ಶಿವಮೊಗ್ಗ: ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದು ಹೋಗುತ್ತಿದ್ದಂತೆ ಕೆ.ಎಸ್.ಈಶ್ವರಪ್ಪ ಅಭಿಮಾನಿಗಳಿಂದ ಮತ್ತಷ್ಟು ಪೋಸ್ಟ್‌ರ್ ಗಳ ಬಿಡುಗಡೆ ಮಾಡಲಾಗಿದ್ದು, ವೈರಲ್ ಆಗಿದ್ದು, ಬಂಡಾಯದ ಕಾವು ಮತ್ತಷ್ಟು ಹೇರಿದೆ.
“ನಮ್ಮ ಹೋರಾಟ ಮೋದಿ ವಿರುದ್ಧ ಅಲ್ಲ, ಮೋಸದ ವಿರುದ್ದ” ಎಂಬ ಪೋಸ್ಟ್‌ರ್ ವೈರಲ್ ಆಗಿದೆ. ಅದರಲ್ಲೂ “ಗುರಿ ಅಚಲವಾಗಿರಲಿ ನಿಮ್ಮ ಮತ ಹಿಂದುತ್ವಕ್ಕೆ ಮೀಸಲಿರಲಿ”, “ಜೂನ್ ಚಾರ್… ಈಶ್ವರಪ್ಪ ಸೂಪರ್ ಸ್ಟಾರ್”. “ಸ್ವಪ್ರತಿಷ್ಟೆಯಲ್ಲ, ಇದು ಸ್ವಾಭಿಮಾನದ ಹೋರಾಟ” ಎನ್ನುವ ಬರಹಗಳನ್ನು ಪೋಸ್ಟ್‌ರ್ ಗಳಲ್ಲಿ ಈಶ್ವರಪ್ಪ ಅಭಿಮಾನಿಗಳು ಹಾಕಿಕೊಂಡಿದ್ದಾರೆ.
ಸತ್ಯಮೇವ ಜಯತೇ ಎಂಬ ಪೋಸ್ಟ್‌ರ್ ಕೂಡ ವೈರಲ್. ಆತ್ಮಸಾಕ್ಷಿಯಾಗಿ ಯೋಚಿಸಿ ಮತದಾನ ಮಾಡಿ ಎಂದು ಪೆÇೀಸ್ಟ್ ಹಾಕಲಾಗಿದೆ.
ಈಶ್ವರಪ್ಪ ಟೆಂಪಲ್ ರನ್:
ಮಠಗಳ ಬಳಿಕ ಈಶ್ವರಪ್ಪ ಮತ್ತೆ ದೇವಾಲಯ ಭೇಟಿ ಆರಂಭಿಸಿದ್ದಾರೆ. ಇಂದು ಸಿಗಂಧೂರಿಗೆ ತೆರಳಿ ಸಿಗಂಧೂರು ಚೌಡೇಶ್ವರಿ ದೇವಿ ಆಶೀರ್ವಾದ ಪಡೆದಿದ್ದಾರೆ.
ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಲು ಪ್ಲ್ಯಾನ್ ಮಾಡಿಕೊಂಡಿರುವ ಈಶ್ವರಪ್ಪ ಇಂದು ಕೂಡ ಕೆಲವಾರು ಮಠಗಳಿಗೆ ಭೇಟಿ ನೀಡಿದ್ದಾರೆ. ನಿನ್ನೆ ಕೂಡ ಹಲವಾರು ಮಠಗಳಿಗೆ ಭೇಟಿ ನೀಡಿದ್ದರು. ನಿನ್ನೆ ಹಲವಾರು ಮಠಾಧೀಶರನ್ನು ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.
ಮಠಾಧೀಶರನ್ನು ಕಂಡು ಸದ್ಯದ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದರು. ಒಂದು ಕಡೆ ಈಶ್ವರಪ್ಪ ವಿವಿಧ ಮಠಾಧೀಶರ ಭೇಟಿ ಮಾಡುತ್ತಿದ್ದು, ಮತ್ತೊಂದು ಕಡೆ ಪಕ್ಷೇತರ ಸ್ಪರ್ಧೆಗೆ ಮುಂದಾದ ಈಶ್ವರಪ್ಪಗೆ ಪುತ್ರ ಕಾಂತೇಶ್ ಸಾಥ್ ನೀಡಿದ್ದಾರೆ. ಕಾಂತೇಶ್ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡತೊಡಗಿದ್ದಾರೆ. ತಾಲೂಕುಗಳಿಗೆ ಭೇಟಿ ನೀಡಿ ಅತೃಪ್ತ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಮಾತನಾಡಿಸಿಕೊಂಡು ಬರುತ್ತಿದ್ದಾರೆ.
ಒಟ್ಟಾರೆ ಕೆ.ಎಸ್.ಈಶ್ವರಪ್ಪನವರು ತಣ್ಣಗಾದಂತೆ ಕಂಡಿಲ್ಲ. ಮತ್ತು ಪ್ರಧಾನಿ ಮೋದಿ ಬಂದು ಹೋದ ಮೇಲೆ ಯಾವ ಬಿಜೆಪಿಗರು ಈಶ್ವರಪ್ಪನವರನ್ನು ಭೇಟಿ ಮಾಡಿಲ್ಲ. ಪ್ರಧಾನಿ ಬರುವುದಕ್ಕೆ ಮೊದಲೇ ಹಿಂಡು ಹಿಂಡಾಗಿ ಬಿಜೆಪಿ ನಾಯಕರು ಈಶ್ವರಪ್ಪನವರ ಮನೆಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಈಗ ಆ ಪ್ರಯತ್ನವು ಕೂಡ ಇಲ್ಲವಾಗಿದೆ. ಭವಿಷ್ಯಃ ಈಶ್ವರಪ್ಪ ಏನಾದರೂ ಮಾಡಿಕೊಳ್ಳಲಿ ಎಂಬ ಭಾವನೆಗೆ ಬಿಜೆಪಿ ಮುಖಂಡರು ಬಂದಿರುವ ಆಗಿದೆ.
ಈ ಮಧ್ಯೆ ಆಯನೂರು ಮಂಜುನಾಥ್ ಅವರನ್ನು ಮತ್ತೆ ಕೆಣಕ್ಕಿದ್ದಾರೆ. ಅವರು ಚುನಾವಣೆಗೆ ನಿಲ್ಲುವುದಿಲ್ಲ ಅವರೇ ಯಾರದರನ್ನು ಕಳುಹಿಸಿ ಸಂಧಾನಕ್ಕೆ ಹಾದಿ ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಾರೆ ಈಶ್ವರಪ್ಪನವರ ಅಂತಿಮ ತೀರ್ಮಾನ ಶಿವಮೊಗ್ಗದ ರಾಜಕಾರಣದ ಮಟ್ಟಿಗೆ ಒಂದು ಮಹತ್ವದ ತಿರುವು ಎನ್ನಬಹುದಾಗಿದೆ.