ಶಿವಮೊಗ್ಗ:ಅ.8 :

  ಪಾಂಡಿಚೇರಿಯಲ್ಲಿ ನಡೆದ 3ನೇ ರಾಷ್ಟ್ರ ಮಟ್ಟದ ಕಿರಿಯರ ವಿಭಾಗದ ಡಾಡ್ಜ್ ಬಾಲ್ ನಲ್ಲಿ ಗುರುಪುರದ ಬಿಜಿಎಸ್ ಶಾಲೆಯ ಪ್ರತಿಭಾನ್ವಿತ

ಕ್ರೀಡಾಪಟುಗಳಾದ ಆಶ್ರಿತಾ ಆರ್. ಮತ್ತು ಗಣೇಶ್ ಬಿ. ಆರ್. ಪ್ರತಿಭಾನ್ವಿತ ಕ್ರೀಡಾಪಟುಗಳು  ಪಂದ್ಯಾವಳಿಯಲ್ಲಿ ಭಾಗವಹಿಸಿ,

ಉತ್ತಮ ಆಟದ ಪ್ರದರ್ಶನ ನೀಡಿ, ಗಣೇಶ್,ಕ್ರೀಡೆಯಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದು  ಸಂಸ್ಥೆಗೆ  ಕೀರ್ತಿ ತಂದಿರುತ್ತಾನೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದು , ಓದಿನಲ್ಲಿಯೂ ಪ್ರತಿಭಾನ್ವಿತ  ಪ್ರತಿಭೆ ಆಗಿರುತ್ತಾನೆ.


     ಆಶ್ರಿತಾ ಆರ್. 9 ನೇ ತರಗತಿಯಲ್ಲಿ ಓದುತ್ತಿದ್ದು,ಕ್ರೀಡೆಯ ಜೊತೆಗೆ, ಓದಿನಲ್ಲಿಯೂ ಪ್ರತಿಭಾನ್ವಿತಳಾಗಿದ್ದಾಳೆ. ಈ ಪ್ರತಿಭೆಯು

ಕ್ರೀಡಾಕೂಟದಲ್ಲಿ ಭಾಗವಹಿಸಿ,ಉತ್ತಮ ಆಟದ ಪ್ರದರ್ಶನ ನೀಡಿ, ದಾಳಿ ಮತ್ತು ಅಷ್ಟೇ ರಕ್ಷಣಾತ್ಮಕ ಆಟವನ್ನು ಆಡಿ, ಪ್ರಥಮ ಸ್ಥಾನ ಮತ್ತು ಅತ್ಯಾಕರ್ಷಕ ಟ್ರೋಪಿಯನ್ನು  ಸಂಸ್ಥೆಯ ಮಡಿಲಿಗೆ ತಂದುಕೊಟ್ಟಿರುತ್ತಾರೆ.


    ಆಶ್ರಿತ ಆರ್. ಪುರಲೆಯ ಮೆಕ್ಯಾನಿಕ್ ರಾಜು ಮತ್ತು ಸಿಂಧು ಎಚ್.  ದಂಪತಿಗಳ ಪುತ್ರಿ ಯಾಗಿರುತ್ತಾಳೆ.
      ಈ ಪ್ರತಿಭೆಗಳು ಶಿವಮೊಗ್ಗ ಜಿಲ್ಲೆಗೂ ,ರಾಜ್ಯಕ್ಕೂ ಹಾಗೂ ಸಂಸ್ಥೆಗೆ ಕೀರ್ತಿ ತಂದ ಈ ಕ್ರೀಡಾಪಟುಗಳ ಮುಂದಿನ ಕ್ರೀಡಾ ಜೀವನ

ಯಶಸ್ವಿಯಾಗಲೆಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ

ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರು, ಆಡಳಿತ ಮಂಡಳಿಯ ಸದಸ್ಯರು, ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!