ಬೆಂಗಳೂರು, ಏ.19:
ರಾಜ್ಯದಲ್ಲಿ ಕೊರೊನಾ ಅಲೆ ನೆಪದಲ್ಲಿ ಲಾಕ್ ಡೌನ್ ಆಗುತ್ತಾ, ಇಲ್ಲವೇ, ಶಾಲೆ ಮುಚ್ತಾವಾ, ಟಾಕೀಸ್ ಇರೊಲ್ವಾ ಎಂಂಬ ನೂರಾರು ಪ್ರಶ್ನೆ ಹಿಡಿದುಕೊಂಡ ಇಂದು ಸಂಜೆ ಜನರನ್ನ ಕೆಲ ಟಿವಿ ವರದಿಗಳು ಬೆಚ್ಚಿಬೀಳಿಸಿವೆ.
ಸರ್ಕಾರದ ನಕಲಿ ಗೈಡ್ ಲೈನ್ಸ್ ಮುಂದಿಟ್ಟುಕೊಂಡು ರಾಜ್ಯದ ಜನರನ್ನು ಇನ್ನಷ್ಟು ಗಾಬರಿಗೆ ತಳ್ಳಿದ ಕುಖ್ಯಾತಿ ಈ ಟಿವಿಗಳ ವರದಿಯದಾಗಿದೆ.
ಟಿವಿ ನ್ಯೂಸ್ ನಂಬದಿರಿ, ಅವರೇ ಸರ್ಕಾರದ ಆದೇಶ ತಯಾರು ಮಾಡಿಕೊಳ್ತಾರೆ…, ಕರ್ನಾಟಕ ಲಾಕ್ ಡೌನ್ ವಿಚಾರವಾಗಿ ತಲೆ ಬುಡ ಇಲ್ಲದೇ, ದಾಖಲೆ ರಹಿತವಾಗಿ ಬೊಂಬಡಾ ಬಜಾಯಿಸುವ ಟಿವಿ ನ್ಯೂಸ್ ವರದಿಗೆ ನಮ್ಮ ತುಂಗಾತರಂಗ ಪತ್ರಿಕೆಯ ಓದುಗರ ದೊಡ್ಡ ಬಳಗ ಆಕ್ರೋಶ ವ್ಯಕ್ತಪಡಿಸಿದೆ.
ನಕಲಿ ಆದೇಶದ ಬಗ್ಗೆ ಸರ್ಕಾರ ತನಿಖೆ ಮಾಡಬೇಕು. ಕೊರೊನಾ ಪ್ರಕರಣ ಹತ್ತಿಕ್ಕಲು ರಾಜ್ಯ ಸರ್ಕಾರ ತನ್ನದೇ ಕ್ರಮ ಕೈಗೊಂಡಿದೆ. ಆದರೆ, ಸುಳ್ಳು ವರದಿ ಹಬ್ಬಿಸಿ ಜನರಿಗೆ ಗಾಬರಿ ಮೂಡಿಸಿದ್ದಂತೂ ಕೆಲ ಟಿವಿ ನ್ಯೂಸ್ ಚಾನೆಲ್ ಗಳ ಕಾಯಕ. ಇದರ ವಿರುದ್ದ ಸರ್ಕಾರ, ಜನ ಸಿಡಿದೇಳಬೇಕಿದೆ. ಕೊರೊನಾ ಹತ್ತಿಕ್ಕಲು ಸರ್ಕಾರ ಬಿಗುವಿನ ಕ್ರಮ ಕೈಗೊಳ್ಳುವುದಂತೂ ಸತ್ಯ, ಆದರೆ ಲಾಕ್ ಡೌನ್ ಇಲ್ಲ. ಇಲ್ಲಿಯವರೆಗೂ ಸರ್ಕಾರದ ಆದೇಶ ಬಂದಿಲ್ಲ.