ಶಿವಮೊಗ್ಗ: ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮಾಡಿ ಸಾರ್ವಜನಿಕರಿಂದ ಶ್ಲಾಘನೆಗೆ ಕಾರಣರಾಗಿದ್ದಾರೆ.


ಎಲ್ಲಿ ಬೇಕೆಂದರಲ್ಲಿ ವಾಹನಗಳ ನಿಲುಗಡೆ ಮಾಡಿ, ಸಂಚಾರ ವ್ಯವಸ್ಥೆಗೆ ಕಂಟಕವಾಗುತ್ತಿದ್ದ ಪಾಕಿಂಗ್ ಪ್ರಾಬ್ಲಂಗೆ ಶಿವಮೊಗ್ಗದ ಟ್ರಾಫಿಕ್ ಪೊಲೀಸರು ಇತಿಶ್ರೀ ಹಾಡಿದ್ದಾರೆ. ಹೌದು, ಶಿವಮೊಗ್ಗದ ಜನನಿಬಿಡ ಹಾಗೂ

ಸದಾ ಕಾಲ ಟ್ರಾಫಿಕ್ ನಿಂದ ಗಿಜಿಗುಡುವ ಸವಾರ್ ಲೇನ್ ರಸ್ತೆಯಲ್ಲಿ ಮುಕ್ತವಾಗಿ ವಾಹನ ಸಂಚಾರ ಮಾಡಲು ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ.


ರಸ್ತೆಯಲ್ಲಿ ವಾಹನಗಳನ್ನು ಎಲ್ಲಿ ಬೇಕಲ್ಲಿ ಪಾಕಿಂಗ್ ಮಾಡಿ, ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದ ವಾಹನ ಸವಾರರಿಗೆ, ಇದೀಗ ಟ್ರಾಫಿಕ್ ಪೊಲೀಸರು ಜಾಗ ಮಾಡಿಕೊಟ್ಟಿದ್ದಾರೆ.


ಇಂದು ಮುಂಜಾನೆಯಿಂದಲೇ, ಕಾರ್ಯಾಚರಣೆಗಿಳಿದ ಟ್ರಾಫಿಕ್ ಪೊಲೀಸರು, ಅಲ್ಲಿಯೇ ಇದ್ದ ಕೆಲವರನ್ನು ಕರೆದು ಪಾಳು ಬಿದ್ದಿದ್ದ ಕನ್ಸರ್ವೆನ್ಸಿ ರಸ್ತೆಯನ್ನು ಸ್ವಚ್ಚ ಮಾಡಿಸಿದ್ದಾರೆ.


ಈ ಮೂಲಕ ಸಂಚಾರಿ ನಿಯಮಗಳನ್ನು ಪಾಲಿಸದೇ, ಎಲ್ಲಿ ಬೇಕಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದರಿಂದ, ವಾಹನಗಳ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದ್ದು, ಅದನ್ನು ಬಗೆಹರಿಸಿ ಪಾಕಿಂಗ್ ಗೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಸಂಚಾರ ವ್ಯವಸ್ಥೆ ಈಗ ವ್ಯವಸ್ಥಿತವಾಗಿದ್ದು, ಸಾರ್ವಜನಿಕರು ಪಶ್ಚಿಮ ಸಂಚಾರಿ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!