ಶಿವಮೊಗ್ಗ,ಮಾ.೬: ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ್ ಅಕ್ಕಿ ಯೋಜನೆಗೆ ಇಂದು ವಿನೋಬನಗರದ ಶಿವಾಲಯದ ಆವರಣದಲ್ಲಿ ನಡೆಯುತ್ತಿರುವ ಧರ್ಮಸಭೆ ಕಾರ್ಯಕ್ರಮದಲ್ಲಿ ಉಜ್ಜಯಿನಿಯ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವಾತ್ಪಾದರು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆ ಇದು. ಬಡ ಮತ್ತು ಮಧ್ಯಮ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ಪ್ರತಿಯೊಬ್ಬರಿಗೆ ೧೦ ಕೆಜಿ ಅಕ್ಕಿಯನ್ನು ಕೇವಲ ೨೯೦ ರೂ.ಗಳಿಗೆ ನೀಡಲಾಗುತ್ತದೆ. ಒಂದು ಕೆಜಿ ಅಕ್ಕಿಗೆ ೨೯ ರೂ. ಇದೆ. ಇದೇ ಅಕ್ಕಿ ಮಾರುಕಟ್ಟೆಯಲ್ಲಿ ೬೦ ರೂ.ಗೆ ಮಾರಾಟವಾಗುತ್ತದೆ. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಈ ಯೋಜನೆ ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳು ಎಂದರು.


ಶಿವಮೊಗ್ಗಕ್ಕೆ ಪ್ರತಿದಿನ ೧೦ ಲೋಡ್ ಅಕ್ಕಿ ಬರುತ್ತದೆ. ಪ್ರತಿ ಲೋಡ್ ನಲ್ಲಿ ೧೦ ಕೆಜಿಗಳ ೨೫೦೦ ಬ್ಯಾಗ್ ಇರುತ್ತವೆ. ತಮ್ಮ ಮೊಬೈಲ್ ನಂಬರ್ ನೀಡಿ ಅಕ್ಕಿಯನ್ನು ಸಾರ್ವಜನಿಕರು ಖರೀದಿಸಬಹುದು. ಇದಕ್ಕೆ ಯಾವುದೇ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದರು.


ಗರೀಬಿ ಹಠಾವೋ ಎಂಬುದು ಮುಗಿದ ಕತೆ. ಈಗ ಗರೀಬ್ ಕಲ್ಯಾಣ ಯೋಜನೆಯಡಿ ಅಕ್ಕಿ ನೀಡಲಾಗುತ್ತದೆ. ಯಾವುದನ್ನೂ ಉಚಿತವಾಗಿ ಕೊಡ ಬಾರದು ಎಂಬುದು ಮೋದಿ ಅವರ ಉದ್ದೇಶವಾಗಿದೆ. ಬಸವಣ್ಣನವರ ತತ್ವದಂತೆ ಕಾಯಕವೇ ಕೈಲಾಸ. ದುಡಿಮೆಯೇ ಮಾರ್ಗ ಎಂಬುದನ್ನು ಅರಿತು ಅತ್ಯಂತ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ಪಡೆದು ಬಡವರು ಮತ್ತು ಮಧ್ಯಮ ವರ್ಗದವರು ಪ್ರಯೋಜನ ಪಡೆಯವಹುದು ಎಂದರು.
ಈ ಸಂದರ್ಭದಲ್ಲಿ ಬಿಳಕಿ ಶ್ರೀಗಳು, ಕವಲೇದುರ್ಗ ಶ್ರೀಗಳು, ತಾವರೆಕೆರೆ ಶ್ರೀಗಳು,

ಕೋಣಂದೂರು ಶ್ರೀಗಳು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಪ್ರಮುಖರಾದ ಪಟ್ಟಾಭಿರಾಮ್, ಜ್ಯೋತಿ ಪ್ರಕಾಶ್, ಎನ್.ಜೆ. ರಾಜಶೇಖರ್, ಮೋಹನ ರೆಡ್ಡಿ, ಗನ್ನಿ ಶಂಕರ್, ಮಹೇಶ್, ಕಾಂತೇಶ್ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!