ಶಿವಮೊಗ್ಗ,ಅ.೧೪: ರಾಜ್ಯ ಸರ್ಕಾರ ಮತ್ತೆ ಮುಸಲ್ಮಾನರ ತುಷ್ಟೀಕರಣ ಮಾಡಲುಹೊರಟಿದೆ. ಯಾವುದನ್ನು ಮಾಡಬಾರದೋ ಅದನ್ನು ಮಾಡುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಪೋಲೀಸ್ ವ್ಯವಸ್ಥೆಯನ್ನು ದುರ್ಬಲ ಮಾಡಲು ಹೊರಟಿದೆ. ಪೊಲೀಸರಿಗೆ ಕಲ್ಲು ತೂರಿ, ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ಇಂತಹ ಪ್ರಕರಣದಲ್ಲಿ ಭಾಗಿಯಾದವರ ಮೇಲಿನಕೇಸ್ ವಾಪಸ್ ಪಡೆಯಲಾಗುತ್ತಿದೆ. ಸುಪ್ರೀಂ ಕೋರ್ಟ್‌ಗೆ ಹೋದರೂ ಜಾಮೀನು ಸಿಕ್ಕದ ಪ್ರಕರಣ ಇದಾಗಿದೆ. ಇಡೀ ವ್ಯವಸ್ಥೆಯನ್ನು ಬುಡ ಮೇಲು ಮಾಡುವ ಕಾನೂನು ವಿರೋಧಿ ಕಾರ್ಯ. ಇದು ಅಕ್ಷಮ್ಯ ಎಂದರು.


೧೫೮ ಜನರ ಬಂಧನ ಮಾಡಿದ್ದ ಪೋಲೀಸರ ಕ್ರಮ ಸ್ವಾಗತ ಮಾಡಿದ್ದೆವು. ಅಂತಹ ಪೊಲೀಸರ ಮೇಲೆ ಪ್ರಹಾರ ಮಾಡಿದೆ. ಕಾಂಗ್ರೆಸ್ ಸರ್ಕಾರಕ್ಕೆ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವೆ? ಇಡೀ ವ್ಯವಸ್ಥೆಯನ್ನು ಕ್ಯಾಬಿನೆಟ್ ವಹಿಸಿಕೊಳ್ಳಲಿ. ಇಡೀ ಪೊಲೀಸ್ ವ್ಯವಸ್ಥೆಯನ್ನು ವಾಪಸ್ ಪಡೆದುಬಿಡಿ. ಎಲ್ಲವನ್ನು ಕ್ಯಾಬಿನೆಟ್ ನೋಡಿಕೊಳ್ಳಲಿದೆ ಎಂದು ಘೋಷಿಸಿ ಪೊಲೀಸ್ ಠಾಣೆಗಳಿಗೆ ಬೀಗ ಹಾಕಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮುಂದಿನ ಸಚಿವ ಸಂಪುಟದಲ್ಲಿ ಈಗ ತೆಗೆದುಕೊಂಡ ತೀರ್ಮಾನವನ್ನು ಹಿಂಪಡೆದು ಕೇಸು ಮುಂದುವರಿಸಬೇಕು. ಇಲ್ಲದಿದ್ದರೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಚಳಿ ಬಿಡಿಸುವ ಕೆಲಸ ಬಿಜೆಪಿ ಮಾಡಲಿದೆ. ಈ ರೀತಿ ನಿರ್ಣಯ ಕೈಗೊಳ್ಳುವುದಾದರೆ ಪೊಲೀಸ್ ಏಕೆ ಬೇಕು ? ನ್ಯಾಯಾಲಯ ಏಕೆಬೇಕು? ಪೊಲೀಸ್ ಜೀಪ್ ಹತ್ತಿಕೊಂಡೇ ಗಲಬೆ ನಡೆಸಿದವರೆಲ್ಲಾ ಅಮಾಯಕರು ಎನ್ನುವುದಾದಾರೆ ರಕ್ಷಣಾ ಇಲಾಖೆಗೆ ಬೀಗ ಹಾಕಿ. ಇದು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ, ಎಐಎಂಐಎಂ ಸಂಘಟನೆ ಈ ಗಲಬೆಯಲ್ಲಿದೆ ಎಂಬುದು ಗೊತ್ತಾಗಿದೆ. ಆದರೂ ಇವರೆಲ್ಲಾ ಅಮಾಯಕರಾ ? ಎನ್‌ಐಎ ತನಿಖೆ ನಡೆಸಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ನ್ಯಾಯಾಲಯದ ಆದೇಶ ನೀಡಿದರೆ ಪ್ರಕರಣ ವಾಪಸ್ ಪಡೆಯುವುದಾಗಿ ಈಗ ಸಿಎಂ ಧ್ವನಿ ಬದಲಿಸುತ್ತಿದ್ದಾರೆ. ಹಾಗಾದರೆ ಕ್ಯಾಬಿನೆಟ್ ತಿರ್ಮಾನ ಏಕೆ ಬೇಕಿತ್ತು ಎಂದು ಪ್ರಶ್ನಿಸಿದರು.
ರಾಷ್ಟ್ರ ಭಕ್ತರು ಭಯೋತ್ಪಾದಕರಂತೆ, ಭಯೋತ್ಪಾದಕರು ಅಣ್ಣ ತಮ್ಮಂದಿರಂತೆ ಕಾಣುತ್ತಿದ್ದಾರೆ. ಪ್ರಹ್ಲಾದ್ ಜೋಷಿ ಭಯೋತ್ಪಾದಕರಂತೆ ಕಾಣುತ್ತಿರುವುದು ವಿಪರ್ಯಾಸ.


ನಿಮ್ಮ ದುರ್ನಡತೆಯಿಂದ, ನಿಮ್ಮಕೀಚಕ ಮನಸ್ಥಿತಿ ವಿರುದ್ಧ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಗೃಹಸಚಿವರು ಮಾತ್ರ ದುರ್ಬಲರಲ್ಲ. ಇಡೀ ಸರ್ಕಾರ ದುರ್ಬಲವಾಗಿದೆ. ಈ ಸರ್ಕಾರ ಷಂಡ ಹಾಗೂ ಭಂಡ ಸರ್ಕಾರವಾಗಿದೆ. ದೇಶ ಭಕ್ತ ಸಂಘಟನೆಗಳನ್ನು ಇಂದಿರಾಗಾಂಧಿ ಕಾಲದಿಂದ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸುವ ಕೆಲಸವಾಗಿದೆ. ಅದೇ ಮುಂದುವರಿದ ಭಾಗವೆ ಖರ್ಗೆಯವರ ಹೇಳಿಕೆಯಾಗಿದೆ ಎಂದರು.
ಶಾಂತಿನಗರದಲ್ಲಿ ನಡೆದ ಗಲಬೆಯಲ್ಲಿ ೮ ಜನರ ಮೇಲೆ ಕೇಸು ದಾಖಲಿಸಲಾಗಿತ್ತು. ಅವರ ಮೇಲೆ ಇದ್ದ ಮೂರು ಕೇಸ್‌ನ್ನು ೫ಕ್ಕೆ ಹೆಚ್ಚಿಸಲಾಗಿದ್ದು, ಈಗ ೧೨ ಜನರ ಪಟ್ಟಿಯನ್ನು ಹೊಸದಾಗಿ ಸಿದ್ದಪಡಿಸಲಾಗಿದೆ. ಅಮಾಯಕರ ಮೇಲೆ ಎಫ್‌ಐಆರ್ ಮಾಡಲಾಗುತ್ತಿದೆ. ಆದರೆ ಪೊಲೀಸ್ ಠಾಣೆಗೆ ನುಗ್ಗಿ ಹನುಮಾನ್ ಮಂದಿರಕ್ಕೆ ಕಲ್ಲು ಹೊಡೆದವರು ಇವರಿಗೆ ಅಮಾಯಕರಂತೆ ಕಾಣುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದರು.
ನಗರದಲ್ಲಿ ದಸರಾ ಹಬ್ಬ ಯಶಸ್ವಿಯಾಗಿ ನಡೆದಿದ್ದು, ಇದಕ್ಕಾಗಿ ನಗರದ ನಾಗರೀಕರು ಮತ್ತು ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.


ಕುಡಿಯುವ ನೀರು ಕೆಸರು ಮಿಶ್ರಿತವಾಗಿ ಬರುತ್ತಿದ್ದು, ಗ್ರಾಮೀಣ ಭಾಗದಲ್ಲಿ ಇಡೀ ಜಿಲ್ಲೆಯಾದಾದ್ಯಂತ ನಾಟಿ ಸಮಯವಾಗಿರುವುದರಿಂದ ವಿಪರೀತ ಮಳೆಯಿಂದಾಗಿ ಮಣ್ಣು ಮಿಶ್ರಿತ ಕೆಂಪು ನೀರು ಬರುತ್ತಿದ್ದು, ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳು ಶಕ್ತಿ ಮೀರಿ ಶ್ರಮ ಪಡುತ್ತಿದ್ದಾರೆ. ನಿನ್ನೆಯಿಂದ ತಿಳಿನೀರು ಬರುತ್ತಿದ್ದು, ಸಾರ್ವಜನಿಕರು ತಮ್ಮ ಸಂಪುಗಳನ್ನು ಒಮ್ಮೆ ಸ್ವಚ್ಛವಾಗಿರಿಸಲು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೂಡಾ ಮಾಜಿ ಅಧ್ಯಕ್ಷರಾದ ಜ್ಞಾನೇಶ್ವರ್, ಎನ್.ಜಿ. ನಾಗರಾಜ್, ಶ್ರೀನಾಗ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!