ಭದ್ರಾವತಿ: ದೇಶದಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಸುಳ್ಳಿನ ಸರದಾರ ಮೋದಿ ಮತ್ತು ಕೋಮುವಾದ ಜಾತಿವಾದ ಹುಟ್ಟಿಸುತ್ತಿರುವ ಬಿಜೆಪಿ ಪಕ್ಷವನ್ನು ಬುಡ ಸಮೇತ ನಿರ್ಣಾಮ ಮಾಡದಿದ್ದಲ್ಲಿ ದೇಶಕ್ಕೆ ಮಾರಕವೆಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗುಡುಗಿದರು.
ಅವರು ಶನಿವಾರ ನಗರದಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ನೇತೃತ್ವದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ದ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾ ಡಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಗಳ ದುರಾಡಳಿಕ್ಕೆ ಇತಿಮಿತಿಯಿಲ್ಲವಾಗಿದೆ. ಬಡವರು, ರೈತರು, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಬಡವರು ಬದು ಕುವುದೇ ಕಷ್ಟಸಾಧ್ಯವಾಗಿದೆ. ೩ ತಿಂಗಳಲ್ಲಿ ದೇಶ ಬದಲಾಯಿಸುವುದಾಗಿ ಹೇಳಿ ೭ ವರ್ಷಗಳಾದರೂ ಬಡವರ ಕಲ್ಯಾಣ ಕಾರ್ಯಗಳಿಲ್ಲದೆ ಅಪಹಾಸ್ಯಕ್ಕೀಡಾಗಿದೆ. ಹಣ, ಕೋಮುವಾದ ಮತ್ತು ಜಾತೀವಾ ದದಿಂದ ದುರಾಡಳಿತ ಮಾಡುತ್ತಿದ್ದಾರೆ. ವಿಮಾನ, ರೈಲ್ವೆ, ಬ್ಯಾಂಕು, ವಿಮಾನ ನಿಲ್ದಾಣ ಮುಂತಾದ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿಐಎಸ್‌ಎಲ್ ಕಾರ್ಖಾನೆಯನ್ನು ಬಿಜೆಪಿ ಯವರೇ ಖರೀದಿ ಮಾಡುವ ಹುನ್ನಾರ ನಡೆ ಯುತ್ತಿದೆ. ಸ್ಥಳೀಯ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ೭೦ ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದರು ಅವರಿಗೆ ಚಿಂತೆ ಯಿಲ್ಲವಾಗಿದೆ. ಇದಕ್ಕೆ ಸಾಕ್ಷಿಯಾಗಿ ದೇಶದಲ್ಲಿ ೩.೫ ಲಕ್ಷ ಕಾರ್ಖಾನೆಗಳನ್ನು ಮುಚ್ಚಿ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ
ದೇಶದಲ್ಲಿ ದೇಶ ದ್ರೋಹ ಮಾಡುತ್ತಿರು ವುದೇ ಬಿಜೆಪಿಯಾಗಿದೆ. ಮಾಜಿ ಸಚಿವ ಅನಂತಕುಮಾರ್ ಹೆಗ್ಡೆ, ಕೆ.ಎಸ್.ಈಶ್ವರಪ್ಪ, ಕಟೀಲ್, ಸಿ.ಟಿ.ರವಿ, ಯತ್ನಾಳ್ ಮುಂತಾ ದವರೆಲ್ಲಾ ದೇಶ ವಿರೋಧಿ ಮಾತುಗಳನ್ನಾ ಡುತ್ತಿದ್ದರೂ ಪೋಲಿಸರು ಕ್ರಮಕೈಗೊಳ್ಳು ವಲ್ಲಿ ವಿಫಲರಾಗಿ, ಬಿಜೆಪಿಯ ಅನ್ಯಾಯ ಅಕ್ರಮದ ವಿರುದ್ದ ಮಾರಾಡುವವರ ಮೇಲೆ ಕೇಸು ಹಾಕುತ್ತಿರುವುದು ಸಲ್ಲದು.
ಈ ಹಿಂದೆ ಅಡುಗೆ ಅನಿಲಕ್ಕೆ ೫ ರೂ ಬೆಲೆ ಏರಿಕೆಯಾಗಿದ್ದಾಗ ಸಂಸದ ಶೋಭಾ ಕರಂದ್ಲಾಜೆ ಪ್ರತಿಭಟನೆ ಮಾಡಿದ್ದರು, ನಟ ಅಮಿತಾಬಚನ್, ಅಮೀರ್‌ಖಾನ್ ಬೆಲೆ ಏರಿಕೆ ವಿರುದ್ದ ಮಾತಾಡಿದ್ದರು. ಈಗೇನು ಹೇಳುತ್ತಾರೆಂದು ಮಾದ್ಯಮಗಳು ಅವರನ್ನು ಬೆನ್ನು ಹತ್ತಬೇಕು .ಮಾಧ್ಯಮಗಳೂ ಸಹ ಅನ್ಯಾಯವನ್ನು ಖಂಡಿಸುವಲ್ಲಿ ಮೃದು ಧೋರಣೆ ತಾಳಿರುವುದು ದೇಶಕ್ಕೆ ಒಳ್ಳೆ ಸಂದೇಶವಲ್ಲವೆಂದು ವಿಷಾದಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ದ ಹೋರಾಟ ರೂಪಿಸಿದ ಶಾಸಕ ಸಂಗಮೇ ಶ್ವರ್ ರವರ ಕೈ ಬಲ ಪಡಿಸಿದ್ದಲ್ಲಿ ಮುಂದೆ ಸಚಿವರಾಗುವುದರಲ್ಲಿ ಅನುಮಾನವಿಲ್ಲ ಅವರೇ ನಮ್ಮ ಭಾವೀ ಸಚಿವರೆಂದು ಕಿಮ್ಮನೆ ರತ್ನಾಕರ್ ಹೇಳಿದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಬಿಜೆಪಿ ಸರಕಾರಗಳ ಜನ ವಿರೋಧಿ ನೀತಿಯ ವಿರುದ್ದ ಮಾತನಾಡಿದರಲ್ಲದೆ ನಾನು ಮತ್ತು ನಮ್ಮ ಕುಟುಂಬ ಸದಾ ಕಾಲ ಜನರ ಸೇವೆಗೆ ಬದ್ದರಾಗಿದ್ದೇವೆ. ಕಳೆದ ಗ್ರಾಪಂ ಚುನಾವಣೆ ಯಲ್ಲಿ ೧೮ ಪಂಚಾಯಿತಿಗಳಲ್ಲಿ ಬಹುಮತ ನೀಡಿದ ಮತದಾರರನ್ನು ಅಭಿನಂದಿಸಿದರು. ಮಾಜಿ ವಿಧಾನ ಪರಷತ್ ಸದಸ್ಯ ಪ್ರಸನ್ನಕು ಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದ ರೇಶ್, ಜಿಲ್ಲಾ ಉಪಾಧ್ಯಕ್ಷ ಎನ್.ಕೃಷ್ಣ ಮೂರ್ತಿ, ಮಾಜಿ ಉಪ ಮೇಯರ್ ಮಹ ಮ್ಮದ್ ಸನಾವುಲ್ಲಾ, ರಾಜ್ಯ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ.ಖಾದರ್, ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರುಗಳಾದ ಟಿ.ಚಂದ್ರೇ ಗೌಡ, ಹೆಚ್.ಎಲ್.ಷಡಾಕ್ಷರಿ, ಮುಖಂಡ ಟಿ.ವಿ.ಗೋವಿಂದಸ್ವಾಮಿ ಮಾತನಾಡಿದರು.
ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ್ ವೃತ್ತದಿಂದ ಬಿ.ಹೆಚ್.ರಸ್ತೆ, ಡಾ:ರಾಜಕುಮಾರ್ ರಸ್ತೆ, ಮಾಧವಾಚಾರ್ ವೃತ್ತ, ಚೆನ್ನಗಿರಿ ರಸ್ತೆ, ರಂಗಪ್ಪ ವೃತ್ತ ಮೂಲಕ ತಾಲೂಕು ಕಚೇರಿ ಮುಂಭಾಗ ಜಮಾಯಿ ಸಿತು. ಮೆರವಣಿಗೆಯಲ್ಲಿ ಹತ್ತಾರು ಕತ್ತೆಗ ಳನ್ನು ಹಿಡಿದು ತರಲಾಗಿತ್ತು.
ಟ್ರಾಕ್ಟರ್‌ಗಳು, ಎತ್ತಿನ ಗಾಡಿಗಳು, ಖಾಲಿ ಸಿಲೆಂಡರುಗಳು ಪ್ರದರ್ಶನ ಮಾಡ ಲಾಯಿತು. ಸಹಸ್ರಾರು ಮಂದಿ ಭಾಗವಹಿ ಸಿದ್ದರು, ಮುಖಂಡರಾದ ಎಸ್.ಎಲ್. ಲಕ್ಷಣ್, ಬಾಬಾಜಾನ್, ಬಿ.ಕೆ.ಮೋಹನ್, ಬಿ.ಎಸ್. ಗಣೇಶ್, ಬಸವೇಶ್, ಬಿ.ಟಿ. ನಾಗರಾಜ್, ಬಾಲಕೃಷ್ಣ, ಅಂಜನಿ, ಚೆನ್ನಪ್ಪ, ಈರಣ್ಣ, ಅಮೀರ್‌ಜಾನ್, ದಿಲ್ದಾರ್, ಎಕ್ಕಾರ್, ಜೆಬಿಟಿ ಬಾಬು, ದಶರಥಗಿರಿ, ಪ್ರಾನ್ಸಿಸ್ ಮುಂತಾದ ವರಿದ್ದರು. ತಾಹಶೀಲ್ದಾರ್ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಅರ್ಪಿಸಲಾಯಿತು.