ಶಿವಮೊಗ್ಗ: ಸಾವಿರಾರು ವಿದ್ಯಾರ್ಥಿಗಳ ಬದುಕಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಟ್ಟ ಸಂಸ್ಥೆ ರಾಷ್ಟ್ರೀಯ ಶಿಕ್ಷಣ ಸಮಿತಿ ಎಂದು ವಿಧಾನ ಪರಿಷತ್ ಸದಸ್ಯ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಳೆಯ ವಿದ್ಯಾರ್ಥಿ ಡಿ.ಎಸ್.ಅರುಣ್ ಹೇಳಿದರು.

ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಲೇಜಿನ ಕಟ್ಟಡ ಕಂಡ ತಕ್ಷಣ ಕಾಲೇಜಿನಲ್ಲಿ ಕಳೆದ ಅದ್ಭುತ ಕ್ಷಣಗಳು ನೆನಪಾಗುತ್ತವೆ ಎಂದು ತಿಳಿಸಿದರು.

ಮನೆಯಲ್ಲಿ ರಾಜಕೀಯ ವಾತಾವರಣ ಇದ್ದರೂ ನಾನು ರಾಜಕಾರಣಿ ಆಗುತ್ತೇನೆ ಎಂದುಕೊಂಡಿರಲ್ಲಿಲ್ಲ. ನನ್ನ ವಿಧಾನ ಪರಿಷತ್ ಸ್ಥಾನದಲ್ಲಿ ಶೇ 100 ಹಾಜರಾತಿ ಇದೆ. ನಾವು ಪಡೆದ ಶಿಕ್ಷಣದಿಂದ ಉತ್ತಮ ಸೇವೆ ಮಾಡಲು ಸಾಧ್ಯವಾಗುತ್ತಿದೆ ಎಂದರು.

ಮಾಜಿ ಶಾಸಕ, ಕಾಲೇಜಿನ ಹಳೆಯ ವಿದ್ಯಾರ್ಥಿ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ನಮ್ಮ ಕಾಲೇಜಿನ ಪ್ರತಿಭೆಗಳನ್ನು ಗುರುತಿಸಿ ಕ್ಯಾಂಪಸ್‌ಗೆ ಬರಲು ಅನುವು ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ವಿದ್ಯೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಉತ್ತಮವಾಗಿ ಬದುಕಲು, ರಾಜಕೀಯ ಮಾಡಲು ವಿದ್ಯೆ ಬೇಕೆ ಬೇಕು ಎಂದು ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ದೇವಿಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ನೇಹಿತರನ್ನು ಎಂದೂ ಮರೆಯಬೇಡಿ. ಕಾಲೇಜಿನ ಒಡನಾಟವಿದ್ದರೆ ಅಭ್ಯಾಸ ಮಾಡಿದ ಅಧಿಕಾರಿಗಳಿಂದ ಸುಲಭ ಸಹಾಯ ದೊರಕುತ್ತದೆ ಎಂದರು.

ಪ್ರೊ. ಮಮತಾ ಮಾತನಾಡಿ, ನಿಮ್ಮ ಸ್ನೇಹಿತರಿಂದ ಪ್ರತಿಭಾವಂತ ಬಡ ಮಕ್ಕಳಿಗೆ ದೇಣಿಗೆ ಪಡೆಯಿರಿ. ವ್ಯಾಟ್ಸ್ಆಪ್ ಗ್ರೂಪ್ ಮಾಡಿಕೊಂಡು ಎಲ್ಲರೊಂದಿಗೆ ಸ್ನೇಹದಿಂದ ಇರಬೇಕು. ಪ್ರತಿ ವರ್ಷ ಹತ್ತು ರ‍್ಯಾಂಕ್ ಹೊಂದುತ್ತಿದ್ದೇವೆ. ಹಳೆಯ ವಿದ್ಯಾರ್ಥಿಗಳು ನಮ್ಮ ಕಾಲೇಜ್ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸಲು ಅನುಕೂಲವಾಗುವಂತ ವಾತಾವರಣ ಸೃಷ್ಟಿಸಬೇಕು ಎಂದು ತಿಳಿಸಿದರು.

ವೈಷ್ಣವಿ ಪ್ರಾರ್ಥನೆ ಶಾಂಭವಿ ಸ್ವಾಗತಿಸಿದರು. ಅಧ್ಯಕ್ಷ ಎಸ್.ಎಸ್.ವಾಗೇಶ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶಿವಾನಂದ ಸಾನು, ಜಿ.ವಿಜಯಕುಮಾರ್ ಹಾಗೂ ಹಳೆಯ ವಿದ್ಯಾರ್ಥಿಗಳು ಸಾಂಸೃತಿಕ ಕಾರ್ಯಕ್ರಮ ನಡೆಸಿದರು. ಉಷಾದೇವಿ ನಿರೂಪಿಸಿದರು. ಸತಿದೇವಿ ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!