ಶಿವಮೊಗ್ಗ,ಏ.30: ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರದ ಚುಕ್ಕಾಣ ಹಿಡಿದಂತಾಗಿದೆ. ಅಧಿಕಾರದ ಚುಕ್ಕಾಣ ಹಿಡಿಯಬೇಕೆಂಬ ಬಿಜೆಪಿಯ ಕನಸು ಭಗ್ನಗೊಂಡಿದೆ.
ಏ.27 ರಂದು 2 ಕಡೆ ನಡೆದ ಚುನಾವಣೆಯ ಮತ ಏಣ ಕೆಯು ಇಂದು ಶಾಂತಿಯುತವಾಗಿ ನಡೆಯಿತು. ಭದ್ರಾವತಿ ನಗರ ಸಭೆಯ 34 ವಾರ್ಡ್‍ಗಳಲ್ಲಿ ಕಾಂಗ್ರೆಸ್-18, ಜೆಡಿಎಸ್-11, ಬಿಜೆಪಿ-4 ಹಾಗೂ ಪಕ್ಷೇತರರೊಬ್ಬರು ಜಯಗಳಿಸಿದ್ದು, ಕಾಂಗ್ರೆಸ್ ಬಹುಮತ ಪಡೆದು ಆಡಳಿತ ನಡೆಸಲಿದೆ. ಅದೇ ರೀತಿ ತೀರ್ಥಹಳ್ಳಿಯ 15 ವಾರ್ಡ್‍ಗಳಲ್ಲಿ ಕಾಂಗ್ರೆಸ್-9 ಹಾಗೂ ಬಿಜೆಪಿ-6 ಸ್ಥಾನವನ್ನು ಗಳಿಸಿದೆ. ಎಲ್ಲಾ ನಿರೀಕ್ಷೆಗಳನ್ನು ಮೀರಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದಿದೆ. ಪಟ್ಟಣ ಪಂಚಾಯಿತಿಯಲ್ಲಿ ಕಳೆದ 25 ವರ್ಷಗಳ ಕಾಲ ಬಿಜೆಪಿಯ ಪಾರುಪತ್ಯ ಅಂತ್ಯಗೊಂಡಿದೆ
.

ಭದ್ರಾವತಿಯಲ್ಲಿ ಗೆದ್ದವರು:

ವಾರ್ಡ್-1 ರೇಖಾ ಪ್ರಕಾಶ್ (ಜೆಡಿಎಸ್), 2-ಗೀತಾ ರಾಜಕುಮಾರ್ (ಕಾಂಗ್ರೆಸ್), 3-ಜಾರ್ಜ್(ಕಾಂಗ್ರೆಸ್), 4- ಅನುಪಮಾ ಚನ್ನೇಶ್ (ಬಿಜೆಪಿ),5-ಶಶಿಕಲಾ(ಬಿಜೆಪಿ),6-ಶ್ರೇಯಸ್(ಕಾಂಗ್ರೆಸ್), 7-ಬಿ.ಎಂ. ಮಂಜುನಾಥ್(ಕಾಂಗ್ರೆಸ್), 8-ಬಷೀರ್ ಅಹಮದ್(ಕಾಂಗ್ರೆಸ್),9- ಚನ್ನಪ್ಪ(ಕಾಂಗ್ರೆಸ್), 10- ಅನಿತಾ(ಬಿಜೆಪಿ), 11- ಮಣ (ಕಾಂಗ್ರೆಸ್), 12-ಸುದೀಪ್ ಕುಮಾರ್ (ಕಾಂಗ್ರೆಸ್), 13-ಅನುಸುಧಾ ಮೋಹನ್(ಕಾಂಗ್ರೆಸ್), 14- ಬಿ.ಟಿ.ನಾಗರಾಜ್(ಕಾಂಗ್ರೆಸ್), 15-ಮಂಜುಳಾ ಸುಬ್ಬಣ್ಣ (ಜೆಡಿಎಸ್), 16-ವಿ.ಕದಿರೇಶ್(ಬಿಜೆಪಿ), 17-ಟಿಪ್ಪು ಸುಲ್ತಾನ್ (ಕಾಂಗ್ರೆಸ್), 18-ಮಹಮದ್ ಯೂಸಫ್(ಕಾಂಗ್ರೆಸ್), 19-ಬಸವರಾಜ್(ಜೆಡಿಎಸ್), 20-ಜಯಶೀಲ(ಜೆಡಿಎಸ್), 21- ವಿಜಯಮ್ಮ(ಜೆಡಿಎಸ್), 22-ಬಿ.ಕೆ.ಮೋಹನ್(ಕಾಂಗ್ರೆಸ್), 23-ಪ್ರೇಮಾ(ಜೆಡಿಎಸ್), 24-ಕೋಟೇಶ್ವರರಾಮ್(ಜೆಡಿಎಸ್), 25-ಆರ್.ಉದಯಕುಮಾರ್(ಜೆಡಿಎಸ್), 26-ಸರ್ವಮಂಗಳ ಭೈರಪ್ಪ(ಕಾಂಗ್ರೆಸ್), 27-ರೂಪವತಿ(ಜೆಡಿಎಸ್), 28-ಕಾಂತರಾಜು(ಕಾಂಗ್ರೆಸ್), 30-ಸೈಯದ್ ರಿಯಾಜ್(ಕಾಂಗ್ರೆಸ್), 31-ಪಲ್ಲವಿ(ಜೆಡಿಎಸ್), 32-ಸವಿತಾ ಉಮೇಶ್(ಜೆಡಿಎಸ್), 33- ಮೋಹನ್ ಕುಮಾರ್(ಪಕ್ಷೇತರ), 34-ಲತಾ ಚಂದ್ರಶೇಖರ್(ಕಾಂಗ್ರೆಸ್), 35-ಶೃತಿ ವಸಂತಕುಮಾರ್(ಕಾಂಗ್ರೆಸ್).
29ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರುತಿಯವರು ಅನಾರೋಗ್ಯದ ಕಾರಣ ನಿಧನ ಹೊಂದಿದ ಹಿನ್ನಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.

ತೀರ್ಥಹಳ್ಳಿಯಲ್ಲಿ ಗೆದ್ದವರು:

ವಾರ್ಡ್-1 ಸೊಪ್ಪುಗುಡ್ಡೆ ರಾಘವೇಂದ್ರ (ಬಿಜೆಪಿ), ವಾರ್ಡ್-2 ಯತಿರಾಜ್ (ಬಿಜೆಪಿ), ವಾರ್ಡ್-3 ದತ್ತಣ್ಣ(ಕಾಂಗ್ರೆಸ್), ವಾರ್ಡ್-4 ನಮ್ರತ್ (ಕಾಂಗ್ರೆಸ್), 5 ಸುಶೀಲಾ ಶೆಟ್ಟಿ (ಕಾಂಗ್ರೆಸ್), 6 ಶಬ್ನಮ್ (ಕಾಂಗ್ರೆಸ್), 7 ಜೆಯುಶೆಟ್ಟಿ (ಕಾಂಗ್ರೆಸ್), 8 ಜ್ಯೋತಿ ಗಣೇಶ್ (ಬಿಜೆಪಿ), 9 ಸಂದೇಶ್ ಜವಳಿ (ಬಿಜೆಪಿ), 10 ಗಣಪತಿ (ಕಾಂಗ್ರೆಸ್), 11 ಜ್ಯೋತಿ ಮೋಹನ (ಬಿಜೆಪಿ), 12 ಬಾಬಿ ರವೀಶ್ (ಬಿಜೆಪಿ), 13 ಗೀತಾ ರಮೇಶ್ (ಕಾಂಗ್ರೆಸ್), 14 ಮಂಜುಳಾ ನಾಗೇಂದ್ರ (ಕಾಂಗ್ರೆಸ್), ವಾರ್ಡ್-15 ಅಸಾದಿ (ಕಾಂಗ್ರೆಸ್).


ಪಟ್ಟಣ ಪಂಚಾಯಿತಿಯಲ್ಲಿ 25 ವರ್ಷಗಳ ಆಡಳಿತದ ವೈಫಲ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆ, ನಿವೇಶನ ಹಂಚಿಕೆ, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯವನ್ನು ನೀಡಲು ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ಮತದಾರರು 25 ವರ್ಷಗಳ ನಂತರ ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಮತ ನೀಡಿದ್ದಾರೆ. ಮತದಾರರ ನಿರೀಕ್ಷೆಗೆ ಹುಸಿಯಾಗದಂತೆ ಕ್ಷೇತ್ರದ ಅಭಿವೃದ್ಧಿ ಪಡಿಸಲಾಗುವುದು. ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಬಹುಮತ ನೀಡಿದ ಮತದಾರರಿಗೆ ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥ ಗೌಡ ಅಭಿನಂದಿಸಿದರು.
ಭದ್ರಾವತಿಯ ಹಳೇನಗರದ ಸಂಚಿಹೊನ್ನಮ್ಮ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ತೀರ್ಥಹಳ್ಳಿಯ ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಮತಗಳ ಏಣ ಕೆ ಕಾರ್ಯ ಆರಂಭವಾಯಿತು. 10 ಗಂಟೆವೇಳೆಗೆ ಸಂಪೂರ್ಣ ಫಲಿತಾಂಶ ಲಭಿಸಿತು.
ಮತಗಳ ಏಣ ಕೆ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

By admin

ನಿಮ್ಮದೊಂದು ಉತ್ತರ

error: Content is protected !!