ಶಿವಮೊಗ್ಗ, ಮಾರ್ಚ್ 07:): ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ಮಾ.10 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ

“ಶರಾವತಿನಗರ ಎ ಬ್ಲಾಕ್ ನರ್ಸ್ ಕ್ವಾಟ್ರಸ್, ಆದಿಚುಂಚನಗಿರಿ ಶಾಲೆ ಹತ್ತಿರ, ಕೆನರಾ ಬ್ಯಾಂಕ್ ಹತ್ತಿರ ಕಾಶೀಪುರ ಸರ್ಕಲ್,

ಚನ್ನಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಮಲವಗೊಪ್ಪ, ಅಶೋಕನಗರ ನಂದಿನಿ ಬೂತ್ ಹತ್ತಿರ, ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಹತ್ತಿರ ಕೆ.ಆರ್.ಪುರಂ ರಸ್ತೆ” ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು

ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

By admin

ನಿಮ್ಮದೊಂದು ಉತ್ತರ

error: Content is protected !!