ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರ: ಭಂದರಾ ಜಿಲ್ಲಾಸ್ಪತ್ರೆಯಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿ ಸುಮಾರು 10 ನವಜಾತ ಶಿಶುಗಳು ಸಾವನ್ನಪ್ಪಿವೆ. ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಶುಶ್ರೂಷ ಘಟಕದಲ್ಲಿ ಈ ದುರಂತ ಸಂಭವಿಸಿದೆ. ಅವಘಡದಲ್ಲಿ ಮೃತಪಟ್ಟ ಎಲ್ಲಾ ಮಕ್ಕಳೂ ಸಹ 1-3 ತಿಂಗಳೊಳಗಿನವು ಎಂದು ವೈದ್ಯರು ತಿಳಿಸಿದ್ದಾರೆ.
ಇಂದು ಭಂದರಾ ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ದುರಂತ ನಡೆದ ನವಜಾತ ಶಿಶುಗಳ ಶುಶ್ರೂಷ ಘಟಕದಲ್ಲಿ ಒಟ್ಟು 17 ಹಸುಗೂಸುಗಳನ್ನು ಇಡಲಾಗಿತ್ತು. ಅವುಗಳಲ್ಲಿ ಬೆಂಕಿ ).ಅವಘಡದಲ್ಲಿ 10 ಮಕ್ಕಳು ಅಸುನೀಗಿದರೆ, ಇನ್ನು 7 ಹಸುಗೂಸುಗಳನ್ನು ರಕ್ಷಿಸಲಾಗಿದೆ. ಅನುಭವ ಮಂಟಪ ಬಸವತತ್ವ ಸಾರಬೇಕು ವಿನಃ ಸನಾತನ ಚಿಂತನೆಗಳನ್ನಲ್ಲ; ಸಿದ್ದರಾಮಯ್ಯ
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ಸುಮಾರು 7 ಅಗ್ನಿಶಾಮಕ ವಾಹನಗಳು ಆಸ್ಪತ್ರೆ ಬಳಿ ಬಂದು 7 ಮಕ್ಕಳನ್ನು ರಕ್ಷಿಸಿದ್ದಾರೆ. ದುರಾದೃಷ್ಟವಶಾತ್ ಇನ್ನುಳಿದ 10 ಮಕ್ಕಳನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
4 ಅಂತಸ್ತಿನ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಲು ಕಾರಣವೇನೆಂದು ತಿಳಿದು ಬಂದಿಲ್ಲ. ಆದರೆ ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದೆ.