ಇದನ್ನೂ ಓದಿ:

https://tungataranga.com/?p=33988
ನಿಯತ್ತಿಲ್ಲದ ಬುಳ್ಳಾಟದವ್ರಿಗೆ ಹತ್ ಪೈಸೆ ಬಿಚ್ಚಬೇಡ್ರಿ!/ ಗಜೇಂದ್ರಸ್ವಾಮಿ ಅವರ ನೆಗಿಟೀವ್ ಥಿಂಕಿಂಗ್ ಅಂಕಣದ ಸ್ಪೆಷಲ್
ಅಂಕಣ ಓದಲು ಲಿಂಕ್ ಬಳಸಿ


ವಾರದ ಅಂಕಣ- 10
ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ

ಕೆಲವೇ ಕೆಲವು ನಿಕೃಷ್ಟ ಮನಸುಗಳು ಕಿತ್ತು ಹೋದಂತೆ ಹಣ ಕೊಡದ ವಿಷಯದ ಬಗ್ಗೆ ನಿರಂತರವಾಗಿ ನಿಮ್ಮ ಪ್ರೀತಿಯ ನೆಗೆಟಿವ್ ಥಿಂಕಿಂಗ್ ಬರಹವನ್ನು ಓದಿದ್ದೀರಿ. ಈಗ ಇದೇ ನೆಗೆಟಿವ್ ಮನಸುಗಳು ಹೇಗೆ ಸಾಮಾಜಿಕ ರಾಜಕೀಯ ಪಕ್ಷಗಳಲ್ಲೂ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಾರೆ. ಹಲ್ಲು ಕಿಸಿಯುತ್ತಾರೆ ಎಂಬುದರ ಬಗ್ಗೆ ಸೂಕ್ಷ್ಮ ಪರಿಚಯವಿರುವ ಅಂಕಣ ಇಂದು ನಿಮ್ಮ ಮುಂದಿದೆ.


ರಾಜಕೀಯ ಎಂದರೆ ಅದು ಕೇವಲ ಪಕ್ಷಕ್ಕೆ ಸೀಮಿತವಾಗಿಲ್ಲ ಎಲ್ಲದರಲ್ಲೂ ಎಲ್ಲಾ ಸರ್ಕಾರಿ ಅನುದಾನ ಅನುಕೂಲತೆಗಳನ್ನು ರಾಜಕೀಯ ಮಾಡುವ ಖತರ್ನಾಕ್ ಮೈಂಡಿನ ಕೆಲವೇ ಕೆಲವು ಮನಸ್ಸುಗಳು ಸಮಾಜದ ಸ್ವಸ್ಥ ಮನಸ್ಸುಗಳನ್ನು ಹೇಗೆ ವಂಚಿಸಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿದೆ.
ನೀವು ಅದರಲ್ಲಿ ಅದೆಷ್ಟೋ ನೋವುಗಳನ್ನು ಅನುಭವಿಸಿದ್ದೀರಿ. ಕಿತ್ತುಹೋದ ಹಣ ಎಂದು ಲಕ್ಷ್ಮಿಯನ್ನೇ ಮೋಸಗಾರನಿಗೆ ಅರ್ಪಿಸಿ ತಮ್ಮ ಸಣ್ಣ ಸಣ್ಣ ಕೆಲಸ ಮಾಡಿಸಿಕೊಂಡಿದ್ದೀರಿ ಅಲ್ಲವೇ?  ಇದು ವಾಸ್ತವದ ಸತ್ಯಾಂಶ.


ಜಗತ್ತಿನ ಕೆಲವೇ ಕೆಲವು ನಕಾರಾತ್ಮಕ ಮನಸುಗಳು ಸಕಾರಾತ್ಮಕ ಅಂಶಗಳನ್ನು ಹೇಗೆ ತಿಂದು ಮುಂಡಾಮೋಚುತ್ತಾರೆ. ಹೇಗೆ ವಂಚಿಸುತ್ತಾರೆ ಎಂಬುದನ್ನು ಬಿಂಬಿಸುವ ಅಂಕಣವೇ ಇಂದಿನ ನೆಗೆಟಿವ್ ಥಿಂಕಿಂಗ್ ಸ್ಪೆಷಾಲಿಟಿ.
ಈಗ ಮೊದಲು ರಾಜಕೀಯ ಪಕ್ಷಗಳ ಹೋಗುತ್ತೇನೆ. ಆ ಪಕ್ಷದಲ್ಲಿ ಎಷ್ಟೋ ದಿನ ಬಾಗಿಲು ತೆಗೆಯುವವರಡೆ ಇಲ್ಲದಾಗ ಬಾಗಿಲು ತೆಗೆದು ಕಸ ಗುಡಿಸಿ ಅದೊಂದು ಶುಭ ದೇವಾಲಯವನ್ನಾಗಿ ಮಾಡುವ ಕೆಲವೇ ಕೆಲವು ಮನಸ್ಸುಗಳು ಅದೇ ಕೆಲಸವನ್ನು ನಿರಂತರವಾಗಿ ಮಾಡುತ್ತಾರೆ.
ಯಾವುದಾದರೂ ಚುನಾವಣೆ ಬರುತ್ತದೆ ಎಂಬುದು ಗೊತ್ತಾದರೆ ಸಾಕು ಟಿಕೆಟ್ ಪಡೆಯಲು ನಾಯಿಯಂತೆ ಹಿಂದೆ ಮುಂದೆ ನಾನೊಬ್ಬ ಈ ಪಕ್ಷದವನು ಎಂದು ಬಿಂಬಿಸುತ್ತಾ ಕೆಲವರು ಬೆಳೆಯುತ್ತಾರೆ. ಇದು ಎಲ್ಲಾ ಪಕ್ಷದಲ್ಲಿ ಇರುವ ಸಾಮಾನ್ಯ ವಿಷಯವಾಗಿದ್ದರೂ ಸಹ ಇಂತಹ ಅವಧಿಯಲ್ಲಿ ಬರುವಂತಹ ವ್ಯಕ್ತಿಯನ್ನು ಆ ಮುಖಂಡ ಮಣಿಗಳು ಅದು ಹೇಗೆ ತಾನೇ ಒಪ್ಪಿಕೊಳ್ಳುತ್ತಾರೋ,?  ಅದರಲ್ಲೂ “ಮಾಮೂಲಿ” ಎಂಬ ಅಂಡರ್ ಎಸ್ಟಿಮೇಟ್ ಸ್ಕ್ರೀಮ್ ಇದಿಯೋ ಗೊತ್ತಿಲ್ಲ.


ಒಟ್ಟಾರೆ ಚುನಾವಣೆ ಒಂದೆಡೆಯಾದರೆ ಮತ್ತೊಮ್ಮೆ ಯಾವ ಪಕ್ಷ ಅಧಿಕಾರದಲ್ಲಿರುತ್ತೋ ಆ ಪಕ್ಷದ ಬುಡದಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವ ಖದೀಮರು ಕೆಲವರಿದ್ದಾರೆ. ಅದೇ ಪಕ್ಷಕ್ಕಾಗಿ ಹಗಲಿರಳು ದುಡಿದವರು ಅಲ್ಲಿ ಅಂತಹ ಸಂದರ್ಭದಲ್ಲಿ ದೂರವಾಗುತ್ತಾರೆ ಎಂಬುದು ಇಂದಿನ ವಾಸ್ತವ ಸತ್ಯ. ಇದೆ ಇಂದಿನ ಪ್ರಸ್ತುತ ಜಗತ್ತಿನ ಅದರಲ್ಲೂ ದೇಶದ ಅದರಲ್ಲೂ ಶಿವಮೊಗ್ಗದ ಕಥನ ಎಂದರೆ ತಪ್ಪಾಗಲಿಕ್ಕಿಲ್ಲ.


ನಾಳಿನ ನಮಗಾಗಿ ಸಮಾಜಕ್ಕಾಗಿ ಒಂದಿಷ್ಟು ಕಟ್ಟಿಕೊಡುವ, ಕಟ್ಟಿಡುವ ಕನಸು ಹೊತ್ತ ಅದೆಷ್ಟೋ ಪ್ರಾಮಾಣಿಕರು ಈ ಕಿತ್ತೋದ ಮಸಾಲೆ ವ್ಯಕ್ತಿಗಳ ಜೊತೆ ಮರ್ಜಿಯಾಗುತ್ತಾರೆ. ಅದರಲ್ಲೂ ರಾಜಕೀಯ ಪಕ್ಷದ ಗುರುವಿನ ಮಣಿಗಳು ತಮ್ಮ ಬೇಳರಕಾಳು ಬೇಯಿಸಿಕೊಳ್ಳಲು ಇಂತಹ ಹೊಸ ಗಿರಾಕಿಗಳನ್ನು ಸೇರಿಸಿಕೊಳ್ಳುತ್ತಾರೆ. ಅವರು ಯಾವಾಗ ಕೈ ಕೊಡ್ತಾರೆ ಗೊತ್ತಿಲ್ಲ.
ನಿಜವಾಗಿಯೂ ನಿಯತ್ತಾಗಿ ಆ ಪಕ್ಷದ ಬುಡದಲ್ಲಿ ಕೆಲಸ ಮಾಡಿದವರನ್ನು ತಾತ್ಸಾರ ಮಾಡುತ್ತಾರೆ ಎಂಬುದೇ ನಿಜವಾದ ನೆಗೆಟಿವ್ ಥಿಂಕಿಂಗ್ ಅಲ್ಲವೇ?


ಏನಾದರೂ ಆಗಲಿ ಒಟ್ಟಾರೆ ಒಂದಿಷ್ಟು ಮಾಮೂಲಿ ಮಾಡಿಕೊಳ್ಳಬೇಕು, ತಮ್ಮ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಸೆ ಪಡುವ ಕದೀಮ ಮಣಿಗಳು ಇಲ್ಲಿ ನಾಟಕವಾಡುತ್ತಾ ಏಕಾಏಕಿ  ಪ್ರತ್ಯಕ್ಷವಾಗಿ ನಾಟಕವಾಡಿ ತಮ್ಮ ಬೇಳೆಕಾಳನ್ನು ಬೇಯಿಸಿಕೊಳ್ಳುವುದು ವಾಸ್ತವವಲ್ಲವೇ? ಪಕ್ಷ ಸೋತಾಗ ಬೇರೆ ದಾರಿ ಹುಡುಕ್ತಾರಲ್ಲವೇ?
ಆ ಪಕ್ಷದ ಉಳಿವಿಗಾಗಿ ಆ ಪಕ್ಷದ ಶ್ರೇಯಸ್ಸಿಗಾಗಿ ಹಗಲಿರಲು ದುಡಿದವರು ಮೂಲೆಗುಂಪಾಗುವುದು ಮಾಮೂಲಿ ಅಲ್ಲವೇ? ಇದೆ ಇಂದಿನ ನೆಗೆಟಿವ್ ಥಿಂಕಿಂಗ್.

By admin

ನಿಮ್ಮದೊಂದು ಉತ್ತರ

error: Content is protected !!