ಶಿವಮೊಗ್ಗ,ಮಾ.೨೦: ಮಧು ಬಂಗಾರಪ್ಪ ಅವರು ಒಬ್ಬ ಶಿಕ್ಷಣ ಸಚಿವರಾಗಿ ಹೇಗೆ ಮಾತನಾಡಬೇಕು ಎಂಬ ಪ್ರಜ್ಞೆಯೇ ಇಲ್ಲವಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಟೀಕಿಸುವ ಬರದಲ್ಲಿ “ಹಡಿಬಿಟ್ಟಿ” ಎಂಬ ಪದವನ್ನು ಉಪಯೋಗಿಸಿದ್ದಾರೆ. ಏನಿದರ ಅರ್ಥ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಮಧುಬಂಗಾರಪ್ಪ ಅವರಿಗೆ ಸಜ್ಜನಿಕೆ ಇಲ್ಲ. ಮಾತಿನಲ್ಲಿ ಇಡಿತವಿಲ್ಲ. ವೈಯುಕ್ತಿಕ ತೇಜೋವಧೆ ಮಾಡಬಾರದು ಎಂದು ಗೊತ್ತಿಲ್ಲ. ಇದು ಪ್ರಜ್ಞಾವಂತರ ನೆಲ. ಅಸಭ್ಯ ರೀತಿಯಲ್ಲಿ ಅವರು ಮಾತನಾಡುತ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ. ಅವರಿಗೆ ಈ ಬಾರಿ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದರು.
ಮತ್ತೊಬ್ಬ ಕಾಂಗ್ರೆಸ್ ಶಾಸಕ ಬೇಲೂರು ಗೋಪಾಲಕೃಷ್ಣ ಕೂಡ ಬಿ.ವೈ.ರಾಘವೇಂದ್ರ ಅವರನ್ನು ಬಸ್ಟ್ಯಾಂಡ್ ರಾಘು ಎಂದು ಕರೆದಿದ್ದಾರೆ. ಅವರಿಗೆ ಗೊತ್ತಿರಲಿ, ರಾಘವೇಂದ್ರ ಅವರು ಬಸ್ಟ್ಯಾಂಡ್ ರಾಘುನು ಹೌದು, ವಿಮಾನ ನಿಲ್ದಾಣ ರಾಘುನೂ ಹೌದು, ರೈಲ್ವೆ ನಿಲ್ದಾಣದ ರಾಘುನೂ ಹೌದು, ರಾಘವೇಂದ್ರ ಅವರು ಯಾವ ಅಭಿವೃದ್ಧಿ ಮಾಡಿಲ್ಲ ಎಂದು ಅವರು ಹೇಳುತ್ತಾರೆ. ಬಹಿರಂಗ ಚರ್ಚೆಗೆ ಬರಲಿ ನಾವು ಸಿದ್ದವಿದ್ದೇವೆ ಎಂದ ಅವರು, ಬೇಳೂರಿನ ಹಾಗೆ ಗುದ್ದಲಿ ಗೋಪಾಲ ಅಲ್ಲ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿಯವರನ್ನು ಟೀಕಿಸುವ ಹಕ್ಕು ಈ ಕಾಂಗ್ರೆಸ್ಸಿಗರಿಗೆ ಇಲ್ಲ. ಯಾವುದೇ ಅರ್ಹತೆ ಅವರಿಗಿಲ್ಲ. ಇವರನ್ನು ಟೀಕಿಸಿದರೆ ಪ್ರಚಾರಕ್ಕೆ ಬರಬಹುದು ಎಂದು ಅಂ
ದುಕೊಂಡಿದ್ದಾರೆ. ಅದು ಸುಳ್ಳು, ಈಗಾಗಲೇ ಅವರು ಹತಾಶರಾಗಿದ್ದಾರೆ. ಇವಿಎಂ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ ಎಂದರು.
ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗ್ಗೆ ಬಿಜೆಪಿ ಯಾವಾಗಲು ಸ್ಪಂಧಿಸಿದೆ, ಆದರೆ ನ್ಯಾಯಾಲಯದ ತೊಡಕು ಇದೆ. ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಅ ಸಂತ್ರಸ್ಥರ ಸಮಸ್ಯೆಯನ್ನು ಯಾಕೆ ಬಗೆಹರಿಸಲಿಲ್ಲ. ಈಗ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.
ಮಧು ಬಂಗಾರಪ್ಪ ಅವರಿಗೆ ಶಿಕ್ಷಣದ ಬಗ್ಗೆ ದೂರ ದೃಷ್ಠಿಯೇ ಇಲ್ಲ, ಸಣ್ಣ ಮಕ್ಕಳಿಗೆ ಪರೀಕ್ಷೆ ಮಾಡುವುದು, ಬಿಡುವುದು ಮಾಡುತ್ತಾರೆ ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುವುದು ಅವರಿಗೆ ಗೊತ್ತಿಲ್ಲ, ಅವರಿಗೆ ದೂರದೃಷ್ಠಿ ಹೀನತೆ ಇದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚೆನ್ನಬಸಪ್ಪ, ಪ್ರಮುಖರಾದ ಆರ್.ಕೆ.ಸಿದ್ರಾಮಣ್ಣ, ಮಾಲತೇಶ್, ಜ್ಞಾನೇಶ್ವರ್, ಜ್ಯೋತಿಪ್ರಕಾಶ್, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ, ಶಿವರಾಜ್ ಇದ್ದರು.