ಹೊಸನಗರ; ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಈಡೇರಿಸುವ ಮೂಲಕ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದೆ ನಾನು ನಿಮಗೆ ನೀಡಿರುವ ಆಶ್ವಾಸನೆಯೊಂದಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ

ಜನ ನಾಯಕನಾಗಿ ಕೆಲಸ ಮಾಡುವುದಕ್ಕಿಂತ ಜನರ ಸೇವಕನಾಗಿ ೪ವರ್ಷಗಳ ಕಾಲ ಸೇವೆ ಮಾಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.


ತಾಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟೆಮಲ್ಲಪ್ಪದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕೈ ಗೊಂಡಿರುವ ಕುಡಿವ ನೀರಿನ ಕಾಮಗಾರಿಗೆ ಅವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.


ಹಿಂದೆ ರಾಜಕೀಯ ವಿರೋಧಿಗಳು ಗ್ಯಾರೆಂಟಿ ಯೋಜನೆಗಳ ಕುರಿತು ಅಪಹಾಸ್ಯ ಮಾಡಿದ್ದರು. ಆದರೆ ರಾಜ್ಯ ಸರಕಾರಿ ಈಗಾಗಲೇ ೫ ಗ್ಯಾರೆಂಟಿಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದೆ. ತೀರಾಕಡಿಮೆ ಸಂಖ್ಯೆಯ ಜನತೆ ಇನ್ನೂಇದರ ಲಾಭ ಪಡೆಯಲು ಆಗದಿರಬಹುದು. ಆದರೆಒಟ್ಟಾರೆಯಾಗಿ ಯೋಜನೆಗಳು ಯಶಸ್ವಿಯಾಗಿದ್ದು, ಜನಮನ್ನಣೆಗೆ ಪಾತ್ರವಾಗಿದೆ.

ಆರ್ಥಿಕವಾಗಿ ಹಿಂದುಳಿದ, ಅಸಂಘಟಿತ ವಲಯದ ಅದೆಷ್ಟೋ ಕುಟುಂಬಗಳಿಗೆ ಯೋಜನೆಗಳಿಂದ ಪ್ರಯೋಜನೆ ಪಡೆದಿರುವುದು ಸರಕಾರದ ಸಾಧನೆಯಾಗಿದೆಎಂದರು.


ಹೊಸನಗರತಾಲೂಕಿಗೆ ಮುಂದಿನ ವರ್ಷದ ಹೊತ್ತಿಗೆಕುಡಿವ ನೀರಿಗೆ ಪ್ರತ್ಯೇಕ ವ್ಯವಸ್ಥೆಜಾರಿಯಾಗಲಿದೆ. ಚಕ್ರಾ ನಗರದಜಲಾಶಯದಿಂದ ನೀರು ಸರಬರಾಜು ಮಾಡುವಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ಇದೊಂದು ವರ್ಷ ನೀರಿನ ಸಮಸ್ಯೆ ಸ್ವಲ್ಪ ಸಮಸ್ಯೆಯಾಗಬಹುದು. ಜನತೆ ಕೊಂಚ ಸುಧಾರಿಸಿಕೊಳ್ಳಬೇಕು ಎಂದುಅವರು ಮನವಿ ಮಾಡಿದರು.


ಗ್ರಾಪಂಅಧ್ಯಕ್ಷ ಮಂಜುನಾಥ್‌ಕೆ.ಆರ್. ತಹಶೀಲ್ದಾರ್ ಶ್ರೀಮತಿ ರಶ್ಮೀ ಹಾಲೇಶ್, ಸದಸ್ಯ ವಾಟಗೋಡು ಸುರೇಶ್, ಬಗರ್‌ಹುಕುಂ ಸಮಿತಿ ಸದಸ್ಯೆ ಸಾಕಮ್ಮ ಮನೋಹರ, ಸರ್ಕಲ್ ಇನ್ಸ್‌ಪೇಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ಬಿಇಓ ಕೃಷ್ಣಮೂರ್ತಿ,

ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ತಾಲೂಕು ಪಂಚಾಯಿತಿ ಇಓ ನರೇಂದ್ರಕುಮಾರ್, ತಹಸೀಲ್ದಾರ್ ರಶ್ಮಿ ಹಾಲೇಶ್ ಸದಸ್ಯರಾದ ಸಂತೋಷ್ ಮಳವಳ್ಳಿ, ಮತ್ತಿತರರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!