ಶಿವಮೊಗ್ಗ, ಮಾ.2:
ನಮ್ಮ ಗ್ಯಾರಂಟಿಗಳ ನಡುವೆ ಬಿಜೆಪಿಯ ಧರ್ಮ ಹಾಗೂ ಭಾವನೆ ಆಟ ಏನು ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದಿಲ್ಲಿ ತಿಳಿಸಿದರು.
ಇಂದು ಅವರು ಇಂದು ಮಧ್ಯಾಹ್ನ ತಮ್ಮ ಜನುಮದಿನದ ನಿಮಿತ್ತ ನಡೆದ ಕಾರ್ಯಕರ್ತರ ಸಭೆಯ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಈ ಬಿಜೆಪಿಯವರಿಗೆ ಚುನಾವಣೆ ಹೊತ್ತಿನಲ್ಲಿ ಮಾತ್ರ ಧರ್ಮ ಹಾಗೂ ಭಾವನಾತ್ಮಕ ವಿಷಯ ನೆನಪಾಗುತ್ತದೆ. ನಾವು ಗ್ಯಾರಂಟಿ ನೀಡುವ ಭರವಸೆ ನೀಡಿದ್ದ ಪ್ರಣಾಳಿಕೆ ಹಾಗೂ ಅದನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ
ಬಂದ ತಕ್ಷಣ ಜಾರಿಗೆ ತಂದ ಬಗೆಯಿಂದ ಜನರಿಗೆ ನಮ್ಮ ಮೇಲೆ ನಂಬಿಕೆ ಹೆಚ್ಚಾಗಿದೆ. ಹಾಗಾಗಿ ನಮ್ಮ ಗ್ಯಾರಂಟಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಮಾತೆಯರು ಅಧಿಕಾರ ಹಿಡಿಯುವಂತೆ ರೂಪಿಸಿದ್ದಾರೆ. ನಾವು ಅವರಿಗೆ ಮಾತು ಕೊಟ್ಟಂತೆ ಗ್ಯಾರಂಟಿಗಳನ್ನು ನೀಡಿದ್ದೇವೆ. ಬಹುತೇಕ ಗ್ಯಾರಂಟಿಗಳು ಈಗಲೂ ಬಿಜೆಪಿ ನಾಯಕರ ಮನೆಯ ಕೆಲಸದವರು,ಹಾಗೂ ಇತರರಿಗೂ ದಕ್ಕುತ್ತಿವೆ ಎಂಬುದನ್ನು ಅವರು ಒಮ್ಮೆ ಗಮನಿಸಲಿ ಎಂದು ತಿಳಿಸಿದರು.
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ನಾವು ಈಗಾಗಲೇ ಸಾಕಷ್ಟು ತಯಾರಿಗಳನ್ನು ಮಾಡಿದ್ದೇವೆ. ನನ್ನ ಸಹೋದರಿ ಹಾಗೂ ಮಾತೃ ಸ್ವರೂಪಿ ಗೀತಾ ಅವರು ಈಗಾಗಲೇ ಇದಕ್ಕೆ ಬೇಡಿಕೆ ನೀಡಿದ್ದಾರೆ. ಪಕ್ಷದ ಹೈಕಮಾಂಡ್ ಯಾರಿಗೆ ಸೂಚಿಸಿದರೂ ನಾವೆಲ್ಲರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ಪ್ರತಿ ಕಾರ್ಯಕರ್ತನೂ ಇಲ್ಲಿ ಅಭ್ಯರ್ಥಿಯಾಗಿ ಕೆಲಸ ಮಾಡುತ್ತಾನೆ ಎಂದು ಹೇಳಿದರು.
ಅಭಿವಂದನೆಗಳು
ನನ್ನ ಜನ್ಮದಿನವನ್ನು ಹಿಂದಿನಿಂದಲೂ ಸಾವಿರಾರು ಜನರ ಆಶೀರ್ವಾದದಲ್ಲಿ ನಡೆಸಲಾಗಿದೆ. ಈ ಬಾರಿ ಸಚಿವನಾದ ನಂತರ ನನ್ನ ತಂದೆ ತಾಯಿ ಸಮನಾಗಿ ನೋಡಿಕೊಳ್ಳುವ ಅಕ್ಕಂದಿರು ಹಾಗೂ ಭಾವಂದಿರ ಆಶೀರ್ವಾದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ನನ್ನನ್ನು ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು ಎಲ್ಲ ಕಾರ್ಯಕರ್ತರು ಆತ್ಮೀಯವಾಗಿ ಶುಭ ಹಾರೈಸಿದ್ದೀರಿ ನಿಮಗೆ ಧನ್ಯವಾದಗಳು ಎಂದರು.
ಶಿವಣ್ಣ ಸ್ಪರ್ಧಿಸುವುದು ಇಲ್ಲ ಎಂದು ಈಗಾಗಲೇ ನಾವು ಹೇಳಿದ್ದೇವೆ ಹಿಂದೆ ಇದೆ ವಿಷಯವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಹೇಳಿದ್ದರು. ಅವರ ಅನಿಸಿಕೆ ಅದಾಗಿದ್ದು, ಅವರ ಪತ್ನಿ ಹಾಗೂ ನನ್ನ ಅಕ್ಕ ಸ್ಪರ್ಧಿಸುವ ಇಂಗಿತಕ್ಕೆ ಶಿವಣ್ಣ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ನಟ ಹಾಗೂ ಮಧು ಅವರ ಭಾವ ಶಿವರಾಜ್ ಕುಮಾರ್, ಅಕ್ಕ ಗೀತಾ ಶಿವ ರಾಜಕುಮಾರ್ ಪಕ್ಷದ ಪ್ರಮುಖರಾದ ಎಮ್ ಶ್ರೀಕಾಂತ್ ಹೇಳಿದಂತೆ ಗಣ್ಯರು ಉಪಸ್ಥಿತರಿದ್ದರು.