ಶಿವಮೊಗ್ಗ,ಮಾ.೨೭:ತುಂಗಾ ನದಿಗೆ ತ್ಯಾಜ್ಯ ಹಾಕುವುದನ್ನು ತಪ್ಪಿಸುವ ಹಿನ್ನಲೆಯಲ್ಲಿ ನಗರದ ಹೊಳೆಬಸ್‌ಸ್ಟಾಪ್ ಬಳಿ ಇರುವ ಸೇತುವೆಯ ಮೇಲೆ ಗ್ಯಾಲರಿಯನ್ನು ಹಾಕುವ ಕೆಲಸ ಭರದಿಂದ ಸಾಗಿದೆ.


ಕೆಲವರು ತಮ್ಮ ಮನೆಗಳಲ್ಲಿ ಕಾರ್ಯಕ್ರಮಗಳನ್ನು ಮುಗಿಸಿ ಉಳಿದ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಹೊಳೆಗೆ ಹಾಕುತ್ತಿದ್ದರು. ಅಕ್ಕಿ, ಕುಂಕುಮ, ಬಟ್ಟೆ, ಬಾಳೆಹಣ್ಣು, ಹೀಗೆ ವಿವಿಧ ರೀತಿಯ ಪದಾರ್ಥಗಳನ್ನೆಲ್ಲ ನೀರಿಗೆ ಹಾಕಬೇಕು ಎಂಬ ನಂಬಿಕೆಯಿಂದ ಚಾನಲ್ ಇಲ್ಲ ಹೊಳೆಗೂ ಬೀಸಾಕುತ್ತಿದ್ದರು. ಪ್ರತಿ ದಿನವೂ ಒಂದು ಟನ್‌ಗೂ ಹೆಚ್ಚು ಕಸ ಹೊಳೆಯನ್ನು ಸೇರುತ್ತಿತ್ತು. ಈಗಾಗಲೇ ಅಶುದ್ಧಿಯಾಗಿದ್ದ ಹೊಳೆ

ಈ ಕಸದಿಂದ ಮತ್ತಷ್ಟು ಕೊಳಚೆಯಾಗುತ್ತಿತ್ತು. ಇದನ್ನು ಸ್ವಲ್ಪವಾದರೂ ತಡೆಯಬೇಕೆಂಬ ಸದುದ್ದೇಶದಿಂದ ಈ ಜಾಲರಿಯನ್ನು ಹಾಕಲಾಗುತ್ತಿದೆ.
ಇದಷ್ಟಲ್ಲದೇ ಮನೆಯಲ್ಲಿ ಉಳಿದ ಮಾಂಸ, ಮಾಂಸದಂಗಡಿಗಳಲ್ಲಿ ಉಳಿದ ತ್ಯಾಜ್ಯವು ಕೂಡ ಹೊಳೆಗೆ ಹಾಕಲಾಗುತ್ತಿತ್ತು.

ಜಾಲರಿಯನ್ನು ಹಾಕುವುದರಿಂದ ಸ್ವಲ್ಪ ಮಟ್ಟಿಗಾದರೂ ಇದನ್ನು ಕಡಿಮೆ ಮಾಡಬಹುದಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು ನಿರ್ಮಲ ತುಂಗಾ ಅಭಿಯಾನ, ಪರಿಸರ ಪ್ರೇಮಿಗಳು ಜಾರಿಯಾಕುವಂತೆ ಸಲಹೆ ನೀಡುತ್ತಲೇ ಬಂದಿದ್ದರು.

ಈಗ ಇದಕ್ಕೆ ಮನ್ನಣೆ ನೀಡಿದ ಪಾಲಿಕೆ ಗ್ಯಾಲರಿಯನ್ನು ಹಾಕುತ್ತಿದ್ದು, ಸಾರ್ವಜನಿಕರು ಇದನ್ನು ಸ್ವಾಗತಿಸುತ್ತಿದ್ದಾರೆ. ಅಷ್ಟೇ ಅಲ್ಲ ಮಳೆಗಾಲ ಮುಂತಾದ ಸಂದರ್ಭದಲ್ಲಿ ನದಿ ತುಂಬಿದಾಗ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಉದಾಹರಣೆಗಳು ಇದ್ದವು. ಈಗ ಗ್ಯಾಲರಿ ಹಾಕುವುದರಿಂದ ಇದನ್ನು ತಡೆದಂತೆಯಾಗುತ್ತದೆ

By admin

ನಿಮ್ಮದೊಂದು ಉತ್ತರ

You missed

error: Content is protected !!