v K ಚಿತ್ರ ಕೃಪೆ

ಶಿವಮೊಗ್ಗ, ಅ.17:
ಪ್ರೀತಿಸಿ ಮದುವೆಯಾಗಿದ್ದ ವಿವಾಹಿತೆ ಮಹಿಳೆಯನ್ನ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಗಾಡಿಕೊಪ್ಪದ ಹಾಳೂರು ಅನುಪಿನಕಟ್ಟೆಯ ವಾಸು ಸತ್ಯ ಬಡಾವಣೆಯಲ್ಲಿ ಕೌಸರ್ ಫಿಜ಼ಾ ಎಂಬ 21 ವರ್ಷದ ವಿವಾಹಿತ ಮಹಿಳೆಯನ್ನ ಆಕೆಯ ಗಂಡನೇ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ.


ವಿವರ:
ಆಯುನೂರಿನ ಕೌಸರ್ ಫಿಜ಼ಾ ಆಲ್ಕೊಳದ ಖಾಸಗಿ ಕಾಲೇಜಿಗೆ ಹೋಗುವಾಗ ಗುಜರಿ ಕೆಲಸ ಮಾಡುತ್ತಿದ್ದ ಟಿಪ್ಪುನಗರದ ನಿವಾಸಿ ಶೋಯೇಬ್ (21) ಯುವಕನೊಂದಿಗೆ ಪ್ರೀತಿ ಹುಟ್ಟುತ್ತೆ. ಆಗಲೇ ಎಚ್ಚೆತ್ತುಕೊಂಡಿದ್ದ ಕೌಸರ್ ಮನೆಯವರು ಶಾಲೆ ಬಿಡಿಸಿರುತ್ತಾರೆ.
ಯಾವಾಗ ಮೈನರ್ ನಿಂದ ಮೇಜರ್ ಗೆ ಬರುತ್ತಾಳೋ ಆಕೆಯನ್ನ ಶೋಯೆಬ್ ಮದುವೆಯಾಗುತ್ತಾನೆ.
ಒಂದುವರೆ ವರ್ಷದ ಮಗುವಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಶೋಯೇಬ್ ಜೊತೆ ಜಗಳವಾಡಿ ತವರು ಮನೆ ಸೇರಿಕೊಂಡಿದ್ದ ಕೌಸರ್ ನಿನ್ನೆ ಕಂಪ್ಯೂಟರ್ ವಿದ್ಯಾಭ್ಯಾಸಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದಾಳೆ.


ಕಂಪ್ಯೂಟರ್ ಕ್ಲಾಸ್ ಮುಗಿಯುತ್ತಿದ್ದಂತೆ ಶೋಯೆಬ್ ಕಾರಿನಲ್ಲಿ ಕೂರಿಸಿಕೊಂಡು ವಾಸು ಸತ್ಯ ಬಡಾವಣೆಯ ಜಾಗದ ನಿರ್ಜನ ಪ್ರದೇಶದಲ್ಲಿ ಕರೆದುಕೊಂಡು ಬಂದು ಆಯುಧಗಳಿಂದ ಹಾಗೂ ಕಲ್ಲಿನಿಂದ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ತಕ್ಷಣವೇ ಆಕೆಯ ಮೈಮೇಲಿನ ಬಂಗಾರವನೆಲ್ಲಾ ಕಿತ್ತುಕೊಂಡು ತುಂಗಾ ಠಾಣೆಗೆ ಬಂದು ಸರೆಂಡರ್ ಆಗಿದ್ದಾನೆ.
ಬದುಕಿ ಬಾಳಬೇಕಾದ 21ರ ವಿವಾಹಿತೆ ನೋಡು ನೋಡುತ್ತಿದ್ದಂತೆ ಹೆಣವಾಗಿದ್ದಾಳೆ.
ಈ ಕೌಸರ್ ಫೀಜಾಳಿಗೆ ಇನ್ನೊಬ್ಬರ ಜೊತೆ ಸಂಬಂಧವಿದೆ ಎಂಬುದನ್ನು ಶೋಯೇಬ್ ನಂಬಿದ ಹಿನ್ನಲೆಯಲ್ಲಿ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!