ಶಿವಮೊಗ್ಗ, ಜೂನ್ 13 ): ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ವಿವಿಧ ಕ್ಷೇತ್ರಗಳಿಗೆ ಬೇಟಿ ನೀಡಿದ ಸಂದರ್ಭ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಹಂದಿಗಳನ್ನು ಸಾಕುತ್ತಿರುವ ಮಾಲೀಕರು ವಿರುದ್ಧ ದೂರನ್ನು ಸ್ವೀಕರಿಸಿರುತ್ತಾರೆ.


ಹಂದಿಗಳಿಂದ ಅನೈರ್ಮಲ್ಯತೆ, ಪರಿಸರ ಮಾಲಿನ್ಯ, ಹಂದಿ ಜ್ವರ ಮತ್ತು ಮೆದುಳು ಜ್ವರದಂತಹ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಈ ಹಿಂದೆ ಹಂದಿ ಸಾಕಾಣಿಕೆದಾರರಿಗೆ ಪರ್ಯಾಯವಾಗಿ ಸಹಾಯಧನ ಮತ್ತು ಮನೆ ಮನೆ ಕಸ ಸಂಗ್ರಹಣೆಯ ಕೆಲಸವನ್ನು ನೀಡಿ ಕಡ್ಡಾಯವಾಗಿ ಹಂದಿ ಸಾಕಾಣಿಕೆ ಮಾಡಬಾರದೆಂದು ನಿರ್ದೇಶಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರ ಅನುಮತಿ

ಇಲ್ಲದೆ ಹಂದಿಗಳನ್ನು ಸಾಕುತ್ತಿರುವುದು ಕರ್ನಾಟಕ ಪೌರ ನಿಗಮಗಳ ಅಧಿನಿಯಮ ೧೯೭೬ ಕಲಂ ೩೪೪ ಮತ್ತು ೩೪೫ ರನ್ವಯ ಕಾನೂನು ಬಾಹಿರವಾಗಿದೆ.


ಈ ಹಿಂದೆ ಕಛೇರಿಯಿಂದ ಅನೇಕ ಬಾರಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ತಿಳುವಳಿಕೆ ನೀಡಲಾಗಿದ್ದರೂ ಸಹಾ ಹಂದಿ ಮಾಲೀಕರು ಯಾವುದೇ ರೀತಿಯ ಕ್ರಮವಹಿಸಿರುವುದಿಲ್ಲ. ಆದ್ದರಿಂದ ಎಲ್ಲಾ ಹಂದಿ

ಸಾಕಾಣಿಕೆದಾರರು ನಗರ ವ್ಯಾಪ್ತಿಯಲ್ಲಿ ಹಂದಿಗಳನ್ನು ಸಾಕಿದ್ದಲ್ಲಿ ತಮ್ಮ ಎಲ್ಲಾ ಹಂದಿಗಳನ್ನು ೩ ದಿನಗೊಳಗೆ ಖಾಲಿ ಮಾಡತಕ್ಕದ್ದು. ತಪ್ಪಿದ್ದಲ್ಲಿ ನಗರ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಬಿಡಾಡಿ ಹಂದಿಗಳೆಂದು ಪರಿಗಣಿಸಿ ಸಾರ್ವಜನಿಕರ ಹಿತಾಸಕ್ತಿಯ

ಮೇರೆಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇದರಿಂದ ಆಗುವ ಯಾವುದೇ ನ?ಕ್ಕೆ ಪಾಲಿಕೆ ಜವಾಬ್ದಾರರಲ್ಲ ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!