ಶಿವಮೊಗ್ಗ, ಜ.09:
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಕಾಡಾ ಪ್ರಾಧಿಕಾರಕ್ಕೆ ಒಳಪಡುವ ಭದ್ರಾವತಿ ತಾಲ್ಲೂಕು ಹಿರಿಯೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ದೊಡ್ಡಗೊಪ್ಪೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅನುದಾನದಡಿ ನಿರ್ಮಾಣವಾಗಿರುವ ಗೊಂದಿ ಎಡನಾಲ ನೀರು ಬಳಕೆದಾರರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ನೆರವೇರಿಸಿದರು. 
ಕಟ್ಟಡ ಉದ್ಘಾಟಿಸಿ ನೇರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಸಹಕಾರ ಸಂಘದಿಂದ ರೈತರು ಎರೆಹುಳು ಸಾಕಾಣಿಕೆ, ಮೀನು ಸಾಕಾಣಿಕೆ, ಕುರಿ ಸಾಕಾಣಿಕೆ ಇನ್ನು ಹಲವಾರು ತರಬೇತಿಗಳು ನೀಡುತ್ತಾರೆ.ಇದರ ಸದುಪಯೋಗ ಪಡೆಯುವ ಮೂಲಕ ರೈತರು ಅಭಿವೃದ್ದಿ ಹೊಂದಲು ಸಾಕಷ್ಟು ಅನುಕೂಲವಿದ್ದು, ರೈತರು ಆರ್ಥಿಕ ಸಬಲರಾಗಲು ಇದು ಒಂದು ಉತ್ತಮ ಮಾರ್ಗ ಎಂದು ಹೇಳಿದರು.

ಶಾಸಕ ಬಿಕೆ ಸಂಗಮೇಶ್ ಹಾಗೂ ಕಾಡಾ ಅಧ್ಯಕ್ಷೆ ಪವಿತ್ರಾ ಅವರಿಂದ ಕಟ್ಟಡ ಉದ್ಘಾಟನೆ


ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಟೈಲರಿಂಗ್, ಹೈನುಗಾರಿಕೆ ಹಾಗೂ ಇನ್ನಿತರ ಸ್ವಯಂ ಉದ್ಯೋಗ ನೀಡಲು ಶ್ರಮ ವಹಿಸುತ್ತಿದೆ ಎಂದು ಹೇಳಿದರು. 
ಹಳ್ಳಿಗಳು ಅಭಿವೃದ್ದಿ ಆದರೆ ದೇಶವು ಅಭಿವೃದ್ದಿ ಆಗುತ್ತದೆ, ಪ್ರತಿಯೊಂದು ಹಳ್ಳಿಗಳಲ್ಲಿ ಸಹಕಾರ ಸಂಘಗಳು ತಲೆ ಎತ್ತಬೇಕು ವಿದ್ಯಾವಂತ ತರುಣ ತರುಣಿಯರು ಕೆಲಸಕ್ಕಾಗಿ ವಲಸೆ ಹೋಗದೆ ಎಲ್ಲಾ ಹಳ್ಳಿಗಳಲ್ಲಿ ಸ್ವಯಂ ಉದ್ಯೋಗ ಕರುಣಿಸುವ ಕೆಲಸ ಆಗಬೇಕು ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಕಿವಮಾತು ಹೇಳಿದರು.
ರೈತರು ದೇಶಕ್ಕೆ ಎಲ್ಲವನ್ನೂ ನೀಡಿದ್ದಾರೆ, ಪ್ರತಿಯೊಂದು ರಂಗದಲ್ಲೂ ಅವರ ಕೊಡುಗೆ ಅಪಾರ, ಯಾವುದೇ ಪ್ರತಫಲಾಪೇಕ್ಷೆಯಿಲ್ಲದೆ ಹಗಲು ರಾತ್ರಿ ಎನ್ನದೇ ದುಡಿಯುವ ವರ್ಗ ಇದ್ದರೆ ಅದು ರೈತಾಪಿ ವರ್ಗ ರೈತರು ಕೈ ಎತ್ತಿ ಕೊಡುವ ಕಾಮಧೇನು ಎಂದು ರೈತರನ್ನು ಉದ್ದೇಶಿಸಿ ಹೇಳಿದರು.
ಕಾಡ ಪ್ರಾಧಿಕಾರದಿಂದ ಅಭಿವೃದ್ದಿ ಕಾರ್ಯಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದ ರೈತರು ಈಗಾಗಲೇ ಹಲವಾರು ವರ್ಷಗಳಿಂದ ಅಚ್ಚುಕಟ್ಟು ಭಾಗದಲ್ಲಿ ಯಾವುದೇ ಕೆಲಸಗಳು ಆಗದೆ ರೈತರಿಗೆ ತೊಂದರೆ ಉಂಟಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿ ಕೋವಿಡ್-19 ಮಹಾಮಾರಿ ಬಂದೊದಗಿರುವುದರಿಂದ ಇಡೀ ದೇಶವೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಕಳೆದ 8 ತಿಂಗಳಿನಿಂದ ಆರ್ಥಿಕ ಚಟುವಟಿಕೆ ಸಂಪೂರ್ಣ ನಿಂತು ಹೋಗಿ ಅನುದಾನ ಬಿಡುಗಡೆಯಾಗಿರುವುದಿಲ್ಲ, ಮಾನ್ಯ ಮುಖ್ಯಮಂತ್ರಿಗಳಿಗೆ ಈಗಾಗಲೇ ಭೇಟಿ ಮಾಡಿ ಅಚ್ಚುಕಟ್ಟು ಭಾಗದ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದೇನೆ ಅವರು ಕೂಡ ಸೂಕ್ತವಾಗಿ ಸ್ಪಂದಿಸಿದ್ದಾರೆ ಅನ್ನದಾತರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ರೈತರು ನಿಮ್ಮ ಮೇಲೆ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಮೇಲೆ ನಮಗೆ ಸಂಪೂರ್ಣ ಭರವಸೆ ಇದ್ದು ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.
ಮುಂದುವರೆದು ಈಗಾಗಲೇ ಕೊನೆಯ ಭಾಗಕ್ಕೆ ನೀರು ತಲುಪಿಸಲು ಕಾರ್ಯಪ್ರವೃತ್ತರಾಗಿದ್ದು ಸರ್ಕಾರದಿಂದ ಯಾವುದೇ ಅನುದಾನ ಇಲ್ಲದಿದ್ದರು ಕೂಡ ಕೆಲವು ರೈತರಿಗೆ ಮನವೊಲಿಸಿ ಸ್ವಯಂ ಪ್ರೇರಿತರಾಗಿ ಹೂಳು ತಗೆಸುವಂತೆ ಪ್ರೇರೇಪಿಸಿ ಯಶಸ್ವಿಯಾಗಿದ್ದೇವೆ, ಜೊತೆಗೆ ಕೇಂದ್ರ ಸರ್ಕಾರದ  ಉದ್ಯೋಗ ಖಾತರಿ ಯೋಜನೆಯಡಿ, ನೀರಾವರಿ ಇಲಾಖೆಯ ಸಹಭಾಗಿತ್ವದಡಿ ನಾಲೆಗಳಲ್ಲಿ ತುಂಬಿರುವ ಹೂಳು ಹಾಗೂ ಜಂಗಲ್ ಎತ್ತುವ ಕಾಮಗಾರಿ ಕೈಗೊಂಡು ಕಾರಣ ಹಲವಾರು ಭಾಗಗಳಲ್ಲಿ ನೀರು ಸರಾಗವಾಗಿ ತಲುಪುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗಂಗಣ್ಣ, ಸುಚಿತ್ರಾ, ಉಮಾಪತಿ, ಮೂಡಲಗಿರಿಯಪ್ಪ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!