ಶಿವಮೊಗ್ಗ: ವಿನೋಬನಗರದ ಸೂಡಾ ಕಛೇರಿಯ ಪಕ್ಕದಲ್ಲಿ, ಪ್ರಾಧಿಕಾರದಿಂದ ವಾಹನ ನಿಲುಗಡೆಗಾಗಿ ಸಾರ್ವಜನಿಕ ರಸ್ತೆಯಲ್ಲಿ ನಿರ್ಮಿಸಿರುವ ಶೆಡ್ ತಕ್ಷಣ ತೆರುವುಗೊಳಿಸಲು ಆಗ್ರಹಿಸಿ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ವಿನೋಬನಗರದ ಸೂಡಾ ಕಛೇರಿಯ ಪಕ್ಕದ ರಸ್ತೆಯಲ್ಲಿ ಪ್ರಾಧಿಕಾರದಿಂದ ವಾಹನಗಳ ನಿಲುಗಡೆಗೆ ನಿರ್ಮಿಸಿರುವ ಶೆಡ್ ಕಾನೂನು ಬಾಹಿರ ಮತ್ತು ಅವರದ್ದೇ ನಿಯಮಗಳ ಉಲ್ಲಘಿಸಿ ಮಾಡಿರುವ ನಿರ್ಮಾಣ. ಸಾರ್ವಜನಿಕರ ಉಪಯೋಗಕ್ಕಾಗಿ ಬಿಟ್ಟಿರುವ ರಸ್ತೆಯಲ್ಲಿ ಈ ರೀತಿಯ ನಿರ್ಮಾಣ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ದೂರಲಾಗಿದೆ. 

ಶಿವಮೊಗ್ಗ ನಗರ 2030 ಮಹಾನಗರ ಯೋಜನೆಯ / ಸಿ.ಡಿ.ಪಿ. ಪ್ರಕಾರ ರಸ್ತೆ ಎಂದು ತೋರಿಸಿದ ಮೇಲೆ ಇಲ್ಲಿ ಶೆಡ್ ನಿರ್ಮಾಣ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಇಂತಹ ನಿರ್ಮಾಣ ತಡೆಗಟ್ಟ ಬೇಕಾದ ನಗರಾಭಿವೃದ್ದಿ ಪ್ರಾಧಿಕಾರವೇ ಶೆಡ್ ನಿರ್ಮಾಣ ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎಂದರು. 

ಈ ಎಲ್ಲಾ ಆಂಶಗಳನ್ನು, ಗಮನಿಸಿ ತಕ್ಷಣ ಸಾರ್ವಜನಿಕರ ಉಪಯೋಗಕ್ಕಾಗಿ ರಸ್ತೆಯನ್ನು ಮೀಸಲಿರಿಸಿ, ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದವರು ನಿರ್ಮಿಸಿರುವ ಶೆಡ್ ತೆರುವುಗೊಳಿಸಲು ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ ಕುಮಾರ್ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!