ಸಾಗರ : ಜಾತ್ಯಾತೀತ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಕ್ತಿಸಾಗರ ಸಂಗಮ ಶೀರ್ಷಿಕೆಯಡಿ ಮಾಡುತ್ತಿರುವ ಸನ್ಮಾನ ಅತ್ಯಂತ ಪುಣ್ಯದ ಕೆಲಸ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.


ಇಲ್ಲಿನ ಶಾಶ್ವತ ಧ್ವಜಸ್ತಂಭದ ಸಮೀಪ ಸೋಮವಾರ ದೀವರು, ಈಡಿಗರು, ಬಿಲ್ಲವರು, ನಾಮಧಾರಿ ಸೇರಿದಂತೆ ೨೬ ಒಳಪಂಗಡಗಳ ವತಿಯಿಂದ ಶಕ್ತಿಸಾಗರ ಸಂಗಮ ಹೆಸರಿನಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಏರ್ಪಡಿಸಿರುವ ಸನ್ಮಾನ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.


ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಮಠದ ಶ್ರೀಗಳು ಸೇರಿದಂತೆ ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್, ಕುಮಾರ ಬಂಗಾರಪ್ಪ, ಮಾಲಿಕಯ್ಯ ಗುತ್ತೆದಾರ್ ಹೀಗೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಾಲಪ್ಪ ಹರತಾಳು ಅವರು ಹೆಚ್ಚು ಮುತುವರ್ಜಿಯಿಂದ ಕಾರ್ಯಕ್ರಮದ ನೇತೃತ್ವ ವಹಿಸಿ ಸಂಘಟಿಸಿದ್ದಾರೆ. ರಾಜಕೀಯ ಬಣ್ಣ ಇಲ್ಲದೆ ಸ್ವಚ್ಚ ಮನಸ್ಸಿನಿಂದ ಶ್ರೀಗಳ ಸಾನಿಧ್ಯದಲ್ಲಿ

ಯಡಿಯೂರಪ್ಪ ಅವರು ಹಿಂದುಳಿದ ವರ್ಗಕ್ಕೆ ಮಾಡಿರುವ ಕೆಲಸಕಾರ್ಯಗಳನ್ನು ನೆನಪಿಸಿಕೊಳ್ಳುವ ಕೆಲಸ ಇದಾಗಿದೆ. ಕನಿಷ್ಟ ೫೦ಸಾವಿರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.


ಕಾರ್ಯಕ್ರಮದ ನೇತೃತ್ವ ವಹಿಸಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಯಾರ‍್ಯಾರಿಗೆ ಸಹಾಯವಾಗಿದೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬಹುದು. ಇದು ನಮ್ಮ ಸಮಾಜದ ಕಾರ್ಯಕ್ರಮ ಮಾತ್ರ ಅಲ್ಲ.

ಯಡಿಯೂರಪ್ಪ ಅಭಿಮಾನಿಗಳು ಸೇರಿದಂತೆ ಎಲ್ಲ ಜನಾಂಗ ಬಾಂಧವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್, ಡಾ. ರಾಜನಂದಿನಿ, ರಾಜಶೇಖರ ಗಾಳಿಪುರ, ಪ್ರಶಾಂತ್ ಕೆ.ಎಸ್., ಮಧುರಾ ಶಿವಾನಂದ್, ಸವಿತಾ ವಾಸು, ಪ್ರೇಮ ಕಿರಣ್ ಸಿಂಗ್, ಗಣೇಶ ಪ್ರಸಾದ್ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!