ಶಿವಮೊಗ್ಗ, ಸೆ.14:
ಇಲ್ಲಿನ ನಟನಂ ಬಾಲನಾಟ್ಯಕೇಂದ್ರ ಹೊರದೇಶವಾದ ಬ್ಯಾಂಕಾಕ್, ಥೈಲ್ಯಾಂಡ್‌ನಲ್ಲಿ ಭಾರತೀಯ ಕಲಾ ಮತ್ತು ಸಂಸ್ಕೃತಿಯವರು ಏರ್ಪಡಿಸಿದ್ದ ಅಂತರರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ನಟನಂ ಬಾಲನಾಟ್ಯ ಕೇಂದ್ರದ 50 ವಿದ್ಯಾರ್ಥಿಗಳಾದ ಕುಮಾರಿಯರಾದ ಧೃತಿ, ಅನಿಂದಿತ, ಸಾನ್ವಿ, ಸಂಜನ, ನೈದಿಲೆ, ವೈಷ್ಣವಿ, ಪೂಜಾ, ಸೌಮ್ಯ, ಸಾನಿಕ, ಸುಷ್ಮಿತ, ಅಮೂಲ್ಯ, ಪೂರ್ವಿಕ, ಸುದೀಕ್ಷ, ಭೂಮಿಕ, ಮನಸ್ವಿ, ಸಾನ್ವಿ, ಸಿಂಚನ, ಖುಷಿ, ತೇಜಸ್ವಿನಿ, ಮಾನಸ, ಕಶ್ವಿ, ಶ್ರೀಗೌರಿ, ಅನುಷ, ಸಾದ್ವಿ, ಮೇಘನ, ಸೌರವಿ, ಷಣ್ಮುಖಿ, ದೀಕ್ಷ, ಅನನ್ಯ, ಸುಜನ, ಸ್ಫೂರ್ತಿ, ರಮ್ಯಶ್ರೀ, ರೋಹಿತ, ಪ್ರೇರಣ, ದೇವಿಚಿನ್ಮಯಿ, ಲಿಪಿಕ, ಭೂಮಿಕ, ಶಾಂತಿಪ್ರಿಯ, ಮೌಲ್ಯ, ಉಪಾಸನ, ಗೆಹನ, ಆಕಾಂಕ್ಷ, ಶಾಲಿನಿ, ಸೀಮ, ಪ್ರಜ್ಞಾ ಇವರುಗಳು 6 ತಂಡಗಳಾಗಿ ಭಾಗವಹಿಸಿದ್ದರು.
ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಮೊದಲನೇ ಬಹುಮಾನ, ಭರತನಾಟ್ಯ ಸೀನಿಯರ್ ವಿಭಾಗದಲ್ಲಿ 3 ತಂಡಗಳು ಕ್ರಮವಾಗಿ ಮೊದಲನೇ, ಎರಡನೇ ಹಾಗೂ ಮೂರನೇ ಬಹುಮಾನಗಳನ್ನು ಪಡೆದಿರುತ್ತಾರೆ. ಇನ್ನೂ 2 ತಂಡ ಮೋಹಿನಿ ಆಟ್ಟಂ ನೃತ್ಯ ಪ್ರಕಾರದಲ್ಲಿ ಜೂನಿಯರ್,
ಸೀನಿಯರ್ ತಂಡಗಳಾಗಿ ಒಂದನೇ ಹಾಗೂ ಎರಡನೇ ಬಹುಮಾನಗಳನ್ನು ಪಡೆದಿರುತ್ತಾರೆ. ಇದಲ್ಲದೆ ಕರ್ನಾಟಕ ಜಾನಪದ ನೃತ್ಯದಲ್ಲಿ ತಲಾ ಒಂದೊಂದು ತಂಡವಾಗಿ ಭಾಗವಹಿಸಿ ಕ್ರಮವಾಗಿ ಮೊದಲನೇ, ಎರಡನೇ ಹಾಗೂ ಮೂರನೇ ಬಹುಮಾನಗಳನ್ನು ಪಡೆದಿರುತ್ತಾರೆ.
ಸುಪ್ರಿಯ, ಚೈತ್ರ, ನಾಟ್ಯಶ್ರೀ, ಸೌಮ್ಯ, ವಿದ್ವಾನ್ ಚೇತನ್, ಇವರುಗಳು ಆಹ್ವಾನಿತ ಕಲಾವಿದರಾಗಿ ನೃತ್ಯ ಪ್ರದರ್ಶನ ನೀಡಿದರು.
ಅಲ್ಲಿ ನಡೆದ ಅಂತರರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗೆ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್.ಕೇಶವಕುಮಾರ್ ಪಿಳ್ಳೈರವರನ್ನು ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು.
ರಾಜ್ಯಕ್ಕೆ ಕೀರ್ತಿ ತಂದ ಈ ತಂಡವನ್ನು ಶಿವಮೊಗ್ಗದ ನೆಚ್ಚಿನ ಶಾಸಕರಾದ ಚನ್ನಬಸಪ್ಪನವರು ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಬರಮಾಡಿಕೊಂಡು ಅಭಿನಂದಿಸಿದರು.
ಎಸ್.ಎಸ್.ಚಂದ್ರಪ್ಪ, ಆರ್.ಶೇಖರ್, ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್.ಕೇಶವಕುಮಾರ್ ಪಿಳ್ಳೈ ಮತ್ತು ವಂದನಾ ಕೇಶವಕುಮಾರ್ ಪಿಳ್ಳೈ ನೇತೃತ್ವದಲ್ಲಿ ನಟನಂ ತಂಡ ಶಿವಮೊಗ್ಗದಿಂದ ಹೊರದೇಶದಲ್ಲಿ ಪ್ರದರ್ಶನ ನೀಡಿ ಜಿಲ್ಲೆಗೆ ಹಿಂದಿರುಗಿದೆ.