ತೀರ್ಥಹಳ್ಳಿ,ಜ.15;

ಏಳ್ಳಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ಇಂದು ಸಂಜೆ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಪ್ರೇಕ್ಷಕರು ಸಾಕ್ಷಿಯಾದರು.
ತುಂಗಾನದಿಯ ದಡದಲ್ಲಿ ಬೆಳಕಿನ ಬಣ್ಣದ ಲೋಕವೆ ಸೃಷ್ಟಿಯಾಗಿತ್ತು.
ಹೆಸರಾಂತ ಪುರಾತನ ಕುರುವಳ್ಳಿ ಕಮಾನು ಸೇತುವೆಗೆ ಬಣ್ಣದ ಬೆಳಕಿನ ಅಲಂಕಾರ ನೋಡುಗರ ಮನಸನ್ನು ಸೂರೆಗೊಂಡಿತ್ತು.ಬೆಳಕಿನ ರಂಗೋಲಿ ತುಂಗೆಯ ತೇಲಾಡಿದಂತಿತ್ತು.
ಶ್ರೀ ರಾಮೇಶ್ದೇವರ ದೇವರ ಮೂರ್ತಿಯನ್ನು ವಿಶೇಷ ಪೂಜೆ ನಂತರ ತುಂಗಾ ತೀರಕ್ಕೆ ತಂದು ತೆಪ್ಪೋತ್ಸವದಲ್ಲಿರಿಸಿ ಪೂಜೆ ಸಲ್ಲಿಸಿದ ನಂತರ ತುಂಗೆಯಲ್ಲಿ ಸುತ್ತು ಬರಿಸಿದರು.
ಬಾಣ ಬಿರುಸುಗಳ ಪ್ರದರ್ಶನದ ಬೆಳಕಿನ ಚಿತ್ತಾರ ತುಂಗೆಯ ದಡದಲ್ಲಿ ಕುಳಿತ ಸಾವಿರಾರು ಪ್ರೇಕ್ಷಕರ ಮನ ತಳಿಸಿತು.


ತುಂಗೆ ಸುತ್ತಲಿನ ಪರಿಸರಕ್ಕೆ,ಕಮಾನು ಸೇತುವೆಗೆ ಬಾರಿ ಶಬ್ಧದ ಸಿಡಿಮದ್ದು ಪಟಾಕಿಯು ಅಪಾಯದ ಮುನ್ಸೂಚನೆಯೆಂದು ಹಲವು ಸಾರ್ವಜನಿಕರ ಅಭಿಪ್ರಾಯ ಕೇಳಿಬಂದರೂ ಸಿಡಿಮದ್ದುಗಳ ಸ್ಪೋಟ ನಿರಂತರ ವಾಗಿತ್ತು.
ಜನಪರ ಉತ್ಸವ;
ಈ ಬಾರಿ ವಿಶೇಷವಾಗಿ ಜಾನಪದಕ್ಕೆ ಒತ್ತು ನೀಡಿ ತುಂಗೆಯ ದಡದಲ್ಲಿ ಜನಪರ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಕ್ಷೇತ್ರದ ಶಾಸಕ ಆರಗ ಜ್ಙಾನೇಂದ್ರ ಉತ್ಸವವನ್ನು ಉದ್ಘಾಟಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!