿನಲ್ಲಿ 335 ಗ್ರಾಮ ಪಂಚಾಯತ್ ಸದಸ್ಯರು ಇದ್ದಾರೆ.
ಒಟ್ಟು 365 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಪ್ರತಿ ಮತಗಟ್ಟೆಯಲ್ಲಿ ತಲಾ ಮೂರು ಮಂದಿ ಚುನಾವಣಾ ಅಧಿಕಾರಿ ಹಾಗು ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಮೈಕ್ರೋ ಅಬ್ರ್ವರ್ ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಸುಗಮ ಮತದಾನಕ್ಕೆ ನೆರವಾಗಲಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ವಿಡಿಯೋಗ್ರಾಫರ್ ನಿಯೋಜಿಸಲಾಗಿದೆ. ಮಸ್ಟರಿಂಗ್ ಕಾರ್ಯ ಮುಗಿದ ಬಳಿಕ ಚುನಾವಣಾ ಸಿಬ್ಬಂದಿಯನ್ನು ತಾಲೂಕುಗಳಿಗೆ ಕರೆದೊಯ್ಯಲು 38 ಬಸ್ ವ್ಯವಸ್ಥೆ ಮಾಡಲಾಗಿದ್ದು, ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ 13 ಜೀಪ್ಗಳ ವ್ಯವಸ್ಥೆ ಮಾಡಲಾಗಿದೆ. ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸ್ಟಾಗ್ ರೂಂ ಸಜ್ಜುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.