ಅನ್ಯ ಇಲಾಖೆಗೆ ಹೋದವರಿಗೆ ಈ ಸೂಚನೆ!
ಬೆಂಗಳೂರು;
ಶಿಕ್ಷಕರಾಗಿದ್ದುಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುವ ಬದಲಿಗೆ ಅನ್ಯ ಇಲಾಖೆಯಲ್ಲಿ ನಿಯೋಜನೆಗೊಂಡಿರುವ ಶಿಕ್ಷಕರನ್ನು ಕೂಡಲೇ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಕಳಿಸುವಂತೆ, ಅವರು ನಾಳೆಯಿಂದಲೇ ಪಾಠ ಮಾಡುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಮಾಡಿರುವುದು ಕೆಲ ಪಾಠ ಮಾಡದೇ ಏನೇನೋ ಮಾಡ್ತಿದ್ದ ಶಿಕ್ಷಕರಿಗೆ ಭಯಂಕರ ಬೇಜಾರ್ ಮಾಡಿದೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಇಂತಹ ಸೂಚನೆಯನ್ನು ಇಲಾಖೆ ಆಯುಕ್ತರು ನೀಡಿದ್ದಾರೆ.
ಹಳೇ ಆದೇಶದ ರದ್ಧತಿಗೆ ಆದೇಶ ನೀಡಿದ್ದು ವಾರದೊಳಗೆ ಮಾತೃ ಇಲಾಖೆಗೆ ಮರಳುವಂತೆ ಸೂಚನೆ ನೀಡಲಾಗಿದೆ.
ದಸರಾ ಮುಗಿದ ನಂತರ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗು ವುದು. ಹೀಗಾಗಿ ಅನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ನಿಯೋಜನೆಯನ್ನು ರದ್ದುಗೊಳಿಸಿ ಶಾಲೆಗೆ ಮರಳು ವಂತೆ ತಿಳಿಸಲಾಗಿದೆ.
ಸಾಕ್ಷರತೆ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆ ಗಳಡಿ ಶಿಕ್ಷಕರನ್ನು ಅನ್ಯ ಇಲಾಖೆಗೆ ನಿಯೋಜಿಸಲಾಗಿದೆ. ಇಂಥವರ ಸೇವಾವಧಿ 2021ರ ಮಾರ್ಚ್ ಕೊನೆಯಾಗಿದೆ. ದಸರಾ ಮುಗಿದ ನಂತರ ಶಾಲೆಗಳು ಆರಂಭವಾಗುತ್ತಿ ರುವುದರಿಂದ ಇಂತಹ ಶಿಕ್ಷಕರು ಮಾತೃ ಇಲಾಖೆಗೆ ಮರಳ ಬೇಕೆಂದು ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಸುಮಾರು 25 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಪೂರಕ ಮಾಹಿತಿ ಸಂಗ್ರಹ