ಶಿವಮೊಗ್ಗ :- ಮಲೆನಾಡಿನ ವಿಶಿಷ್ಟ ಜನಪದ ಕಲೆಗಳಲ್ಲಿ ಒಂದಾದ ಅಂಟಿಗೆ ಪಂಟಿಗೆ ಕಲಾ ಪ್ರದರ್ಶನ ಶಿವಮೊಗ್ಗ ನಗರದಲ್ಲಿ ಅಕ್ಟೋಬರ್ 31 ನೆಯ ಗುರುವಾರ ಸಂಜೆ 6 ರಿಂದ ಬೆಳಗಿನ ಜಾವದವರೆಗೆ ಏರ್ಪಡಿಸಲು ತೀರ್ಮಾನ ಮಾಡಲಾಗಿದೆ.
ಪ್ರತಿವರ್ಷದಂತೆ ನಗರದ ಆಯ್ದ ಆಸಕ್ತ ಮನೆಗಳಿಗೆ ಭೇಟಿ ನೀಡಿ ಜ್ಯೋತಿ ಬೆಳಗಿಸುತ್ತ ಕಲಾವಿದರು ಹಾಡಿನ ಮೂಲಕ ಹರಸುವ ಈ ವಿಶಿಷ್ಟ ಕಲಾ ಪ್ರದರ್ಶನ ಅಂಟಿಗೆ ಪಂಟಿಗೆ ಅಳಿಯದಂತೆ ಸಂರಕ್ಷಿಸುವ ಸಲುವಾಗಿ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಿವಮೊಗ್ಗ ಶಾಖಾ ಮಠದ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಆಸಕ್ತಿಯಿರುವ ಎಲ್ಲಾ ಕನ್ನಡದ ಮನಸ್ಸುಗಳು ಈ ಕಾರ್ಯಕ್ರಮದ ಯಶಸ್ವಿಗೆ ನೆರವಾಗಲು ಡಿ. ಮಂಜುನಾಥ ಕೋರಿದ್ದಾರೆ. ಆಸಕ್ತರು ಡಿ. ಮಂಜುನಾಥ ದೂರವಾಣಿ ಸಂಖ್ಯೆ : 9449552795, ಶಿವಪ್ಪಮೇಸ್ಟ್ರು : 9449911652, ಮಹಾದೇವಿ : 8073052370, ಸ್ವಾಮಿ . ಎಂ. ಎಂ. 9448856911, ಕೃಷ್ಣಮೂರ್ತಿ ಹಿಳ್ಳೋಡಿ : 9448203018, ಡಿ. ಗಣೇಶ್ : 9901331667 ಇವರನ್ನು ಸಂಪರ್ಕ ಮಾಡಿ ಮಾಹಿತಿ ನೀಡಲು ಕೋರುತ್ತೇವೆ. ಅಕ್ಟೋಬರ್ ೩೧ ಗುರುವಾರ ರಾತ್ರಿ ನರಕ ಚತುರ್ದಶಿ ದಿನ ನಿಮ್ಮ ಮನೆಬಾಗಿಲಿಗೆ ಬರುತ್ತೇವೆ. ಮೊದಲೇ ಹೆಸರು ನೋಂದಣಿ ಮಾಡಲು ಡಿ. ಮಂಜುನಾಥ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ*