ಶಿವಮೊಗ್ಗ, ಮಾ. 01:
ಸ್ಬೂಡಾ ಅಧ್ಯಕ್ಷ ಸ್ಥಾನವನ್ನು, ನನಗೆ ಕಾಂಗ್ರಸ್ ಪಕ್ಷದ ಹೈಕಮಾಂಡ್ ನೀಡಿರುವುದು ಸಂತೋಷ ತಂದಿದೆ ಎಂದು ನೂತನ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಹೇಳಿದರು.
ಅವರಿಂದು ಅಧಿಕಾರ ಸ್ವೀಕರಿಸಿ ಅಪಾರ ಅಭಿಮಾನಿಗಳ ಹಾಗೂ ಮುಖಂಡರಿಂದ ಗೌರವ ಸ್ವೀಕರಿಸಿ “ತುಂಗಾತರಂಗ ದಿನಪತ್ರಿಕೆ” ಯೊಂದಿಗೆ ಮಾತನಾಡುತ್ತಿದ್ದರು.
ಶಿವಮೊಗ್ಗ-ಭದ್ರಾವತಿ ನಗರದ ಸಾಮಾನ್ಯ ಜನರ ಒಳಿತಿಗಾಗಿ ಅವರಿಗೆ ಗೂಡುಕಟ್ಟಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ. ಯಾವುದೇ ಲೋಪಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಇನ್ನಷ್ಟು ಮಹತ್ತರ ಹುದ್ದೆಯ ಆಕಾಂಕ್ಷೆ ಇತ್ತಾ? ಎಂದು ಕೇಳಿದ ಪ್ರಶ್ನೆಗೆ ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು, ಪಕ್ಷಕ್ಕಾಗಿ ಮೀಸಲಾಗಿದ್ದೇನೆ. ಪಕ್ಷದ ಹೈಕಮಾಂಡ್ ನನಗೆ ಇಂತಹದ್ದೊಂದು ಜವಾಬ್ದಾರಿ ನೀಡಿದೆ. ಅದನ್ನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜನರ ಸೇವೆಗೆ ಅಣಿಯಾಗುವೆ ಎಂದರು.