ಮಲೆನಾಡು ಕೊರೊನಾಗೆ ನಿಜಕ್ಕೂ ತತ್ತರಿಸಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ನಿನ್ನೆ ಐವರಿಗೆ ಸೊಂಕು ತಗುಲಿದ ಬೆನ್ನಲ್ಲೇ ಇಂದು ಇಪ್ಪತ್ತು ಜನರಿಗೆ ಸೊಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.
ಮೊನ್ನೆಯ 13 ಹಾಗೂ ನಿನ್ನೆಯ 5 ಸೇರಿ ಒಟ್ಟು 151 ಜನರಿಗೆ ಸೊಂಕು ಕಾಣಿಸಿಕೊಂಡಿತ್ತು. ಈಗ ಇಪ್ಪತ್ತು ಸೇರ್ಪಡೆ ಸೇರಿ 171ಕ್ಕೆ ಅಂಕೆ ತಲುಪುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ.
ಸಿಎಂ ತವರಲ್ಲಿ ಎಂಟು
ಇಂದು ಪತ್ತೆಯಾಗಿದೆ ಎನ್ನಲಾದ 20ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತವರು ಶಿಕಾರಿಪುರದ ಎಂಟು ಪ್ರಕರಣಗಳಿವೆ ಎನ್ನಲಾಗಿದೆ.
ಭದ್ರಾವತಿ ಥಂಡಾ
ಮಗಳಿಗೆ ಹೆಣ್ಣು ನೋಡಲು ಹೋಗಿ ಕೊರೊನಾ ಸೊಂಕು ತಗುಲಿಸಿಕೊಂಡಿದ್ದ ಭದ್ರಾವತಿ ಮೂಲದ ವ್ಯಕ್ತಿಯ ಮನೆಯ ಐವರಿಗೂ ಸೊಂಕು ಪತ್ತೆಯಾಗಿದೆಯೆನ್ನಲಾಗಿದೆ. ಅಂತೆಯೇ ತಮಿಳುನಾಡು ಮೂಲದಿಂದ ಬಂದ ಇಬ್ಬರಲ್ಲಿ ಸೊಂಕು ಕಾಣಿಸಿಕೊಂಡಿದೆ.
ಶಿವಮೊಗ್ಗದಲ್ಲಿ ಮೂರು
ತೀರಾ ಭಯ ಹುಟ್ಟಿಸಿರುವ ಶಿವಮೊಗ್ಗ ನಗರದಲ್ಲಿ ಮತ್ತೆ ಮೂರು ಪ್ರಕರಣ ಬಂದಿವೆಯೆನ್ನಲಾಗಿದೆ.
ರಿಪ್ಪನ್ ಪೇಟೆ, ತೀರ್ಥಹಳ್ಳಿ ಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ.
ಸ್ವಾಮಿ ವಿವೇಕಾನಂದ ಬಡಾವಣೆ, ಕುಂಬಾರಗುಂಡಿ, ತುಂಗಾನಗರ ಸೀಲ್ಡೌನ್ ಆದ ನಂತರ ಈಗ ರಾಜೇಂದ್ರ ನಗರ, ಜಿಎಸ್ ಕೆಎಂ ರಸ್ತೆ, ಭರ್ಮಪ್ಪ ಬೀದಿ ಸೇರಿದಂತೆ ಹಲವೆಡೆ ಸೀಲ್ಡೌನ್ ಮಾಡಲಾಗಿದೆ. ಮೂವರು ವೈದ್ಯರ ಜೊತೆ ಇಂದು ಮತ್ತೊರ್ವ ವೈದ್ಯರಿಗೆ ಸೊಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಭದ್ರಾವತಿ ಕಾಗದನಗರ, ಶಿರಾಳಕೊಪ್ಪ, ತೀರ್ಥಹಳ್ಳಿ ಶಿಕಾರಿಪುರದ ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ನಿನ್ನೆ ಶಿವಮೊಗ್ಗ ಸೊಂಕಿತರ ಸಂಖ್ಯೆ 151 ಆಗಿದ್ದರೆ, ಈಗಾಗಲೇ 109ಜನ ಗುಣಮುಖರಾಗಿದ್ದಾರೆ. ಚನ್ನಗಿರಿ ಮೂಲದ ಮಹಿಳೆ ಹಾಗೂ ಶಿಕಾರಿಪುರ ಮೂಲದ ಮಹಿಳೆ ಸೇರಿ ಇಬ್ಬರು ಸಾವು ಕಂಡಿದ್ದಾರೆ.
ಭಯದ ನಡುವೆ ಬದುಕುತಿರುವ ಮಲೆನಾಡಿನಲ್ಲಿ ಮಳೆಯಾಗುವ ಲಕ್ಷಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಅಗತ್ಯ ಎನ್ನಲಾಗುತ್ತಿದೆ.

By admin

ನಿಮ್ಮದೊಂದು ಉತ್ತರ

error: Content is protected !!