ಶಿವಮೊಗ್ಗ,ಫೆ.೨೩
ಶಿವಮೊಗ್ಗ ಸಮೀಪದ ಹುಣಸೋಡಿನಲ್ಲಿ ನಡೆದ ಭಾರಿ ಸ್ಫೋಟ ಪ್ರಕರಣ ಮರೆಯಾಗುವ ಮುನ್ನವೇ ಮತ್ತೆ ಚಿಕ್ಕಬಳ್ಳಾಪುರದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕದ ಸಂಗತಿಯಾಗಿದೆ. ಈ ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು.
ಅವರು ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಶಿವಮೊಗ್ಗ ಘಟನೆಯಲ್ಲಿ ಶೇ.೯೯ರಷ್ಟು ಜನ ಬಿಜೆಪಿಯವರೇ ಆಗಿದ್ದಾರೆ. ಇಲ್ಲಿ ಈಶ್ವರಪ್ಪ ಸೇರಿದಂತೆ ಎಲ್ಲರೂ ತೆಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಬಿಐ ತನಿಖೆ ಬೇಡ ಎನ್ನುವ ಬಿಜೆಪಿಯವರು ಈಗ ಪ್ರಕರಣವನ್ನು ಮುಚ್ಚಿ ಹಾಕಲು ಹವಣಿಸುತ್ತಿದ್ದಾರೆ. ಈ ಎರಡು ಘಟನೆಗಳ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಹೇಳಿದರು.