ಹೊಸನಗರ: ಈ ಬಾರೀಯ ವಿಧಾನ ಪರಿಷತ್ ಚುನಾವಣೆಯು ಜೂನ್ ೩ರಂದು ನಡೆಯಲಿದ್ದು ಕಾಂಗ್ರೇಸ್ ಪಕ್ಷದ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿಕ್ಷಣ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್ ಕೆ.ಕೆಯವರನ್ನು ಗೆಲ್ಲಿಸಬೇಕೆಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕರು ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣರವರು ಹೇಳಿದರು
ಹೊಸನಗರದ ಆರ್ಯಈಡಿಗರ ಸಬಾಭವನದಲ್ಲಿ ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ತಾಲ್ಲೂಕು ಪಂಚಾಯತಿ ಜಿಲ್ಲಾ ಪಂಚಾಯತಿಯ ಬೂತ್ ಮಟ್ಟದ ಅಧ್ಯಕ್ಷ ಸದಸ್ಯರುಗಳ ಸಭೆ ಹಾಗೂ ಚುನಾವಣೆ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯಲ್ಲಿ ಮಾತನಾಡಿದರು.
ವಿಧಾನಸಭೆ-ಲೋಕಸಭೆಯಲ್ಲಿ ಯಾವ ರೀತಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಶ್ರಮೀಸಿದ್ದೀರೂ ಅದೇ ರೀತಿ ರಾತ್ರಿ ಹಗಲು ಎನ್ನದೇ ಈ ಬಾರೀಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದ ಅಭ್ಯರ್ಥಿ ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಕಾರ್ಯಕರ್ತರು ಮತದಾರರ ಮನೆಗೆ ಬೇಟಿ ನೀಡಿ ರಾಜ್ಯ ಸರ್ಕಾರ ಪದವೀಧರರಿಗೆ ತಿಂಗಳಿಗೆ ೩೦೦೦ರೂಪಾಯಿ ನೀಡುತ್ತಿರುವುದನ್ನು ಪ್ರಚಾರ ಪಡಿಸಿ ಮತದಾರರ ಮನ ಒಲಿಸುವ ಪ್ರಯತ್ನ ಮಾಡಬೇಕು ಎಂದರು.
ಚುನಾವಣೆ ನಿರಂತರ: ರಾತ್ರಿ ಹಗಲು ಹೇಗೋ ಚುನಾವಣೆಯು ಅದೇ ರೀತಿ ಬರುತ್ತಿರುತ್ತದೆ ೧೦ ತಿಂಗಳ ಹಿಂದೆ, ವಿದಾನಸಭೆ ಚುನಾವಣೆ ಈಗ ಲೀಕಸಭೆ ಚುನಾವಣೆ ಮುಗಿದಿದೆ ಪುನ ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯತಿ ಚುನಾವಣೆ ಈ ರೀತಿ ಚುನಾವಣೆ ಬಂದು ಹೋಗುತ್ತಿರುತ್ತದೆ ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ನಿದ್ರೆ ಮಾಡದೇ ಕೆಲಸ ನಿರ್ವಹಿಸುತ್ತಿರಬೇಕು ಅದರ ಜೊತೆಗೆ ಎಲ್ಲ
ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೇ ಎಲ್ಲ ಚುನಾವಣೆಯಲ್ಲಿಯೂ ಜಯ ಗ್ಯಾರಂಟಿ ಎಂದರು.
ಲೋಕಸಭೆ ಚುನಾವಣೆಯಲ್ಲಿ ಪ್ರತಿಸ್ವರ್ದಿಯಾಗಿದ್ದೇವೆ: ಇಷ್ಟು ವರ್ಷಗಳ ಕಾಲ ಮತದಾರರಿಗೆ ಲೋಕಸಭೆ ಚುನಾವಣೆ ಮುಗಿದ್ದಿದ್ದೇ ಗೋತ್ತಾಗುತ್ತೀರಲಿಲ್ಲ ಈ ಬಾರೀ ಚುನಾವಣೆಯಲ್ಲಿ ನಾವು ಪ್ರತಿಸ್ವರ್ಧಿ ಬಿ.ವೈ ರಾಘವೇಂದ್ರರವರಿಗೆ ಬಿಗ್ ಪೈಟ್ ನೀಡಿದ್ದೇವೆ ಸೋಲು ಗೆಲುವು ಮುಖ್ಯವಲ್ಲ ಹೋರಾಟ ಮುಖ್ಯವಾಗಿದ್ದು ನಾವು ಲೋಕಸಭೆ ಚುನಾವಣೆಯಲ್ಲಿ ನಮ್ಮ ಕೆಲಸ ನೋಡಿ ಮತ ಕೇಳಿದ್ದೇವೇಯೇ ಹೊರತು ಮೋದಿಯವರ ಹೆಸರು ಹೇಳಿಕೊಂಡು ಹಣ ಹಂಚಿ ಚುನಾವಣೆ ಮಾಡಿಲ್ಲ ಎಂದರು.
ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಆಯನೂರು ಮಂಜುನಾಥ್‌ರವರು ಮಾತನಾಡಿ ಕಾರ್ಯಕರ್ತರ ಬಲ ವಿಲ್ಲದಿದ್ದರೇ ವಿಧಾನಪರಿಷತ್ ಚುನಾವಣೆ ಮಾಡುವುದು ಬಹಳ ಕಷ್ಟ ಎಕೆಂದರೆ ಇರುವುದು ೨೮೦೦ಮತದಾರರಿದ್ದು ಅವರ ಮನೆಗೆ ನಾವು ತಲುಪಬೇಕಾದರೇ ಒಂದೇರಡು ದಿನಗಳೇ ಬೇಕಾಗುತ್ತದೆ ಅದೇ ಆ ಭಾಗದ ಕಾರ್ಯಕರ್ತರು ಸಮೀಪದಲ್ಲಿರುವುದರಿಂದ ಮತದಾರರನ್ನು ಒಲೈಸಲು ಸಹಕಾರಿಯಾಗುತ್ತದೆ ಪ್ರತಿಯೊಬ್ಬ ಕಾರ್ಯಕರ್ತರು ಮತದಾರರನ್ನು ಬೇಟಿ ಮಾಡಿ ಸರ್ಕಾರದ ಯೋಜನೆಗಳನ್ನು ಹೇಳಿ ನನಗೆ ಮತ ಹಾಕುವಂತೆ ಪ್ರರೇಪಣೆ ಮಾಡಬೇಕೆಂದರು.
ಎಲ್ಲ ಚುನಾವಣೆಯಲ್ಲಿಯೂ ಗ್ಯಾರಂಟಿ ನಮ್ಮ ಕೈ ಹಿಡಿಯಲಿದೆ: ಚಂದ್ರಮೌಳಿ
ಕೇವಲ ಹತ್ತು ತಿಂಗಳ ಅವಧಿಯಲ್ಲಿ ಜಾರಿಗೆ ತಂದಿರುವ ರಾಜ್ಯ ಕಾಂಗ್ರೇಸ್ ಸರ್ಕಾರದ ಮಹಾತ್ವಕಾಂಕ್ಷೆ ೫ಯೋಜನೆಗಳು ನಮ್ಮ ಕೈಹಿಡಿದಿದೆ ಹಾಗೂ ಮುಂದೆಯೋ ಎಲ್ಲ ಚುನಾವಣೆಯಲ್ಲಿಯೂ ಕೈ ಹಿಡಿಯಲಿದೆ ಎಂಬ ಭರವಸೆ ಇದೆ ಎಂದು ಹೊಸನಗರ ತಾಲ್ಲೂಕು ಅಧ್ಯಕ್ಷರಾದ ಚಂದ್ರಮೌಳಿ ಗೌಡರವರು ಹೇಳಿದ್ದು ವಿಧಾನ ಸಭೆ -ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹಗಲು-ಇರುಳು ಎನ್ನದೇ
ಕೆಲಸ ಮಾಡಿದ್ದೀರಿ ನಿಮ್ಮೇಲ್ಲರಿಗೂ ಅಭಿನಂದನೆಗಳು ಹಾಗೇ ಮುಂದಿರುವ ವಿಧಾನಪರಿಷತ್- ಚುನಾವಣೆ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿಯೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ಪ್ರದಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಆರ್ ಗುರುರಾಜ್, ಜಿಲ್ಲಾ ಪಂಚಾಯತಿ ಮಾಜೀ ಸದಸ್ಯ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಬಿ.ಜಿ.ನಾಗರಾಜ್, ಜಯಶೀಲಪ್ಪ ಗೌಡ, ಏರಿಗೆ ಉಮೇಶ್, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ಎಂ.ಎಂ. ಪರಮೇಶ್, ಚಿದಂಬರ ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಗ್ರಾಮ ಪಂಚಾಯತಿ ಅಧ್ಯಕ್ಷ ಸದಸ್ಯರುಗಳು ಉಪಸ್ಥಿತರಿದ್ದರು.