ಶಿವಮೊಗ್ಗ,ಜು.೧೧:
ನಟನಂ ಬಾಲ ನಾಟ್ಯ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಕಲಾ ವಿಶ್ವವಿದ್ಯಾನಿಲಯ ಮೈಸೂರ್ ಇವರ ವತಿಯಿಂದ ಮಾನ್ಯತೆ ಸಿಕ್ಕಿದೆ ಎಂದು ಕೇಂದ್ರದ ಅಧ್ಯಕ್ಷ ಡಾ.ಎಸ್.ಕೇಶವಕುಮಾರ್ ಪಿಳೈ ಹೇಳಿದರು.


ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಟನಂ ಬಾಲ ನಾಟ್ಯ ಕೇಂದ್ರವು ಸುಮಾರು ೩೫ ವರ್ಷಗಳಿಂದ ತಮ್ಮ ನೃತ್ಯಸೇವೆಯನ್ನು ಸಲ್ಲಿಸುತ್ತಿದ್ದು ಪ್ರಸ್ತುತ ಪ.ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರಿನಿಂದ ಮಾನ್ಯತೆ ಪಡೆದು ಭರತನಾಟ್ಯ ಸರ್ಟಿಫಿಕೇಟ್ ಕೋರ್ಸ್ ಹಾಗೂ ಭರತನಾಟ್ಯ ಡಿಪ್ಲೋಮೋ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿ ಸಿಕ್ಕಿದೆ. ಇದಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಕಲಿಯಲಾಗಿದ್ದು, ಜು.೩೦ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.


ಸರ್ಟಿಫಿಕೇಟ್ ಕೊರ್ಸಿಗೆ ೧೨ ವರ್ಷ ವಯೋ ಮಿತಿ ಮೇಲ್ಪಟ್ಟಿರಬೇಕು. ಹಾಗೂ ಇದು ಅರು ತಿಂಗಳ ಕೋರ್ಸ್ ಆಗಿರು ರೀತಿ ಭರತನಾಟ್ಯ ಡಿಪ್ಲೋಮೋ ಕೋರ್ಸ್‌ಗೆ ಒಂದು ವರ್ಷ ಅವಧಿಗಳಾಗುತ್ತದೆ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆ ಉತ್ತೀರ್ಣ ಹೊಂದಿರಬೇಕು ಎಂದರು.


ಭರತನಾಟ್ಯದ ಕೋರ್ಸಿಗಾಗಿ ವಿದ್ಯಾರ್ಥಿಗಳು ಮೈಸೂರು ಅಥವಾ ಬೆಂಗಳೂರಿಗೆ ಹೋಗಬೇಕಿತ್ತು, ಇದನ್ನು ಮನಗಂಡು ಶಿವಮೊಗ್ಗದಲ್ಲಿಯೇ ನಡೆಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಈ ಕೋರ್ಸ್‌ಗಳನ್ನು ಶಿವಮೊಗ್ಗದಲ್ಲಿ ಆರಂಭಿಸಲಾಗಿದೆ. ನಗರದ ಗಂಧರ್ವ ನಗರ ಹಾಗೂ ಬಿಬಿ ರಸ್ತೆಯಲ್ಲಿ ರುವ ಸತ್ಯ ಪ್ರಮೋದ ಸಮುದಾಯ ಭವನದಲ್ಲಿ ತರಗತಿಗಳು ನಡೆಯುತ್ತವೆ. ಮುಂದೆ

ಭರತನಾಟ್ಯ ಡಿಗ್ರಿ ಅಂದರೆ ಎಂ ಡಾನ್ಸ್ ಕೋರ್ಸ್ ಗಳನ್ನು ನಡೆಸಲಾಗುತ್ತದೆ. ಈ ಕೋರ್ಸ್‌ಗಳಿಗೆ ಬೆಳಗಿನ ಬ್ಯಾಚ್ ಹಾಗೂ ಸಂಜೆ ಕೋರ್ಸಗಳನ್ನು ನಡೆಸಲಾಗುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಜು.೩೦ರ ಒಳಗೆ ಅರ್ಜಿ ಸಲ್ಲಿಸ ಬೇಕು ನಂತರ ದಂಡ ಶುಲ್ಕ ೧೫ರವರೆಗೆ ಅವಕಾಶ ಇರುತ್ತದೆ.
ಹೆಚ್ಚಿನ ಮಾಹಿತಿಗಳಿಗೆ : ೯೪೪೮೭೯೨೦೫೪, ೯೪೪೯೦೪೯೫೨೯ ಸಂಪರ್ಕಿಸಬಹುದಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!