ಶಿವಮೊಗ್ಗ, ಅಕ್ಟೋಬರ್09
ಅ.06 ರಂದು ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಾಲಿಸಿದಾಗ ವೈದ್ಯರು ಪರೀಕ್ಷಿಸಿ, ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಮೃತ ವ್ಯಕ್ತಿಯು ಸುಮಾರು 5.7 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, 2 ಸೆ.ಮಿ ಕಪ್ಪು ಬಿಳಿ ಮಿಶ್ರಿತ ಗಡ್ಡ, 4 ಸೆ.ಮೀ ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಇದ್ದು ಮೂಗು ಚಪ್ಪಟೆಯಾಗಿ ಬಲಗಡೆ ವಾಲಿರುತ್ತದೆ. ತಿಳಿ ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಸೆ.26 ರಂದು ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿ ಪ್ರಜ್ಞಾಹೀನವಾಗಿ ಬಿದ್ದಿರುತ್ತಾರೆ. ಅವರನ್ನು ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸುವ ವೇಳೆ ಹೆಸರು ಕಿರಣ್ ಎಂದು ತಿಳಿದು ಬಂದಿದೆ.
ಚಿಕಿತ್ಸೆ ಫಲಿಸದೆ ಮೃತ ಪಟ್ಟಿರುತ್ತಾರೆ. ಮೃತ ವ್ಯಕ್ತಿ ಸುಮಾರು 35 ವರ್ಷ ವಯಸ್ಸು, 5.8 ಅಡಿ ಎತ್ತರ, , ಕೋಲು ಮುಖ, ಗೋಧಿ ಮೈಬಣ್ಣ, 3 ಸೆ.ಮಿ ಉದ್ದದ ಮೀಸೆ ಗಡ್ಡ, 5 ಸೆ.ಮೀ ಉದ್ದದ ತಲೆ ಕೂದಲು, ಎಡ ಪಕ್ಕೆ ಕೆಳಗೆ ಸೊಂಟದ ಹತ್ತಿರ ಹಳೆ ಗಾಯದ ಕಲೆ, ಮೈಮೇಲೆ ಡ್ರಾö್ಯಗನ್ ಚಿತ್ರ ಇರುತ್ತದೆ, ಕಪ್ಪು ಟೀ ಶರ್ಟ್ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಗಳ ವಾಸುದಾರರು ಯಾರದರು ಇದ್ದಲ್ಲಿ ದೊಡ್ಡಪೇಟೆ ಪೋಲಿಸ್ ಠಾಣೆ ದೂ.ಸಂ: 08182 261414 ಅಥವಾ 9916882544 ಸಂಪರ್ಕಿಸುವAತೆ ದೊಡ್ಡಪೇಟೆ ಪೋಲಿಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.