ರಾಕೇಶ್ ಶಿವಮೊಗ್ಗ

ಶಿವಮೊಗ್ಗ, ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಅಬ್ಬರದ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ಭಾನುವಾರದಿಂದ ಆರಂಭ ಗೊಂಡ ಮಳೆ ಮೂರು ದಿನಗಳಾದರೂ ಕಡಿಮೆಯಾಗದ ಕಾರಣ ಜನಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯ ನದಿ, ಕೆರೆ, ಹಳ್ಳ, ಕೊಳ್ಳಗಳಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ.
ಕಳೆದ ೨೪ ಗಂಟೆಯಲ್ಲಿ ಹೊಸನಗರ ದಾದ್ಯಂತ ಅತಿ ಹೆಚ್ಚು (೧೪೨.೪೦) ಮಿ.ಮಿ. ಮಳೆಯಾಗಿದ್ದು, ಶಿವಮೊಗ್ಗದಲ್ಲಿ ಅತಿ ಕಡಿಮೆ (೧೮ ಮಿ.ಮೀ.) ಮಳೆಯಾಗಿದೆ. ಇನ್ನುಳಿದಂತೆ ಭದ್ರಾವತಿಯಲ್ಲಿ ೪೮.೨೦ ಮಿ.ಮೀ, ತೀರ್ಥಹಳ್ಳಿಯಲ್ಲಿ ೭೯.೬೦ ಮಿ.ಮೀ, ಸಾಗರದಲ್ಲಿ ೭೦.೮೦ ಮಿ.ಮೀ, ಶಿಕಾರಿಪುರದಲ್ಲಿ ೨೭ ಮಿ.ಮೀ, ಸೊರಬ ದಲ್ಲಿ ೨೯.೨೦ ಮಿ.ಮೀ ಒಟ್ಟಾರೆ ಶಿವ ಮೊಗ್ಗ ಜಿಲ್ಲೆಯಲ್ಲಿ ಸರಾಸರಿ ೫೯.೩೧ ಮಿ.ಮೀ ಮಳೆಯಾಗಿದೆ.
ಉತ್ತಮ ಮಳೆಯಾಗುತ್ತಿರು ವುದರಿಂದ ಜಿಲ್ಲೆಯ ಜೀವನಾಡಿಗಳಾದ ತುಂಗಾ, ಭದ್ರಾ, ಲಿಂಗನಮಕ್ಕಿ, ಜಲಾಶಯಗಳ ಒಳಹರಿವಿನ ಪ್ರಮಾಣ ಏರಿಕೆ ಯಾಗಿದೆ.

ರೈತರ ಮೊಗದಲ್ಲಿ ಮಂದಹಾಸ
ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾ ಗುತ್ತಿದ್ದು, ಕೃಷಿ ಚಟುವಟಿಕೆ ಬಿರುಸು ಗೊಂಡಿದ್ದು, ರೈತರು ನೆಮ್ಮದಿಯ ನಿಟ್ಟು ಸಿರು ಬಿಟ್ಟಿದ್ದಾರೆ. ಜೋಳ, ಶುಂಠಿ, ಭತ್ತದ ನಾಟಿ ಮಾಡಿದ್ದ ರೈತರು ಮಳೆಗಾಗಿ ಕಾದು ಕೂತಿದ್ದರು

Hosanagara Rain Image

ಹೊಸನಗರದಲ್ಲಿ ಜನ ಕಂಗಾಲು: ಕಳೆದ ಮೂರು ದಿನಗಳಿಂದ ಹೊಸನಗರದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮಳೆಯ ಹೊಡೆತಕ್ಕೆ ಜನರು ಕಂಗಾಲಾಗಿ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಕುಳಿತುಕೊಳ್ಳವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ತಿಂಗಳುಗಳಿಂದ ಲಾಕ್‌ಡೌನ್ ಇದ್ದ ಕಾರಣ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದ ಜನರು ಈಗ ಮತ್ತೆ ಈ ಮಳೆಯ ಹೊಡೆತಕ್ಕೆ ಯಾವ ಕೆಲಸಕ್ಕೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದ ರೈತರಿಗೆ ಅನುಕೂಲ ಬಿಟ್ಟರೆ ಉಳಿದವರಿಗೆ ದಿಕ್ಕು ಕಾಣದಾಗಿದೆ ಅಂಗಡಿ ಹೋಟಲ್ ಮಾಲೀಕರು ಅಂಗಡಿ ಹೋಟಲ್‌ಗಳನ್ನು ತೆರೆದಿರುವುದು ಬಿಟ್ಟರೇ ವ್ಯಾಪಾರ ಇಲದೇ ಬಂದ ದಾರಿಗೆ ಸುಂಕವಿಲ್ಲದಂತಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!