ಶಿವಮೊಗ್ಗದ ಮಿಷನ್ ಕಾಂಪೌಂಡ್ ನಲ್ಲಿರುವ ಪಿಜಿಯಲ್ಲಿ ವಿವಾಹಿತ ಮಹಿಳೆಯೋರ್ವಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸೂಗೂರಿನ ಮಾಲಾ ಎಂಬ ಯುವತಿ ಕಳೆದ ಮೇ ತಿಂಗಳಲ್ಲಿ ಭದ್ರಾವತಿಯ ಯುವಕನೊಂದಿಗೆ ಮುವೆಯಾಗಿದ್ದು, ಮದುವೆಯಾದ 3 ದಿನಗಳಲ್ಲಿ ಮನು ಎಂಬಾತನು ಮಾಲಾ ಮತ್ತು ಆಕೆಯ ಪತಿಯನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ತಾನು ಮಾಲಾರನ್ನ ಮದುವೆಯಾಗಿದ್ದು,


ಎರಡು ವರ್ಷದಿಂದ ಪ್ರೀತಿಸುತ್ತಿದ್ದು ಫೋಟೊಗಳನ್ನ ತೋರಿಸಿದ್ದಾನೆ. ವಿಡಿಯೋಗಳು, ಕ್ಯಾಸೆಟ್ ಗಳು ಇವೆ ಎಂದು ಸುಳ್ಳು ಆರೋಪ ಮಾಡಿದ್ದಾನೆ. ಇದರಿಂದಾಗಿ ವಿವಾಹ ಮುರಿದುಬಿದ್ದಿದೆ. ಮಹಿಳಾ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು.


ನಂತರ ಪದೇ ಪದೇ ಮಾಲಾಳನ್ನ ಸಂಪರ್ಕಿಸಿ ಮಾನಸಿಕ ಕಿರುಕುಳ ನೀಡಿದ್ದಾನೆ. ಇದನ್ನ ಸಹಿಲಾಗದೆ ಮಾಲಾ ಮಾ. 19 ರಂದು ಪಿಜಿಯಲ್ಲಿದ್ದ ಮಾಲಾ ತಿಂಡಿಗೆ ಬಾರದೆ ಇದ್ದಾಗ ಮಾಲೀಕರು ಕೊಠಡಿಗೆ ನೋಡಿದ್ದಾರೆ. ಮಾಲಾ ಟವೆಲ್ ಬಿಗಿದು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.‌ ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!