ಹೊಸನಗರ: ತಪ್ಪು ಮಾಡದೇ ಇದ್ದವರು ಯಾರಿಗೂ ಹೆದರಬೇಕಾಗಿಲ್ಲ ಡಿವೈಎಸ್‌ಪಿ ಅಥವಾ ಇನ್ನಿತರರ ಹೆಸರಿನಲ್ಲಿ ಪೋನ್ ಮಾಡಿ ನಿಮ್ಮ ಮೇಲೆ ದೂರು ಬಂದಿದೆ ತಕ್ಷಣ ಲೋಕಾಯುಕ್ತರ ಹೆಸರಿಗೆ ಅಥವಾ ಬೇರೆ ಅಧಿಕಾರಿಗಳ ಹೆಸರಿನ ಖಾತೆಗೆ ಹಣ ಹಾಕಿ ಇಲ್ಲವಾದರೇ ನಿಮ್ಮ ವಿರುದ್ಧ ದೂರು ದಾಖಲಿಸುತ್ತೇವೆ ಎಂಬ ಪೋನ್ ಕಾಲ್ ಬಂದರೆ ನೀವು ನಕಲಿ ಖಾತೆಗೆ ಹಣ ಜಮಾ ಮಾಡಿ ನಂತರ ದೂರು ದಾಖಲಿಸಲು ಹೋದರೆ ಪ್ರಪ್ರಥಮವಾಗಿ ನಿಮ್ಮ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್‌ರವರು ಹೇಳಿದರು.


ಹೊಸನಗರ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಸಾರ್ವಜನಿಕ ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ತಪ್ಪು ಮಾಡಿದವರು ಮಾತ್ರ ಹೆದರಬೇಕು ಇಲ್ಲವಾದರೇ ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆಯಿಲ್ಲ ಈಗಾಗಲೇ ಸಾಕಷ್ಟು ಜನರಿಗೆ ಸಾಕಷ್ಟು ಕರೆಗಳು ಬಂದಿದ್ದು ಲೋಕಯುಕ್ತರ ಹೆಸರಿನಲ್ಲಿಯೇ ಪೋನ್ ಕಾಲ್‌ಗಳು ಬರುತ್ತಿದೆ ಯಾವುದೇ ಅಧಿಕಾರಿಗಳು ಈ ಕರೆಗಳಿಗೆ ಹೆದರುವ ಅವಶ್ಯಕತೆಯಿಲ್ಲ ನಾವು ನೋಟಿಸ್ ಜಾರಿ ಮಾಡುತ್ತೇವೆಯೇ ಹೊರತು ಯಾರಿಗೂ ಪೋನ್ ಮಾಡುವುದಿಲ್ಲ ಎಂದು ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.


ಹೊಸನಗರದ ಸರ್ಕಾರಿ ಅಧಿಕಾರಿಗಳು ನೌಕರರು ಉತ್ತಮ ರೀತಿಯಲ್ಲಿ ಸ್ವಂದಿಸುತ್ತಿದ್ದಾರೆ;_
ಪ್ರತಿ ತಿಂಗಳು ನಾವು ಬಂದು ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸುವುದರ ಜೊತೆಗೆ ಸಂಬಂದ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಇದರ ಜೊತೆಗೆ ಸಾರ್ವಜನಿಕರು ನೀಡುವ ದೂರಿನ ಒಂದು ಪ್ರತಿಯನ್ನು ನಾವು ಇಟ್ಟುಕೊಂಡು ಒಂದು ಪ್ರತಿಯನ್ನು ಸಂಬಂದ ಪಟ್ಟ ಅಧಿಕಾರಿಗಳಿಗೆ ಆಯಾಯ ಇಲಾಖೆಗೆ ಕಳುಹಿಸುತ್ತಿದ್ದು ಸಪ್ಟಂಬರ್ ತಿಂಗಳಲ್ಲಿ ೭ ದೂರುಗಳು ಬಂದಿದ್ದು ಒಂದೇ ತಿಂಗಳಲ್ಲಿ ೭ದೂರುಗಳನ್ನು ಅಧಿಕಾರಿಗಳು ಬಗೆ ಹರಿಸಿದ್ದು ಪ್ರತಿ ತಿಂಗಳು ನಾವು ಸಾರ್ವಜನಿಕರಿಂದ ಪಡೆದ ದೂರುಗಳನ್ನು ಸರ್ಕಾರಿ ಅಧಿಕಾರಿಗಳು ಹಾಗೂ ನೌಕರ ವರ್ಗ ಇತ್ಯರ್ಥ ಪಡಿಸುತ್ತಿದ್ದಾರೆ ಹೊಸನಗರ ತಾಲ್ಲೂಕಿನಲ್ಲಿ ಅಧಿಕಾರಿಗಳ ವರ್ಗ ಸಾರ್ವಜನಿಕರ ಕುಂದುಕೊರತೆಯನ್ನು ಬಗೆ ಹರಿಸುತ್ತಿರುವುದರಿಂದ ಪ್ರಶಂಸೆ ವ್ಯಕ್ತ ಪಡೆಸಿದರು.


ಅಕ್ಟೋಬರ್ ತಿಂಗಳಲ್ಲಿ ೪ದೂರು ಒಂದು ತಿಂಗಳೊಳಗೆ ಇತ್ಯರ್ಥಕ್ಕೆ ಸೂಚನೆ;
ಅಕ್ಟೋಬರ್ ತಿಂಗಳಲ್ಲಿ ಪಟ್ಟಣ ಪಂಚಾಯತಿಯ ಎರಡು ದೂರುಗಳು ಕಂದಾಯ ಇಲಾಖೆಯ ಒಂದು ದೂರು ಹಾಗೂ ಮೆಸ್ಕಾಂ ಇಲಾಖೆಯ ಒಂದು ದೂರುಗಳು ಬಂದಿದ್ದು ಒಂದು ತಿಂಗಳೂಳಗೆ ಇತ್ತರ್ಥ ಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ತಹಶೀಲ್ದಾರ್ ರಶ್ಮೀ ಹಾಲೇಶ್, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಲೋಕಾಯುಕ್ತ ಸಿಬ್ಬಂದಿಯಾದ ಚನ್ನೇಶ್, ಜಯಂತ್, ಕಂದಾಯ ಇಲಾಖೆಯ ಶಿರಾಸ್ಥೆದಾರ್ ಕಟ್ಟೆ ಮಂಜುನಾಥ್, ಗುಮಾಸ್ಥರಾದ ಚಿರಾಗ್, ರೇವಿನ್ಯೋ ಇನ್ಸ್‌ಪೇಕ್ಟರ್ ಅಂಜನೇಯ, ಗ್ರಾಮ ಲೆಕ್ಕಾಧಿಕಾರಿ ಲೋಹಿತ್, ನವೀನ್ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಸಚಿನ್ ಹೆಗಡೆ ಹಾಗೂ ತಾಲ್ಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳ ವರ್ಗ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಹೆಚ್.ಎಸ್.ನಾಗರಾಜ್

By admin

ನಿಮ್ಮದೊಂದು ಉತ್ತರ

error: Content is protected !!