ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಧಕ್ಷೆ ಪವಿತ್ರ ರಾಮಯ್ಯ ಅವರು ಚೆನ್ನಗಿರಿ ತಾಲ್ಲೂಕು ಸೇವಾ ನಗರ ಗ್ರಾಮದಲ್ಲಿರುವ ರೆಗ್ಯುಲೇಟರಿ -೨ ನಾಲೆ ನಿರ್ವಹಣಾ ಕೇಂದ್ರಕ್ಕೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ನಾಲ್ಕು ತಿಂಗಳು ಹಗಲು ರಾತ್ರಿ, ಬಿಸಿಲು ಮಳೆ ಲೆಕ್ಕಿಸದೆ ಬೆವರು ಹರಿಸಿ ನಾಟಿ ಮಾಡಿದ ಭತ್ತ, ರಾಗಿ ಇನ್ನು ಮುಂತಾದ ಬೆಳೆಗಳನ್ನು ಕಟಾವು ಮಾಡುವ ಸಮಯ ಹತ್ತಿರದಲ್ಲಿದ್ದು, ಈ ಸಮಯದಲ್ಲಿ ನೀರಿನ ಅವಶ್ಯಕತೆ ಬಹಳಷ್ಟು ಇರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಅಚ್ಚುಕಟ್ಟು ಭಾಗದ ಅನ್ನದಾತರು ಉತ್ತಮ ಫಸಲು ಪಡೆಯುವ ಮೂಲಕ ನಾಡಿಗೆ ಉನಬಡಿಸಲಿದ್ದಾರೆ. ನೀರಿನ ಗೇಜ್ ಪ್ರತಿಬಾರಿ ಸುಮಾರು 13.2 ಅಡಿ ಇದ್ದರೆ ಮಾತ್ರ ಅಚ್ಚುಕಟ್ಟಿನ ಕೊನೆಯ ಭಾಗಗಳಿಗೆ ಸರಾಗವಾಗಿ ನೀರು ತಲುಪುತ್ತದೆ ಎಂದರು.
ನೀರಿನ ಏರಿಳಿತದಿಂದ ಕಳೆದ ಎರಡು ದಿನಗಳಿಂದ ದಾವಣಗೆರೆ ಹಾಗೂ ಮಲೆಬೆನ್ನೂರು ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಗ್ರಾಮಗಳಿಗೆ ನೀರಿನ ನಿರ್ವಹಣೆಯಲ್ಲಿ ಕೊಂಚಮಟ್ಟಿನ ಏರಿಕೆಯಾಗಿ ತೊಂದರೆಯಾ ಗಿತ್ತು. ತಕ್ಷಣವೇ ಅಧಿಕಾರಿಗಳೊಂದಿಗೆ ದಾವಣಗೆರೆ ಹಾಗೂ ಮಲೇಬೆನ್ನೂರು ಭಾಗಗಳಿಗೆ ನಾಲೆಯ ಮೂಲಕ ಜಲಾಶಯದ ನೀರು ವಿಭಜಿಸುವ ರೆಗ್ಯುಲೇಟರಿ-೨ ಕೇಂದ್ರಕ್ಕೆ ಭೇಟಿ ನೀಡಿ ಸದರಿ ಗೇಜ್ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ರೈತರಿಗೆ ನಾನು ಅಧಿಕಾರದಲ್ಲಿ ಇರುವವರೆಗೂ ಯಾವುದೇ ರೀತಿಯಲ್ಲಿ ತೊಂದರೆಯಾಗಲು ಅವಕಾಶ ಮಾಡಿ ಕೊಡುವುದಿಲ್ಲ, ಅಧಿಕಾರಿಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಮತ್ತೆಂದೂ ಗೇಜ್ ವ್ಯತ್ಯಾಸವಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ಪ್ರಸನ್ನ, ದಾವಣಗೆರೆ ವಿಭಾಗದ ಸಹಾಯಕ ಕಾರ್ಯಾ ಪಾಲಕ ಅಭಿಯಾಂತರ ರುದ್ರೇಶ್ ನಾಯ್ಕ್, ಕಿರಿಯ ಸಹಾಯಕ ಅಭಿಯಂತರರು ಉಪಸ್ಥಿತರಿದ್ದರು