ಶಿವಮೊಗ್ಗ, ಜು.15: ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯು ಗುರುಪುರದಲ್ಲಿ ನಡೆಸುತ್ತಿರುವ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿಪೂರ್ವ ಕಾಲೇಜಿನ ಮೊದಲ ವರುಷದ ಫಲಿತಾಂಶ ಪ್ರಕಟಗೊಂಡಿದ್ದು ಗ್ರಾಮೀಣ ಭಾಗದ ಮಕ್ಕಳನ್ನೊಳಗೊಂಡ ಕಾಲೇಜಿಗೆ ಶೇ.೯೭.೫ರಷ್ಟು ಫಲಿತಾಂಶ ಲಭಿಸಿರುವುದು ಹಿರಿಮೆಯ ಸಂಗತಿ
ಕಳೆದ ಎರಡು ವರುಷದ ಹಿಂದೆ ಆರಂಭಗೊಂಡ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿಪೂರ್ವ ಕಾಲೇಜು ತನ್ನ ದ್ವಿತೀಯ ಪಿಯು ಫಲಿತಾಂಶದಲ್ಲಿ ಗಣನೀಯ ಸಾಧನೆ ಮಾಡಿದೆ.
ಕಾಲೆಜಿನ 79 ವಿದ್ಯಾರ್ಥಿಗಳಲ್ಲಿ 12 ಡಿಸ್ಟಿಂಕ್ಷನ್, 56 ಪ್ರಥಮಶ್ರೇಣಿ ಪಡೆದಿದ್ದು ಕಾಲೇಜಿನ 77 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.
ಕಾಲೇಜಿನ ಅವಳಿ ಸಹೋದರರು ಹಾಗೂ ರಾಜ್ಯಮಟ್ಟದ ವಾಲಿಬಾಲ್ ಹಾಗೂ ಥ್ರೋ ಬಾಲ್ ಕ್ರೀಡಾಪಟುಗಳೂ ಆಗಿರುವ ರೋಹನ್ ಎಸ್. (ಶೇ.95.5), ರೋಹಿತ್ ಎಸ್. (ಶೇ.94.5) ಅವರು ಕಾಲೇಜಿನ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.
ಪ್ರಥಮ ವರುಷದಲ್ಲೇ ಅತ್ಯುತ್ತಮ ಫಲಿತಾಂಶ ತಂದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು, ಪ್ರಾಂಶುಪಾಲರಾದ ಜ್ಯೋತಿ ಎನ್.ಎ. ಹಾಗೂ ಬೋಧಕ ಉಪನ್ಯಾಸಕರನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಕಾಲೇಜಿನ ಆಡಲಿತ ಮಂಡಳಿ ಅಭಿನಂದಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!