ಶಿವಮೊಗ್ಗ,ನ.28:
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಗೆಲ್ಲುವ ಭರವಸೆ ಇದೆ ಎಂದು ಅಭ್ಯರ್ಥಿ ಡಿ.ಎಸ್.ಅರುಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 25 ಕ್ಷೇತ್ರದಲ್ಲಿ ಬಿಎಸ್ ವೈ ಕನಿಷ್ಠ 20 ಕ್ಷೇತ್ರದಲ್ಲಿ ಗೆಲವು ಸಾಧಿಸಲು ಫಣತೊಟ್ಟಿದ್ದಾರೆ. ನ. 24 ರಿಂದ ಶಿವಮೊಗ್ಗದಿಂದ ಪ್ರವಾಸ ಕೈಗೊಳ್ಳಲಾಗಿದೆ. 10 ವಿಧಾನ ಸಭಾ ಕ್ಷೇತ್ರದಲ್ಲಿ ಹೊನ್ನಾಳಿ ಮತ್ತು ಮಾಯಾಕೊಂಡ ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಕಡೆ ಈಗಾಗಲೇ ಪ್ರಚಾರ ಮುಗಿಸಿದ್ದೇವೆ ಎಂದರು.
ಒಟ್ಟು 4166 ಮತದಾರರಿದ್ದು ಶೇ. 93.5 ರಷ್ಟು ಗ್ರಾಪಂ ಸದಸ್ಯರಿದ್ದಾರೆ. ಪ್ರತಿ ಪಂಚಾಯಿತಿಯಲ್ಲಿಯೂ ಕಾರ್ಯಪ್ರಮುಖ್ ನೇಮಿಸಲಾಗಿದೆ. ಎಂಎಲ್ ಎ, ಎಂಪಿ, ಗ್ರಾಪಂ ಸದಸ್ಯರು ಹಾಗೂ ಪಾಲಿಕೆ, ನಗರಸಭೆ, ಪುರಸಭೆ ಸದಸ್ಯರು ಮತ ಚಲಾಯಿಸಲಿದ್ದಾರೆ ಎಂದರು.


ಮತದಾನಕ್ಕೆ 11 ದಿನ‌ ಬಾಕಿ ಉಳಿದಿದೆ. ಪ್ರತಿ ಪಂಚಾಯಿತಿ ಸದಸ್ಯರನ್ನ ಸಂಪರ್ಕಿಸಲಾಗುತ್ತದೆ. ಚುನಾವಣೆ ಗೆಲ್ಲುವ ತನಕ ಕ್ಷೇತ್ರ ಬಿಡದಂತೆ ಎಂಎಲ್ ಎ ಎಂಪಿಗಳು ಪ್ರತಿಜ್ಞೆಯೊಂದಿಗೆ ಕೆಲಸ ಮಾಡಲು ತೊಡಗಿದ್ದಾರೆ ಎಂದರು.
ಮಹಿಳೆಯರು ಗ್ರಾಪಂ ನಲ್ಲಿ ಶೇ. 50 ರಷ್ಟಿತ್ತು. ಸಿಟಿಂಗ್ ಶುಲ್ಕವೆಂದು 20 ರೂ ನೀಡಲಾಗುತ್ತಿತ್ತು. ಆದರೆ ಬಿಎಸ್ ಯಡಿಯೂರಪ್ಪ ಸಿಎಂ ಆದ ನಂತರ 1000 ರೂ ಗೆ ಹೆಚ್ಚಳ ಮಾಡಲಾಗಿತ್ತು. ಆದರೆ ನಾನು ಎಂಎಲ್ ಸಿ ಆಗಿ ಆಯ್ಕೆಯಾದರೆ 2000 ರೂ.ಗೆ ಹೆಚ್ಚಿಸಲು ಪ್ರಯತ್ನಿಸಿ ಸಫಲನಾಗುತ್ತೇನೆ ಎಂದು ಭರವಸೆ ನೀಡಿದರು.


ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ತೀರ್ಮಾನಿಸಿದ್ದೇನೆ. ಕೆಲ ಗ್ರಾಪಂ ಸದಸ್ಯರಿಗೆ ಬ್ಯಾಲೆಟ್ ಪೇಪರ್ ನಲ್ಲಿ ಮತದಾನ ಮಾಡಲು ಗೊತ್ತಿಲ್ಲ. ಹಾಗಾಗಿ ಸದಸ್ಯರಿಗೆ ಶಿಕ್ಷಣ ಅಗತ್ಯವಿದೆ. ಡಿಜಿಟಲೈಸೇಷನ್ ಮೂಲಕ ಜನನ ಮತ್ತು ಮರಣ ಪತ್ರವನ್ನ ಗ್ರಾಮ ಪಂಚಾಯಿತಿಯಲ್ಲಿಯೇ ನೀಡಲು ಯೋಜಿಸಲಾಗುತ್ತಿದೆ ಎಂದರು.
ಬಡವರ ಕಲ್ಯಾಣ ಸಂಧ್ಯಾಸುರಕ್ಷಾ, ಅಂತ್ಯೋದಯ ಮೊದಲಾದ ಯೋಜನೆಗಳು ಗ್ರಾಮಗಳಲ್ಲಿಯೇ ನೀಡುವ ಯೋಜನೆ ಮಾಡುವ ಅನುಕೂಲ ಮಾಡಲಾಗುವುದು. ಆದರ್ಶಗ್ರಾಮ, ಬಗರ್ ಹುಕುಂ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು ಎಂದರು.
ಈ ಚುನಾವಣೆ ಡಿ.10 ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿದೆ. ಗ್ರಾಮಪಂಚಾಯಿತಿಯಲ್ಲಿಯೇ ಮತ ಚಲಾಯಿಸಬಹುದು
ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!