ತೀರ್ಥಹಳ್ಳಿ: ಸಾಲ ಬಾಧೆಯಿಂದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.21ರ ಮಂಗಳವಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅತ್ತಿಗಾರ ಬೈಲು ಗ್ರಾಮದ ಉಮೇಶ್ (55 ವರ್ಷ) ಆತ್ಮಹತ್ಯೆ ಮಾಡಿಕೊಂಡ ರೈತ.

ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಟುರು ಕಟ್ಟೆ ಕೈಮರ ಗ್ರಾಮದ ರೈತ‌ ಉಮೇಶ್ ಮತ್ತೀಗ ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾವು ಬೆಳೆದ ಅಡಕೆ ತೋಟಕ್ಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡಿದ್ದರಿಂದ ಬೇಸತ್ತು ಹೋಗಿದ್ದರು. ಕೈಮರ ಸೊಸೈಟಿ ಹಾಗೂ ವಿವಿಧೆಡೆ ಸಾಲ ಕೂಡ ಮಾಡಿಕೊಂಡಿದ್ದ ಉಮೇಶ್ ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಕೂಡ ಇದೆ ಗ್ರಾಮದ ರೈತರೊಬ್ಬರು ಎಲೆ ಚುಕ್ಕಿ ರೋಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದರು.

ಶಿವಮೊಗ್ಗ | ಓವರ್‌ ಟೇಕ್‌ ಮಾಡಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್

ತೀರ್ಥಹಳ್ಳಿ : ತೀರ್ಥಹಳ್ಳಿ-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಸಮೀಪ ಖಾಸಗಿ ಬಸ್ ಯೊಂದು ಓವರ್‌ ಟೇಕ್‌ ಮಾಡುವ ಭರದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಭವಿಸಿದೆ.

ಕಳಸದಿಂದ ಶಿವಮೊಗ್ಗಕ್ಕೆ ಬರುವ ಖಾಸಗಿ ಬಸ್‌ ಮಂಡಗದ್ದೆಯ 15 ನೇ ಮೈಲಿಕಲ್ಲಿನ ಬಳಿ ಹೋಗುತ್ತಿರುವ ವೇಳೆ ಬಸ್‌ ಚಾಲಕ ಎದುರಿಗೆ ಸಾಗುತ್ತಿದ್ದ ವಾಹನವನ್ನ ಓವರ್‌ ಟೇಕ್‌ ಮಾಡಲು ಮುಂದಾಗಿದ್ದಾನೆ.

ಈ ವೇಳೆ ಆತನ ನಿಯಂತ್ರಣ ತಪ್ಪಿದ ಬಸ್‌ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗಿ ರಸ್ತೆ ಪಕ್ಕದ ಮರವೊಂದಕ್ಕೆ ಡಿಕ್ಕಿಯಾಗಿದೆ.

ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಮಗುವು ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ. ಇಬ್ಬರ ಪರಿಸ್ಥಿತಿ ಗಂಭೀರವಾಗಿ ಎನ್ನಲಾಗಿದೆ. ಇನ್ನೂ ಘಟನೆಯಲ್ಲಿ ಬಸ್‌ನ ಒಂದು ಬದಿ ಬಹುತೇಕ ನುಜ್ಜುಗುಜ್ಜಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!