ಶಿವಮೊಗ್ಗ, ಜು.14
ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ” ಲಾಕ್ ಡೌನ್ ” ಕುರಿತು ಜು.15 ನಾಳೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಇಂದಿಲ್ಲಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳ, ಕೈಗಾರಿಕೋದ್ಯಮಿಗಳು, ಜನಪ್ರತಿನಿಧಿಗಳು ಒಳಗೊಂಡತೆ ಎಲ್ಲಾ ಪ್ರಮುಖರ ಸಭೆಯನ್ನು ನಾಳೆ ಬೆಳಗ್ಗೆ ೧೧ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಇಂದು ಸಂಜೆ ಸ್ವಗೃಹದಲ್ಲಿ ಹೇಳಿದರು.
ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲಾಗವುದು ಎಂದು ಹೇಳಿದರು.
ಇನ್ನೊಂದು ವಿಶೇಷ
ನಾಳೆ ಲಾಕ್ ಡೌನ್ ನಿರ್ಧಾರ ಎಂದು ಹೇಳುತ್ತಿರು ಹೊತ್ತಿನಲ್ಲಾಗಲೇ ಶಿವಮೊಗ್ಗದ ಬಹುತೇಕ ವ್ಯಾಪಾರಸ್ಥರು ಇಂದೇ ಮದ್ಯಾಹ್ನದ ನಂತರ ವ್ಯಾಪಾರಕ್ಕೆ ಗುಡ್ ಬೈ ಹೇಳಿ ಸ್ವಯಂ ಘೋಷಿತ ಲಾಕ್ ಡೌನ್ ಗೆ ನಿರ್ಧರಿಸಿದ್ದರು.
ಈಶ್ವರಪ್ಪ ಅವರು, ನಮಗೆ ದೂರವಾಣಿಗಳ ಮೂಲಕ ಒಂದು ವಾರಗಳ ತನಕ ಪೂರ್ತಿ ಲಾಕ್ ಡೌನ್ ಮಾಡಿ ಎಂಬ ಕೂಗು ಸಾಕಷ್ಟು ಜನರಿಂದ ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಧದಿನ ಲಾಕ್‌ಡೌನ್ ಮಾಡಬೇಕೋ ಅಥವಾ ಪೂರ್ತಿ ಲಾಕ್ ಡೌನೋ ಎನ್ನುವ ಚರ್ಚೆಯನ್ನು ನಾಳೆ ನಡೆಸಲಿದ್ದೇವೆ ಎಂದು ಹೇಳಿದರು.
ನಾಳೆಯಿಂದ ಶಿವಮೊಗ್ಗದ ಚಿತ್ರಣ ಬದಲಾಗುವುದಂತೂ ಸತ್ಯ.