ಸಾಗರ : ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಳ್ಳತನವಾಗಿದ್ದ ಒಂದು ಲಕ್ಷ ರೂ. ಪತ್ತೆಹಚ್ಚಿ ಮಾಲೀಕರಿಗೆ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಹಿಂದಿರುಗಿಸಿದ ಘಟನೆ ನಡೆದಿದೆ.


ದಿನಾಂಕ ೨೬-೦೮-೨೦೨೪ರಂದು ಮಧ್ಯಾಹ್ನ ೨-೩೦ರ ಸುಮಾರಿಗೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪರಮೇಶ್ವರ್ ಎಂಬುವವರು ಬಸ್ಸಿಗಾಗಿ ಕಾಯುತ್ತಿದ್ದಾಗ ತಮ್ಮ ಬ್ಯಾಗ್‌ನಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು

ಹೋಗಿರುವ ಬಗ್ಗೆ ಪೇಟೆ ಠಾಣೆಗೆ ದೂರು ನೀಡಿದ್ದರು. ಪರಮೇಶ್ವರ್ ಅವರ ಬ್ಯಾಗನ್ನು ಬ್ಲೇಡಿನಿಂದ ಕೊಯ್ದು ಹಣ ಕಳ್ಳತನ ಮಾಡಲಾಗಿರುವ ಸಂಬಂಧ ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.


ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹುಬ್ಬಳ್ಳಿ ಗಂಗಾಧರ ನಗರದ ವಾಸಿ ಆಟೋ ಚಾಲಕ ಪರಶುರಾಮ ಕ್ಯಾರಕಟ್ಟಿ ಎಂಬಾತನನ್ನು

ಬಂಧಿಸಿ ಆತನಿಂದ ೧ ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು. ಬುಧವಾರ ಡಿ.ವೈ.ಎಸ್.ಪಿ. ನೇತೃತ್ವದಲ್ಲಿ ವಶಪಡಿಸಿಕೊಂಡ ೧ ಲಕ್ಷ ರೂ.ಗಳನ್ನು ವಾರಸುದಾರರಾದ ಪರಮೇಶ್ವರ್ ಅವರಿಗೆ ಹಿಂದಿರುಗಿಸಲಾಯಿತು.


ಡಿ.ವೈ.ಎಸ್.ಪಿ. ಗೋಪಾಲಕೃಷ್ಣ ನಾಯಕ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸೀತಾರಾಮ್, ಸಬ್

ಇನ್ಸ್‌ಪೆಕ್ಟರ್‌ಗಳಾದ ನಾಗರಾಜ್ ಟಿ.ಎಂ., ಯಲಪ್ಪ ಹಿರಗಣ್ಣನವರ್, ಟಿ.ಡಿ.ಸಾಗರ್‌ಕರ್, ಸಿಬ್ಬಂದಿಗಳಾದ ಸನಾವುಲ್ಲಾ, ವಿಕಾಶ್, ವಿಶ್ವನಾಥ್, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!